ಚಾಮರಾಜನಗರ, ಫೆ 29 : ವಿದ್ಯುತ್ ಬೇಲಿ ತುಳಿದು ಕಾಡಾನೆಗಳೆರಡು ಸಾವನ್ನಪ್ಪಿರುವ ದಾರುಣ ಘಟನೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಕರುಳವಾಡಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಆಹಾರ ಅರಸಿ ಬಂದ ಆನೆಗಳು ಜಮೀನಿಗ ಅಳವಡಿಸಿದ್ದ ವಿದ್ಯುತ್ ಬೇಲಿ ಸ್ಪರ್ಷಿಸುತ್ತಿದ್ದಂತೆಯೇ ಮೃತಪಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಎರಡೂ ಗಂಡಾನೆಗಳು 30 ರಿಂದ 40ರ ವಯೋಮಾನದವು ಎಂದು ಅಂದಾಜಿಸಲಾಗಿದೆ. ಶನಿವಾರ ಬೆಳಿಗ್ಗೆ ಗ್ರಾಮಸ್ಥರಿಗೆ ಎರಡೂ ಆನೆಗಳ ಮೃತ ದೇಹಗಳು ಕಂಡುಬಂದಿವೆ.
ಘಟನಾ ಸ್ಥಳಕ್ಕೆ ತಮಿಳುನಾಡಿನ ಸತ್ಯಮಂಗಲಂ ಜಿಲ್ಲೆಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.