ಚುನಾವಣಾ ವಿವಾದ : 30 ಕ್ಕೂ ಹೆಚ್ಚು ಬೊಲಿವಿಯನ್ ಪ್ರಾದೇಶಿಕ ಚುನಾವಣಾ ಆಯೋಗದ ಸದಸ್ಯರ ಬಂಧನ

ಮೆಕ್ಸಿಕೊ ನಗರ, ನ 12 :       ಅಕ್ಟೋಬರ್ 20 ರ ವಿವಾದಾತ್ಮಕ ಚುನಾವಣೆಗೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ಬೊಲಿವಿಯಾದ ಪ್ರಾದೇಶಿಕ ಚುನಾವಣಾ ಆಯೋಗಗಳ 30 ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಸುಪ್ರೀಂ ಚುನಾವಣಾ ನ್ಯಾಯಮಂಡಳಿಯ ಸದಸ್ಯರು ಸೇರಿದಂತೆ ಒಟ್ಟು 34 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ . "ಸುಪ್ರೀಂ ಚುನಾವಣಾ ನ್ಯಾಯಮಂಡಳಿಯ ವಿಷಯದಲ್ಲಿ ನಾವು ಲಾ ಪಾಜ್ ನಗರದಲ್ಲಿ ಮೂವರು ಸದಸ್ಯರನ್ನು ಹೊಂದಿದ್ದೇವೆ" ಎಂದು ಬೊಲಿವಿಯಾದ ಅಟಾನರ್ಿ ಜನರಲ್ ಜುವಾನ್ ತಿಳಿಸಿದ್ದಾರೆ. ಕಳೆದ ತಿಂಗಳು, ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನಲ್ಲಿ ಮೊರೇಲ್ಸ್ ಜಯಗಳಿಸಿದರು. ಕಾರ್ಲೊಸ್ ಮೆಸಾ ನೇತೃತ್ವದ ಪ್ರತಿಪಕ್ಷಗಳು ಚುನಾವಣಾ ವಂಚನೆ ಎಂದು ಆರೋಪಿಸಿ ಮತದಾನದ ಫಲಿತಾಂಶವನ್ನು ಗುರುತಿಸಲು ನಿರಾಕರಿಸಿದವು. ಆರ್ಗನೈಸೇಶನ್ ಆಫ್ ಅಮೇರಿಕನ್ ಸ್ಟೇಟ್ಸ್ (ಒಎಎಸ್) ಪ್ರಾಥಮಿಕ ವರದಿಯನ್ನು ಪ್ರಕಟಿಸಿದ್ದು, ಅಕ್ಟೋಬರ್ 20 ರ ಮತದಾನದಲ್ಲಿ ಅಕ್ರಮಗಳು ಕಂಡುಬಂದಿವೆ. ಅಕ್ಟೋಬರ್ ಚುನಾವಣೆಯಲ್ಲಿ ಅವರ ಗೆಲುವಿನ ವಿರುದ್ಧ ಬೃಹತ್ ಪ್ರದರ್ಶನಗಳ ಮಧ್ಯೆ ಮೊರೇಲ್ಸ್ ಭಾನುವಾರ ಪದತ್ಯಾಗ ಮಾಡಿದದರು. ದೇಶದ ಸಶಸ್ತ್ರ ಪಡೆಗಳು ಮತ್ತು ಪೊಲೀಸರು ಅಧ್ಯಕ್ಷರ ರಾಜೀನಾಮೆಗೆ ಆ ಆಗ್ರಹಿಸಿ ಪ್ರತಿಭಟಿಸಿದ್ದರು.