ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಶೈಕ್ಷಣಿಕ ಕ್ರಾಂತಿ
Educational Revolution by Srikshetra Dharmasthala Village Development Project
ಯಮಕನಮರಡಿ, 25 : ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಮದ್ಯಮ ವರ್ಗದವರಿಗೆ ಆರ್ಥಿಕ ಸಾಲ ಸೌಲಭ್ಯ ನೀಡಿ ಸ್ವಾಲಂಬನೆ ಬದುಕು ಕಟ್ಟಿಕೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ವತಿಯಿಂದ ಮಾಡಲಾಗುತ್ತಿದೆ ಎಂದು ಶ್ರೀ. ಕ್ಷೇ.ಧ. ಗ್ರಾ ಯೋಜನೆ(ರಿ) ಬೆಳಗಾವಿ ಜಿಲ್ಲಾ ನಿರ್ದೇಶಕರಾದ ಸತೀಶ ನಾಯ್ಕ ಹೇಳಿದರು.
ಸೋಮವಾರ ದಿ. 24ರಂದು ಖಾನಾಪೂರ ತಾಲೂಕಿನ ತೋಲಗಿ ಗ್ರಾಮದ ಶ್ರೀ ಸೋಮಲಿಂಗೇಶ್ವರ ಆಶ್ರಮ ಚಿಕ್ಕಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಯ 2025-26ನೇ ಸಾಲಿನ ಗ್ರಾಮ ಕಲ್ಯಾಣ ಕಾರ್ಯಕ್ರಮದಂತೆ ಖಾನಾಪೂರ ತಾಲೂಕಿನ ತೋಲಗಿಯ ಸೋಮಲಿಂಗೇಶ್ವರ ಸೇವಾ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಡಾ. ವಿ. ವೀರೇಂದ್ರ ಹೆಗಡೆಯವರು 1 ಲಕ್ಷ 50 ಸಾವಿರ ರೂ. ಮಂಜೂರು ಮಾಡಿದ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ಗ್ರಾಮಗಳಲ್ಲಿ ಮಠಗಳು ಮಸ್ಜಿದಿಗಳು ಚರ್ಚಗಳಿದ್ದರೆ ಆಯಾ ಸಮುದಾಯದ ಜನರಲ್ಲಿ ಧಾರ್ಮಿಕ ಮೂಡುತ್ತದೆ. ಶ್ರೀ ಕ್ಷೇ. ಧಾ. ಗ್ರಾ ಯೋಜನೆಯಿಂದ ಶೀಥಿಲಾವ್ಯಸ್ಥೆಯಲ್ಲಿರುವ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಸುಮಾರು 15 ಸಾವಿರ ದೇವಸ್ಥಾನಗಳನ್ನು ಜೀರ್ಣೋದ್ದಾರ ಮಾಡಲಾಗಿದೆ. ಸಾಮಾಜಿಕ ಧಾರ್ಮಿಕ ಆರ್ಥಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಜೊತೆಗೆ ಶೈಕ್ಷಣಿಕ ಕ್ರಾಂತಿ ಕೂಡ ಮಾಡಲಾಗಿದೆ ಎಂದು ಹೇಳಿದರು.
ಕಿತ್ತೂರಿನ ನ್ಯಾಯವಾದಿ ಆರಿ್ಜ. ಹಿರೇಮಠ ಮಾತನಾಡಿ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಸರಕಾರದಿಂದ ಧನಸಹಾಯ ಪಡೆಯುವದು ತುಂಬಾ ಕಷ್ಟಕಾಲದಲ್ಲಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ದೇವಸ್ಥಾನಗಳ ಜೀರ್ಣೋದ್ದಾರಕ್ಕಾಗಿ ಧನ ಸಹಾಯ ಸಿಗುತ್ತದೆ. ಸರಕಾರ ಕೂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ಸಮಾರಂಭದ ಸಾನಿಧ್ಯ ವಹಿಸಿದ ತೋಲಗಿ ಶ್ರೀ ಸೋಮಲಿಂಗೇಶ್ವರ ಆಶ್ರಮ ಚಿಕ್ಕಮಠದ ಶ್ರೀ ಅದೃಶ್ಯಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಹುಕ್ಕೇರಿ ತಾಲೂಕಿನ ಬಸ್ಸಾಪೂರದ ಜಗಜಂಪಿ ಮನೆತನದವರು ಮಾಡಿದ ಧಾರ್ಮಿಕ ಸೇವೆ ಶ್ಲಾಘನೀಯವಾದದು, ಹೊಸ ವಂಟಮೂರಿ ಗ್ರಾಮದ ಸಮಾಜ ಸೇವಕರು ಯುವಕರಾದ ವಿನೋದ ಜಗಜಂಪಿಯವರು ಮಠಮಾನ್ಯಗಳ ಅಭಿವೃದ್ದಿಗಾಗಿ ದುಡಿಯುತ್ತಿರುವುದು ಅಲ್ಲದೆ ಸಾಮಾಜಿಕ ಶೈಕ್ಷಣಿಕ ರಂಗದಲ್ಲಿ ಸಲ್ಲಿಸುತ್ತಿರುವ ಸೇವೆಯು ಪ್ರಶಂಸನೀಯವಾದದು ಎಂದರು.
ಖಾನಾಪೂರ ತಾಲೂಕಿನ ಶ್ರೀ ಕ್ಷೇ.ಧ.ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಗಣಪತಿ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಬೆಳಗಾವಿ ಜಿಲ್ಲಾ ಸದಸ್ಯ ವಿನೋದ ಜಗಜಂಪಿ ತೋಲಗಿ ಒಕ್ಕೂಟದ ಅಧ್ಯಕ್ಷ ಕವಿತಾ ಚಿಕ್ಕಮಠ, ಸೇವಾ ಪ್ರತಿನಿಧಿಗಳಾದ ಲಕ್ಷ್ಮೀ ಪಾಟೀಲ, ರಾಜೇಶ್ವರಿ ವಿ. ಸಾಬರಾಣಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 