ಬಹುದಿನಗಳ ರಾಜಾಜಿ ನಗರ ನೀರು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ
Efforts to resolve the long-standing Rajaji Nagar water problem
ವಿಜಯಪುರ 24: ಕಳೆದ ಎರಡು ವರ್ಷಗಳಿಂದ ವಾರ್ಡ ನಂ.29 ರ ರಾಜಾಜಿ ನಗರದ ಬಡಾವಣೆಯಲ್ಲಿ ನೀರು ಪೂರೈಕೆ ಸಮಸ್ಯೆ ವಿಪರೀತ ವಾಗಿ ಜನ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು, ವಾರ್ಡ ಮೆಂಬರ್ ಗೀರೀಶ ಬಿರಾದಾರ ಅವರೊಂದಿಗೆ ನಗರ ನೀರು ಪೂರೈಕೆ ಇಲಾಖೆಯ ಸಹಾಯಕ ಇಂಜನೀಯರ್ ರಾಮರಾವ ರಾಠೋಡ ಅವರೊಂದಿಗೆ ವಾರ್ಡಿನಲ್ಲಿ ಸುತ್ತಾಡಿ ನೀರು ಪೂರೈಕೆ ಸುಸೂತ್ರವಾಗಿ ಸಾಗಲು ವಿಕ್ಷಣೆ ಮಾಡಿದರು.
ರಾಜಾಜಿ ನಗರದ ಜನತೆ ಇದರ ಸಮಸ್ಯೆ ವಾರ್ಡ ಮೆಂಬರ ಗೀರೀಶ ಅವರ ಗಮನಕ್ಕೆ ಹಲವಾರು ಬಾರಿ ತಂದಾಗ ನೀರು ಪೂರೈಕೆಯಲ್ಲಿ ಯಾವ ಭಾಗದಲ್ಲಿ ತೊಂದರೆಯಾಗುತ್ತಿದೆ ಮತ್ತು ಈ ಸಮಸ್ಯೆ ಬಗ್ಗೆ ವಾಲ್ ಇರುವ ಕಡೆ ಗುಂಡಿ ತೋಡಿ ನೋಡಿದರೂ ಇದರ ಸಮಸ್ಯೆ ಕಂಡು ಬಂದಿರಲಿಲ್ಲ.
ನೀರು ಪೂರೈಕೆ ಮುಖ್ಯ ಪೈಪ್ ಎಲ್ಲಿಂದ ಬಂದಿದೆ ಮತ್ತು ಯಾವ ಭಾಗದಲ್ಲಿ ನೀರು ಫೋರ್ಸ ಬರುತ್ತದೆ, ಎಲ್ಲಿಂದ ಬರುವದಿಲ್ಲ ಎಂಬುದರ ಬಗ್ಗೆ ಗುತ್ತಿಗೆದಾರ ಪುಂಡಲೀಕ ಲಮಾಣಿ, ನೀರು ಬಿಡುವ ವಾಲ್‌ಮನ್ ಧನಸಿಂಗ ಲಮಾಣಿ ಅವರೊಂದಿಗೆ ರಾಮನಗರ ಬೈಪಾಸ್ ಹಿಡಿದು ರಾಜಾಜಿನಗರದ ಕೋಟೆ ಗೋಡೆಯವರೆಗೆ ಪರೀಶೀಲನೆ ನಡೆಸಿ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಂಡು ಬೇಗನೇ ಪರಿಹಾರ ಕಾಮಗಾರಿ ಕೈಕೊಳ್ಳುವಂತೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಮಾಹಿತಿ ನೀಡಿದರು.
ರಾಜಾಜಿ ನಗರದ ಬಡಾವಣೆಯ ಜನತೆ ತಮ್ಮ ನೀರಿನ ಸಮಸ್ಯೆ ಕುರಿತು ರಾಮರಾವ ಅವರ ಗಮನಕ್ಕೆ ತಂದಾಗ, ಈ ಸಮಸ್ಯೆ ಪರಿಹರಿಸಲು ಹಲವಾರು ಬಾರಿ ನೋಡಿದ್ದೇನೆ ಈಗ ಸಮಸ್ಯೆಯ ಎಲ್ಲಿದೆ ಎಂದು ಸ್ವಲ್ಪ ಮಟ್ಟಿಗೆ ಅರಿವಾಗಿದೆ. ಅದರ ಕಾರ್ಯವು ಬೇಗನೆ ಪೂರ್ಣಗೊಳಿಸಿ ನೀರಿನ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡುತ್ತಿರುವೆ ಎಂದು ಜನರಿಗೆ ತಿಳಿಹೇಳಿದರು.
ರಾಜಾಜಿ ನಗರದ ಬಡಾವಣೆಯಲ್ಲಿ ಸುಮಾರು ಒಂದು ಗಂಟೆ ಕಾಲ ನಗರ ನೀರು ಪೂರೈಕೆ ಇಲಾಖೆಯ ಸಹಾಯಕ ಇಂಜನೀಯರ್ ರಾಮರಾವ ರಾಠೋಡ ವಾರ್ಡ ನಂ.29 ರ ಮೆಂಬರ್ ಗೀರೀಶ ಬಿರಾದಾರ ಅವರೊಂದಿಗೆ ಸಂಚರಿಸುವಾಗ ಸಿದ್ದಲಿಂಗ ಮನಹಳ್ಳಿ, ಈ ಪೈಪ್ ಲೈನ್ ಯಾವ ರೀತಿ ಹೊಗಿದೆ ಎಂದು ಮಾಹಿತಿ ಇರುವ ಗುತ್ತಿಗೆದಾರ ಪುಂಡಲೀಕ ಲಮಾಣಿ, ನೀರು ಬಿಡುವ ವಾಲ್‌ಮನ್ ಧನಸಿಂಗ ಲಮಾಣಿ ಹಾಗೂ ಜೆಇ ಪಟೇಲ ಮತ್ತು ರಾಜಾಜಿ ನಗರದ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 