ಚೌಡಯ್ಯನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ

ಲೋಕದರ್ಶನ ವರದಿ

ಅಥಣಿ: ನಿಜಶರಣ ಅಂಬಿಗರ ಚೌಡಯ್ಯನವರ ತತ್ವಾದರ್ಶಗಳನ್ನು ಹಾಗೂ ವಚನ ಸಾಹಿತ್ಯವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆದರೆ ಮಾತ್ರ ಮಾನವ ಜನ್ಮ ಸಾರ್ಥಕ ಎಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಬೆಳಗಾವಿ ಜಿಲ್ಲಾಧ್ಯಕ್ಷ ಅಬ್ದುಲಜಬ್ಬಾರ ಚಿಂಚಲಿ ಹೇಳಿದರು 

ಅವರು ಪಟ್ಟಣದ ಗಸ್ತಿ ಗಲ್ಲಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ವತಿಯಿಂದ ಅಂಬಿಗರ ಚೌಡಯ್ಯನವರ ಜಯಂತೋತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಅಂಬಿಗರ ಚೌಡಯ್ಯ ಅವರು ಕೇವಲ ಒಂದು ಜಾತಿ ಕುಲಕ್ಕೆ ಸಮುದಾಯಕ್ಕೆ ಸೀಮಿತವಾದವರಲ್ಲ ಜಾತ್ಯತೀತ ಧಮರ್ಾತೀತ ಮತಾತೀತ ಸಮಾಜ ನಿಮರ್ಾಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಅಪಾರವಾಗಿದ್ದು ನೇರ ನಿಷ್ಠುರವಾದಿಗಳಾದ ಅಂಬಿಗರ ಚೌಡಯ್ಯನವರು ಕಾಯಕದಲ್ಲಿ ನಿಜ ದೇವರು ಕಾಣುತ್ತಾ ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದ ಮಹಾನ್ ಮಾನವತಾವಾದಿ ತಮ್ಮ ವಿಶಿಷ್ಟ ಹಾಗು ವಿಭಿನ್ನ ನಿಲುವುಗಳಿಂದ ಪ್ರಸಿದ್ದರಾದವರು ಯಾವ ಕಾಯಕವೂ ಮೇಲಲ್ಲ ಯಾವ ಕಾಯಕವೂ ಕೀಳಲ್ಲ ಎಲ್ಲವೂ ಸಮಾನ ಎಂದು ವೃತ್ತಿ ಗೌರವವನ್ನು ಎತ್ತಿ ಹಿಡಿದವರು ಅಂತಹ ಮಹಾನ್ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳನ್ನು ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ನಾವು ನಮ್ಮ ಸಂಸ್ಕೃತಿ ಪರಂಪರೆಯನ್ನು ಅರಿತು ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು  

ಈ ಸಂದರ್ಭದಲ್ಲಿ ಯುವಕ ಸಂಘದ, ಕುಮಾರ ಕೋಳಿ, ರಮೇಶ ಗಸ್ತಿ, ಮಹಾಂತೇಶ ಗಸ್ತಿ, ಶಿವು ಗಸ್ತಿ, ಮುತ್ತು ಗಸ್ತಿ, ರೋಹನ ಗಸ್ತಿ, ಇಮ್ತಿಯಾಜ ಹಿಪ್ಪರಗಿ, ಮುರುಗೇಶ ಕೋಳಿ, ಅನಿಲ ಗಸ್ತಿ,  ಸುನಿಲ ಗಸ್ತಿ, ಮುರುಗೇಶ ಗಸ್ತಿ,  ಶ್ರೀಕಾಂತ ಗಸ್ತಿ, ಸುವಣರ್ಾ ಕೋಳಿ, ರಾಧಿಕಾ ಗಸ್ತಿ, ಯಲವ್ವಾ ಗಸ್ತಿ, ನೀಲವ್ವಾ ಗಸ್ತಿ, ರಾಜಶ್ರೀ ಬಸರಗಿ, ಸೇರಿದಂತೆ ಇನ್ನು ಹಲವರು ಸಮಾಜದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.