ಕರ್ನಾಟಕ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘ ಬೆಂಗಳೂರು ಶಾಖೆ ಧಾರವಾಡ ಇವರ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘ ಬೆಂಗಳೂರು ಶಾಖೆ ಧಾರವಾಡ ಇವರ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ Election of the President and office bearers of Karnataka Government Vehicle Drivers Central Associa

ಲೋಕದರ್ಶನ ವರದಿ 

ಧಾರವಾಡ 15: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಧಾರವಾಡ ಸಭಾ ಭವನದಲ್ಲಿ ಜೂನ್ 14, 2026 ರಂದು ಕೇಂದ್ರ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ ಅವರ ನೇತೃತ್ವದಲ್ಲಿ ಧಾರವಾಡ ಜಿಲ್ಲಾ ಕರ್ನಾಟಕ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘಕ್ಕೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.  ಅಧ್ಯಕ್ಷರಾಗಿ ಸಂಜೀವ ಕುಲಕರ್ಣಿ , ಉಪಾಧ್ಯಕ್ಷರಾಗಿ ಮಹೇಶ ಮೋರೆ, ಕಾರ್ಯದರ್ಶಿಯಾಗಿ ಅಬ್ದುಲರೆಹಮಾನ ಜಾಲೇಗಾರ, ಖಜಾಂಚಿಯಾಗಿ ಶ್ರೀಧರ ನಂದೇರ, ಸಹ ಕಾರ್ಯದರ್ಶಿಯಾಗಿ ಹನುಮಂತ ಬಳಗಲಿ, ಸಂಘಟನಾ ಕಾರ್ಯದರ್ಶಿಯಾಗಿ ಶಿವಾನಂದ ಚಟ್ನಾಳ, ಜಿಲ್ಲಾ ಸಂಚಾಲಕರನ್ನಾಗಿ ರಾಜು ಮಿರಜಕರ ಅವರನ್ನು ಜಿಲ್ಲಾ ಘಟಕ ಧಾರವಾಡ ಸರ್ಕಾರಿ ವಾಹನ ಚಾಲಕರ ಸಂಘಕ್ಕೆ ಆಯ್ಕೆ ಮಾಡಲಾಯಿತು. ವಿವಿಧ ಸರ್ಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ವಾಹನ ಚಾಲಕರು ಸಮನ್ವಯದಿಂದ ಕೆಲಸ ನಿರ್ವಹಿಸಬೆಕು ಎಲ್ಲರೂ ಒಗ್ಗೂಡಿ ಸಮಸ್ಯೆಗಳನ್ನು ಬಗೆಹರಿಸಿ ಹಾಗೂ ಸಂಘಟಿಸಿ ಸಂಘವನ್ನು ಬೆಳಸಬೇಕು ಎಂದು ರಾಜ್ಯ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘದ ರಾಜ್ಯಾಧ್ಯಕ್ಷರು ಶ್ರೀನಿವಾಸ ಅವರು ಹೇಳಿದರು.  

ರಾಜ್ಯ ಸರ್ಕಾರಿ ನೌಕರ ಸಂಘ ಧಾರವಾಡ ಜಿಲ್ಲಾಧ್ಯಕ್ಷರಾದ ಎಸ್‌.ಎಫ್‌.ಸಿದ್ಧನಗೌಡರ ಮಾತನಾಡಿ, ಚಾಲಕರುಗಳಿಗೆ ತೊಂದರೆ ಮತ್ತು ಅನ್ಯಾಯವಾದಾಗ ಸರ್ಕಾರಿ ನೌಕರರ ಸಂಘ ಮುಂದೆ ನಿಂತು ಪ್ರತಿಭಟಿಸುತ್ತದೆ. ಸರ್ಕಾರಿ ವಾಹನ ಚಾಲಕರ ಸಂಘ ಬೆಳೆಯಲು ಅಗತ್ಯ ಸಹಕಾರ ನೀಡಿ ಎಲ್ಲ ನೌಕರ ಬಂಧುಗಳೊಂದಿಗೆ ಮುನ್ನಡೆಯುತ್ತೇವೆಂದು ತಿಳಿಸಿದರು. ಮಾಜಿ ಜಿಲ್ಲಾಧ್ಯಕ್ಷರಾದ ಬಿ.ಡಿ.ಅಬ್ಬಿಗೇರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳ್ಳಾರಿ ವಾಹನ ಚಾಲಕರ ಸಂಘದ ಕಾರ್ಯದರ್ಶಿ  ವೇದಮೂರ್ತಿ ಇವರು ವಂದನಾರೆ​‍್ಣ ಮಾಡಿದರು. ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಎಲ್ಲ ಇಲಾಖೆಯ ವಾಹನ ಚಾಲಕರು ಉಪಸ್ಥಿತರಿದ್ದರು.