ಶಿಗ್ಗಾವಿ19 ಃ ಇತ್ತೀಚೆಗೆ ತಾಲೂಕಿನಲ್ಲಿ ಬಿದ್ದ ಅರ್ಹ ಮನೆಯ ಫಲಾನುಭವಿಗಳ ಅಕೌಂಟ್ ಅನ್ನು ತಡೆಹಿಡಿದಿದ್ದು ಇದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಕೂಡಲೇ ತಡೆಹಿಡಿದಿರುವುದನ್ನ ಬಿಡುಗಡೆ ಮಾಡಿ ಮನೆಗಳನ್ನು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿ ರಾಜ್ಯ ಜೀತದಾಳು ಮತ್ತು ಕೃಷಿ ಹಾಗೂ ಕಟ್ಟಡ ಕಾಮರ್ಿಕರ ಒಕ್ಕೂಟದ ವತಿಯಿಂದ ತಹಸೀಲ್ದಾರರಿಗೆ ಮನವಿ ಅಪರ್ಿಸಲಾಯಿತು.
ಬಿದ್ದ ಮನೆಗಳಿಗೆ ಬಿ ಕೆಟಗರಿಯಲ್ಲಿ ಮನೆ ಕಟ್ಟಿಕೊಳ್ಳಲು ಆದೇಶ ಪ್ರತಿ ಈಗಾಗೇ ನೀಡಲಾಗಿದೆ ಜೊತೆಗೆ ಅದರ ಒಂದು ಕಂತಿನ ಹಣವನ್ನು ನೀಡಲಾಗಿದೆ, ಮನೆ ಕಟ್ಟಿಕೊಳ್ಳಲು ತಯಾರಾದ ಫಲಾನುಭವಿಗಳು ಮುಂದಿನ ಹಂತದ ಹಣದ ಬರುವಿಕೆಗಾಗಿ ಕಾದು ಸುಸ್ತಾಗಿ ವಿಚಾರಿಸಲಾಗಿ ಅರ್ಹ ಫಲಾನುಭವಿಗಳ ಅಕೌಂಟ್ ತಡೆ ಹಿಡಿದಿರುವುದು ಬೆಳಕಿಗೆ ಬಂದಿದ್ದು, ಬಿ ಕೆಟಗರಿಯ ಫಲಾನುಭವಿಗಳನ್ನ ಸಿ ಎಂದು ನಮೂದಿಸಿ ಬ್ಲಾಕ್ ಲಿಷ್ಟ್ಗೆ ಸೇರಿಸಿರುವುದು ನಿಜವಾದ ನಿರಾಶ್ರಿತ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ ಇದು ಒಂದು ಎರಡು ಮನೆಗಳ ಸಮಸ್ಯೆಯಲ್ಲ ತಾಲೂಕಿನಲ್ಲಿ ಇಂತಹ ಸಮಸ್ಯೆಗಳು ಬಹಳ ಇದ್ದು ಕೂಡಲೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅನುಕೂಲ ಮಾಡಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಲಿದ್ದಾರೆ.
ಈ ಸಂದರ್ಭದಲ್ಲಿ ಜೀವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ಡಿಎಸ್ಎಸ್ ಜಿಲ್ಲಾ ಮುಖಂಡ ಅಶೋಕ ಕಾಳೆ, ಕನರ್ಾಟಕ ಭೀಮಸೇನೆ ಸಮೀತಿ ತಾಲೂಕಾದ್ಯಕ್ಷ ಮಂಜುನಾಥ ಇಂಗಳಗಿ, ಮನೋಜ ಹರಿಜನ, ಮಂಜುನಾಥ ಕಟ್ಟಿಮನಿ, ಮಾರುತೆಪ್ಪ ಹರಿಜನ ಸೇರಿದಂತೆ ಸಾರ್ವಜನಿಕರು ಇದ್ದರು.