ಕಂಪ್ಲಿಯಲ್ಲಿ ಸಂಭ್ರಮದಿಂದ ಈದ್ ಮಿಲಾದ್ ಆಚರಣೆ

ಕಂಪ್ಲಿಯಲ್ಲಿ ಸಂಭ್ರಮದಿಂದ ಈದ್ ಮಿಲಾದ್ ಆಚರಣೆ  Eid Milad celebrated with enthusiasm in Kampli

ಲೋಕದರ್ಶನ ವರದಿ  

ಕಂಪ್ಲಿ, 26: ಇಸ್ಲಾಂ ಧರ್ಮದ ಸ್ಥಾಪಕ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸ್ಮರಣಾರ್ಥ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಬುಧವಾರ ಪಟ್ಟಣದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.  

ಈದ್ ಮಿಲಾದ್ ಅಂಗವಾಗಿ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ಟ್ರ್ಯಕ್ಟರ್ನಲ್ಲಿ   ಭಾವಚಿತ್ರವನ್ನು ಇರಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.  

ಮೆರವಣಿಗೆಗೆ ಮುಸ್ಲಿಂ ಧರ್ಮಗುರುಗಳಾದ ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಉರುಫ್ ಅಜಂ ಪಾಷಾ ಸಾಹೇಬ್, ಸಜ್ಜಾದೇ ನಶೀನ್ ದಿವಾನಾ ಖಾನಾ ಕಂಪ್ಲಿ ಸೇರಿದಂತೆ ಗಣ್ಯರು ಚಾಲನೆ ನೀಡಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಗುರುಗಳು, ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಉತ್ತಮ ಬದುಕಿಗೆ ಸಾಕ್ಷಿಯಾಗಬೇಕು. ದಾನ ಹಾಗೂ ಧರ್ಮದ ಮೂಲಕ ಬಡವರ ಸಂಕಷ್ಟಗಳಿಗೆ ದಾರೀದೀಪವಾಗಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮಗುರುಗಳಾದ ಸೈಯದ್ ಷಾ ಅಬುಲ್ ತುರಾಬ್ ಖಾದ್ರಿ, ಸೈಯದ್ ಷಾ ಚಾಂದ್ ಪಾಷಾ ಸಾಹೇಬ್, ಡಾ. ನೂರ್ ಸಾಹೇಬ್, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಯು. ಜಹೀರುದ್ದೀನ್, ಉಪಾಧ್ಯಕ್ಷ ಎಂ. ನಾಸೀರುದ್ದೀನ್, ಪದಾಧಿಕಾರಿಗಳಾದ ನೂರ್, ರಾಜಾ, ಅಂಜುಮನ್‌-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ಅಬ್ದುಲ್ ಕರೀಂ (ಲಡ್ಡು), ಈದ್ಗಾ ಕಮಿಟಿ ಅಧ್ಯಕ್ಷ ಎಂ. ಇಸ್ಮಾಯಿಲ್ ಸೇರಿದಂತೆ ಸಮಾಜದ ಮುಖಂಡರಾದ ಮೆಹಮೂದ್, ವಾಹಿದ್, ಜಾಫರ್ ಹಾಗೂ ಎಲ್ಲ ಮೌಲ್ವಿಗಳು, ಮಸೀದಿಗಳ ಮುತವಲ್ಲಿಗಳು, ಹಾಫಿಜ್ಸಾಬ್ಗಳು, ಯುವಕರು, ಮಕ್ಕಳು ಸೇರಿದಂತೆ ಸರ್ವ ಸಮಾಜದವರು ಪಾಲ್ಗೊಂಡಿದ್ದರು.  

ಬಿಗಿ ಪೊಲೀಸ್ ಬಂದೋಬಸ್ತ್‌  ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ತೋರಣಗಲ್ಲು ಡಿವೈಎಸ್ಪಿ ಪ್ರಸಾದ್ ಗೋಕುಲೆ ಹಾಗೂ ಪಿಐ ಕೆ.ಬಿ. ವಾಸುಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.