ಏಕ್ ಮುಟ್ಟಿ ಅನಾಜ್, ಸ್ವಚ್ಛೋತ್ಸವ ಅಭಿಯಾನಕ್ಕೆ ಚಾಲನೆ
Ek Mutti Anaj, Swachhotsava campaign launched
ಏಕ್ ಮುಟ್ಟಿ ಅನಾಜ್, ಸ್ವಚ್ಛೋತ್ಸವ ಅಭಿಯಾನಕ್ಕೆ ಚಾಲನೆ
ವಿಜಯಪುರ 24: ಇಂದಿನ ಯುವಕರು ಮೂಬೈಲ್ ಗೀಳು ಬಿಟ್ಟು ದೇಶ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು, ಸ್ವಯಂ ಸೇವೆಯ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಸನ್ನದ್ಧರಾಗಬೇಕಾಗಿದೆ ಎಂದು ವಿಜಯಪುರ ತಾಲೂಕು ಎನ್ ಎಸ್ ಎಸ್ ನೋಡಲ್ ಅಧಿಕಾರಿ ಪ್ರೊ.ರಾಜು ಬಿ. ಕಪಾಲಿ ಹೇಳಿದರು. ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ. ಸಿ. ಪಿ. ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿ, ಎನ್ ಎಸ್ ಎಸ್ 1 ಮತ್ತು 2 ಘಟಕಗಳ ಸಹಯೋಗದಲ್ಲಿ ದಿನಾಂಕ 24-09-2025 ಬುಧವಾರ ದಂದು ಅಯೋಜಿಸಲಾದ “ಏಕ್ ಮುಟ್ಟಿ ಅನಾಜ್ ಮತ್ತು ಸ್ವಚ್ಛೋತ್ಸವ” ಅಭಿಯಾನದಡಿ ರಾಷ್ಟ್ರೀಯ ಎನ್ ಎಸ್ ಎಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಅತಿಥಿಗಳಾಗಿ ಮಾತನಾಡಿದ ಅವರು ವಿದ್ಯಾರ್ಥಿಗಳು ದಿನದ 24 ಗಂಟೆಯೂ ಸದಾ ಸೇವೆಗೆ ಸಿದ್ಧರಾಗಿರಬೇಕು. ಎನ್ ಎಸ್ ಎಸ್ ಎಂಬುದು ಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಇಲ್ಲದ ಶ್ರಮದಾನವಾಗಿದೆ .ಸ್ವಯಂ ಸೇವಕರು ದೇಶದಲ್ಲಿ ನಡೆಯುವ ಪ್ರಕೃತಿ ವಿಕೋಪಗಳು ಮತ್ತು ಅತಿವೃಷ್ಟಿ ಅನಾವೃಷ್ಟಿಯಂತಹ ಸಂಧರ್ಭದಲ್ಲಿ ಸದಾ ಸೇವೆಗೆ ಮುಂದಾಗಬೇಕು ಹಾಗೂ ನಮ್ಮ ಪರಿಸರ ಸಂರಕ್ಷಣೆಯೂ ನಮ್ಮೆಲ್ಲರ ಹೊಣೆಯಾಗಿದೆ. ಎನ್‌ಎಸ್‌ಎಸ್ ಸ್ವಯಂ ಸೇವೆಯ ಮೂಲಕ ಸಾಕಾರಗೊಳಿಸು ಸಾಧ್ಯ. ಆದ್ದರಿಂದ ಇಂದಿನ ಯುವಕರು ಈ ನಿಟ್ಟಿನಲ್ಲಿ ಸ್ವಯಂ ಸೇವೆಗೆ ಮುಂದಾಗಬೇಕು ಎಂದರು. ವಿದ್ಯಾರ್ಥಿಳು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರೊಂದಿಗೆ ಪ್ರಗತಿಪರ ಚಿಂತನೆ ಮಾಡಬೇಕು, ಮೂಬೈಲ್ ಗೀಳು ಬಿಟ್ಟು ನಮ್ಮ ದೇಶದ ಬಗ್ಗೆ ಚಿಂತನೆಗೆ ಮುಂದಾಗಬೇಕು ಎಂದು ಹೇಳಿದರು. ಎನ್‌ಸಿಸಿ ವಿದ್ಯಾರ್ಥಿಗಳು ದೇಶ ಕಾಯುವ ಕಲಸ ಮಾಡುತ್ತಿದ್ದರೆ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ, ಉಪ ಪ್ರಾಚಾರ್ಯ ಡಾ.ಅನೀಲ.ಭೀ.ನಾಯಕ, ಐಕ್ಯೂಎಸಿ ನಿರ್ದೇಶಕ ಡಾ.ಪಿ. ಎಸ್. ಪಾಟೀಲ, ಎನ್ ಎಸ್ ಎಸ್ ಅಧಿಕಾರಳಾದ ಡಾ.ತರನ್ನುಮ್ ಜಬೀನ್ ಖಾನ್,ಡಾ.ಮಿಲನ್ ರಾಠೋಡ್, ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಎನ್ ಎಸ್ ಎಸ್ ಸ್ವಯಂ ಸೇವಕ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ರೂಪಾ ಮೋಟಗಿ ನಿರೂಪಿಸಿದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 