ಶಿಗ್ಗಾವಿಯ ವಿನಾಯಕ ನಗರದ ವೈ.ಸಿ. ಶಿರೂರ, ಪ್ರಭಾಕರ ಬಡಿಗೇರ, ಕೆ.ಕೆ. ಪತ್ತಾರ ಹಾಗೂ ಅನ್ನಪೂರ್ಣ ಚಾಕಲಬ್ಬಿ ಅವರಿಗೆ ಭಾವಪೂರ್ಣ ಸೇವಾ ನಿವೃತ್ತಿ ಸನ್ಮಾನ

ಶಿಗ್ಗಾವಿಯ ವಿನಾಯಕ ನಗರದ ವೈ.ಸಿ. ಶಿರೂರ, ಪ್ರಭಾಕರ ಬಡಿಗೇರ, ಕೆ.ಕೆ. ಪತ್ತಾರ ಹಾಗೂ ಅನ್ನಪೂರ್ಣ ಚಾಕಲಬ್ಬಿ ಅವರಿಗೆ ಭಾವಪೂರ್ಣ ಸೇವಾ ನಿವೃತ್ತಿ ಸನ್ಮಾನ Emotional retirement felicitations to Y.C. Shiroor, Prabhakar Badigera, K.K. Pattara and Annapurna C

ಲೋಕದರ್ಶನ ವರದಿ 

ಶಿಗ್ಗಾವಿ 16 : ಪಟ್ಟಣದ ವಿನಾಯಕ ನಗರದ ಸ್ನೇಹ ಬಳಗ ಹಾಗೂ ಲಕ್ಷ್ಮೀ ಬಳಗದ ಆಶ್ರಯದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸುದೀರ್ಘ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ವೈ.ಸಿ. ಶಿರೂರ, ಪ್ರಭಾಕರ ಬಡಿಗೇರ, ಕೆ.ಕೆ. ಪತ್ತಾರ ಹಾಗೂ ಅನ್ನಪೂರ್ಣ ಚಾಕಲಬ್ಬಿ ಅವರುಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಪಟ್ಟಣದ ವಿನಾಯಕ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ "ಸೇವಾ ನಿವೃತ್ತಿ ಸಂದರ್ಭದ ಆತ್ಮೀಯತೆಯ ನೆನಪು" ಸನ್ಮಾನ ಸಮಾರಂಭದಲ್ಲಿ ಶಿಕ್ಷಣ, ಕಲೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಗಣ್ಯರು ಸನ್ಮಾನ ಸ್ವೀಕರಿಸಿ ತಮ್ಮ ಸುದೀರ್ಘ ಸೇವಾ ಜೀವನದ ಸಾರ್ಥಕ ಅನುಭವಗಳನ್ನು ಹಂಚಿಕೊಂಡರು. 

ಶ್ರೀ ವೈ.ಸಿ. ಶಿರೂರ ಅವರು ಶಿಕ್ಷಕರಾಗಿ ಬಳ್ಳಾರಿ ಮತ್ತು ಸವಣೂರುಗಳಲ್ಲಿ ತಮ್ಮ ಸುದೀರ್ಘ ಸೇವೆಯನ್ನು ಸಲ್ಲಿಸಿದವರಾಗಿದಿದು, ಪ್ರಭಾಕರ ಬಡಿಗೇರ ಮತ್ತು ಕೆ.ಕೆ. ಪತ್ತಾರ ದಂಪತಿಗಳಲ್ಲಿ ಪ್ರಭಾಕರ ಬಡಿಗೇರ ಅವರು ಶಿಕ್ಷಕರಾಗಿ ಹಾಗೂ ಹೆಸರಾಂತ ತಬಲಾ ವಾದಕರಾಗಿ ಬಹುಮುಖ ಪ್ರತಿಭೆ ಹೊಂದಿದವರಾಗಿದ್ದು, ಅವರ ಶ್ರೀಮತಿ ಕೆ.ಕೆ. ಪತ್ತಾರ ಅವರು ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ಈ ತಿಂಗಳ ಕೊನೆಯಲ್ಲಿ ನಿವೃತ್ತಿ ಹೊಂದಲಿದ್ದಾರೆ. ಅನ್ನಪೂರ್ಣ ಚಾಕಲಬ್ಬಿ ಅವರು ಆರೋಗ್ಯ ಕ್ಷೇತ್ರದಲ್ಲಿ 38 ವರ್ಷಗಳ ಕಾಲ ಸುದೀರ್ಘ ಹಾಗೂ ಕರುಣಾಮಯಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. 

ಕಾರ್ಯಕ್ರಮದಲ್ಲಿ ಎಸ್‌.ಎನ್‌.ಸಿಂಧೆ, ಟಿ.ಎಂ.ಗೌರಿಮಠ, ರವಿ, ಆರ್‌.ಎನ್‌.ಬೂಸನಗೌಡ್ರ, ಎಮ್‌.ಆರ್‌.ಚೂರಿ, ರವಿ ದುಂದೂರ, ಎಂ.ಬಿ.ಕಾಣನ್ನವರ, ವಾಯ್‌.ಎಚ್‌.ಮೇಕಳಿ, ರಾಮಚಂದ್ರ ಧಾರವಾಡ, ಎನ್‌.ಎಂ.ನದಾಫ್, ಪ್ರಕಾಶ ಬಿ.ಎಸ್, ನಾಗರಾಜ ಲಮಾಣಿ, ಚಂದ್ರು ದೊಡ್ಡಮನಿ, ರಾಜು ಪಾಟೀಲ, ಸಂಜು ಈಶಾಪೂರ, ಗುಡಿಸಾಗರ, ರಾಘವೇಂದ್ರ ದಾಸರ, ಸಿ.ಎನ್‌.ಕಲಕೋಟಿ, ಸಿರಾಜ ಮುಲ್ಲಾ ಮತ್ತು ಲಕ್ಷ್ಮೀ ಬಳಗದ ಮಹಿಳಾ ಸದಸ್ಯರು ಇತರರಿದ್ದರು.