ಮಹಾಲಿಂಗಪುರ, 22 : ಇತ್ತೀಚೆಗೆ ಎಪಿಎಂಸಿ ಆವರಣದಲ್ಲಿರುವ ದಲಾಲ ವರ್ತಕರ ಭವನದಲ್ಲಿ ಸಭೆ ಸೇರಿದ ಸಂಘದ ಸದಸ್ಯರು ದಲಾಲ ವರ್ತಕರ ಸಂಘದ ನೂತನ ಅಧ್ಯಕ್ಷರನ್ನಾಗಿ ಮಹಾಲಿಂಗಪ್ಪ ಕೋಳಿಗುಡ್ಡ ಹಾಗೂ ಉಪಾಧ್ಯಕ್ಷರನ್ನಾಗಿ ಬಾಲಕೃಷ್ಣ ಮಾಳವದೆ ಅವರನ್ನು ಪುನರಾಯ್ಕೆ ಮಾಡಿದರು.
ಮಹಾಲಿಂಗಪ್ಪ ಕೋಳಿಗುಡ್ಡ ಅವರು ಸತತವಾಗಿ ಐದನೇ ಬಾರಿಗೆ ಅಧ್ಯ-್ಕಕ್ಷರಾಗಿ ಆಯ್ಕೆಯಾಗುತ್ತಿರುವದು ಗಮನಾರ್ಹ ಸಂಗತಿಯಾಗಿದೆ.ಇನ್ನುಳಿದಂತೆ ಕಾರ್ಯದರ್ಶಿಯಾಗಿ ಮಹಾಲಿಂಗಪ್ಪ ನುಚ್ಚಿ,ಖಜಾಂಚಿಯಾಗಿ ಶಿವಾನಂದ ಹುಬ್ಬಳ್ಳಿ ಸದಸ್ಯರಾಗಿ ಚಂದ್ರಶೇಖರ ಗೊಂದಿ,ಗೋವಿಂದ ನಿಂಗಸಾನಿ,ಮಹಾಂತೇಶ ಘಟ್ನಟ್ಟಿ ಆಯ್ಕೆಯಾಗಿದ್ದಾರೆಂದು ಸಂಘದ ಪ್ರಕಟನೆ ತಿಳಿಸಿದೆ.