ಚೌಡಯ್ಯನವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಬಾಗಲಕೋಟೆ21: ನಿಜಶರಣ ಅಂಬಿಗರ ಚೌಡಯ್ಯನವರ ನಡೆ ನುಡಿ, ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಾಲೂಕಾ ಪಂಚಾಯತ ಅಧ್ಯಕ್ಷ ಚನ್ನನಗೌಡರ ಪರನಗೌಡರ ತಿಳಿಸಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿ ಅವರ ಭಾವಚಿತ್ರಕ್ಕೆ ಪುಷ್ಪ ಅಪರ್ಿಸಿ ಮಾತನಾಡಿದ ಅವರು ದಿನನಿತ್ಯದ ಕಾರ್ಯಗಳಲ್ಲಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದರು.

ಶರಣರು ಯಾವುದೇ ಒಂದೇ ಜಾತಿಗೆ ಸೀಮಿತರಾದವರಲ್ಲ. ಜಾತಿಗಳ ಆಚೆಗೆ ನಿಂತು ಸಮಾಜದ ಅಂಕುಕೊಂಕುಗಳನ್ನು ತಿದ್ದಿದವರು. ಸಮಾಜ ಕಲ್ಯಾಣಕ್ಕಾಗಿ ಹಂಬಲಿಸಿದ ಯಾವುದೇ ಶರಣರನ್ನು ಜಾತಿ ವಲಯದಿಂದ ನೋಡದೇ ಅವರು ಪ್ರತಿಪಾತಿಸಿದ ತತ್ವ, ಸಿದ್ದಾಂತ ಹಾಗೂ ಮಾನವೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಬಸವಾದಿ ಶಿವಶರಣರಲ್ಲಿ ಅಂಬಿಗರ ಚೌಡಯ್ಯ ಪ್ರಮುಖ ವಚನಕಾರಾಗಿದ್ದು, ನೇರವಾಗಿ ನಿಷ್ಠುರವಾಗಿ ಹೇಳುತ್ತಿದ್ದರು ಎಂದರು. ಸಮುದಾಯದವರು ಆಥರ್ಿಕವಾಗಿ ಹಿಂದುಳಿದಿದ್ದು, ಸರಕಾರ ಎಲ್ಲರಿಗೂ ಸೌಲಭ್ಯ ನೀಡುತ್ತಿದೆ. ತಮ್ಮ ಮಕ್ಕಳಿಗೆ ಒಳ್ಳೇಯ ಶಿಕ್ಷಣ ಹಾಗೂ ಸಂಸ್ಕೃತಿ ನೀಡುವ ಕೆಲಸವಾಗಬೇಕು.  

ಉಪನ್ಯಾಸಕರಾಗಿ ಆಗಮಿಸಿದ್ದ ಗದಗನ ಚಿಕ್ಕಟ್ಟಿ ಪಿ.ಯು ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ.ಎಚ್.ಎಸ್.ದಳವಾಯಿ ಮಾತನಾಡಿ ಅಂಬಿಗರ ಚೌಡಯ್ಯನವರು ಸರಳ ಬದುಕಿಗೆ ಹೆಸರಾದವರು. ನುಡಿದಂತೆ ನಡೆದ, ಸಮಾಜದ ಬದಲಾವಣೆಗೆ, ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ. ತಮ್ಮ ವಚನಗಳ ನೇರ ನುಡಿಯಿಂದಾಗಿ ದಿಟ್ಟ ಶರಣರಾಗಿದ್ದರು. ಜೀವನದ ರೀತಿ, ನೀತಿಗಳನ್ನು ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ದೋಣಿ ನಡೆಸುತ್ತಾ ಅಂಬಿಗನಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು. 

     ಇಡೀ ಮಾನವನ ಜನಾಂಗಕ್ಕೆ ಒಳ್ಳೆಯತನದಿಂದ ಬದುಕು, ಚಿಂತನೆ, ವಿಚಾರ, ಕೆಲಸ ಕಾರ್ಯಗಳ ಹಾಗೂ ವಾಸ್ತವದ ಬದುಕನ್ನು ಸಹ ತಮ್ಮ ವಚನಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಡಾಂಬಾಚಾರಿ ಜೀವನವಾಗಬಾರದು ವಾಸ್ತವದ ನೆಲೆಯಲ್ಲಿ ಜೀವನ ಸಾಗಿಸಬೇಕು ಎಂದು ತಿಳಿಸಿದ ಅವರು ಶರಣರ ಪಂಕ್ತಿಯಲ್ಲಿ ದಿಟ್ಟತನದಿಂದ ನೇರವಾಗಿ ಮಾತನಾಡಿದವರು ಅಂಬಿಗರ ಚೌಡಯ್ಯನವರು. ತನ್ನ ಹರಿತವಾದ ವಚನ ಸಾಹಿತ್ಯದೊಂದಿಗೆ ನೇರ ನುಡಿಗಳ ವಚನಕಾರನಾಗಿದ್ದರು ಎಂದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗಿರಮಾ ಪನ್ವಾರ, ತಹಶೀಲ್ದಾರ ಗುರುಬಸಯ್ಯ ಹಿರೇಮಠ, ಸಮಾಜದ ಮುಖಂಡರದಾದ ಯಲ್ಲಪ್ಪ ಅಂಬಿಗೇರ, ಶ್ರೀಕಾಂತ ಕಟ್ಟಿಮನಿ, ರಾಮಣ್ಣ ಕಟ್ಟಿಮನಿ, ಯಲ್ಲಪ್ಪ ಯಡಹಳ್ಳಿ, ಸಂಗಪ್ಪ ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಬಸವರಾಜ ಶಿರೂರ ಸ್ವಾಗತಿಸಿ ಕೊನೆಗೆ ವಂದಿಸಿದರು.