ಶಿಕ್ಷಕರ ಕೊರತೆಯಿಂದ ಶಿಕ್ಷಣ ಮಟ್ಟ ಕುಸಿತ: ಅರುಣ ಶಹಾಪುರ
Education level declining due to teacher shortage: Arun Shahapura
ಸಿಂದಗಿ 26: ರಾಜ್ಯದಲ್ಲಿ ಸರಕಾರ ರಚನೆಗೊಂಡ ಎರಡೂವರೆ ವರ್ಷ ಗತಿಸಿದರು ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗಿ ಶಿಕ್ಷಣ ವ್ಯವಸ್ಥೆ ಕುಸಿದಿದೆ. ಮೂಲ ಸೌಲಭ್ಯಗಳಿಲ್ಲದೆ ಹಾಳಾಗಿವೆ ಇದರಿಂದ ಕಿತ್ತೂರು ಕರ್ನಾಟಕದ ಶಾಲೆಗಳು ಗಂಭೀರ ಪರಿಸ್ಥಿತಿಯಲ್ಲಿವೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ದೂರಿದರು.
ಪಟ್ಟಣದ ಸ್ವಗೃಹದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 60 ಸಾವಿರಕ್ಕಿಂತ ಹೆಚ್ಚು ಶಿಕ್ಷಕರ ಕೊರತೆಯಿಂದ ಶಿಕ್ಷಣ ಮಟ್ಟ ಕುಸಿದಿದೆ. ಹಿಂದಿನ ಸರಕಾರದಲ್ಲಿ 15 ಸಾವಿರ ಸಿಕ್ಷಕರ ನೇಮಕಾತಿ ಆದೇಶ ನ್ಯಾಯಾಲಯದಲ್ಲಿ ಎನ್ನುವ ನೆಪದಲ್ಲಿ ಶಿಕ್ಷಕರ ನೇಮಕಾತಿ ಕೈಬಿಟ್ಟಿದೆ. ಇನ್ನೊಂದೆಡೆ ಶತಮಾನ ಕಂಡ ಶಾಲೆಗೆ ಭೂ ಪರಿವರ್ತನ ಪತ್ರ ನೀಡಿ ಎಂದರೆ ಹಿಂದಿನಿಂದ ಯಾವ ಆದೇಶದ ಮೇಲೆ ಮಾನ್ಯತೆ ನೀಡಿದ್ದಿರಿ ಮತ್ತು ಖಾಸಗಿ ಸಂಸ್ಥೆಗಳ ಮಾನ್ಯತೆ ನವೀಕರಣ ಹೆಸರಲ್ಲಿ ಶೋಷಣೆ ಮಾಡುತ್ತ ಲಂಚಾವತಾರಕ್ಕೆ ಇಳಿದಿದಲ್ಲದೆ 49 ಸಾವಿರ ಶಾಲೆಗಳು ಆಗಾತಕಾರಿ ಎದುರಿಸುತ್ತಿವೆ. ಗೌರಿ ಮಾಡಲು ಹೋಗಿ ಗಣಪತಿ ಮಾಡಲು ಹೊರಟಿದೆ. ನೀತಿ ರಹಿತ ಶಿಕ್ಷಣ ನೀತಿ ಸರಕಾರವಾಗಿದೆ ಈ ಸರಕಾರಕ್ಕೆ ಸರಕಾರಿ ಶಾಲೆಗಳೆಂದರೆ ಮಕ್ಕಳ ಆಟವಾಗಿದೆ. ಹಾಗಿದ್ದರೆ ಸರಕಾರಿ ಶಾಲೆಗಳ ಶ್ವೇತ ಪತ್ರ ಹೊರಡಿಸಿ ಎಂದು ಚಾಟಿ ಬೀಸಿದರು.
ಅತಿಥಿ ಉಪನ್ಯಾಸಕರ ಕುರಿತು ಸರಕಾರದಲ್ಲಿ ಸ್ಪಷ್ಟತೆಯಿಲ್ಲ ಪ್ರತಿಶತ 90 ರಷ್ಟು ಉಪನ್ಯಾಸಕರು ವೇತನವಿಲ್ಲದೆ ಕುಳೀತ್ತಿದ್ದಾರೆ ಅದಕ್ಕೆ ಪ್ರತಿಯೊಂದು ಸಮಸ್ಯೆಗೆ ಪರಿಹಾರವಿದೆ ಕಾರಣ ಅಥಿತಿ ಉಪನ್ಯಾಸಕರು ಯಾರು ಹತಾಶಯಗೊಳಗಬಾರದು ನಿಮ್ಮೆ ಜೊತೆ ನಾವಿದ್ದೇವೆ ಎಂದರು.
ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಮಾತನಾಡಿ, ಜಿಲ್ಲಾ ವಿಭಜನೆಯಾದರೆ ಸಿಂದಗಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು, ಈ ತಾಲೂಕಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚು ಆಗುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಜಿಲ್ಲಾ ನ್ಯಾಯಾಲಯ ಮಂಜೂರು ನೀಡಬೇಕು ಎಂದು ಒತ್ತಾಯಿಸಿದರು.
ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿದರು. ಮಲ್ಲು ಪೂಜಾರಿ, ಸಿದ್ರಾಮ ಆನಗೊಂಡ, ಸಾಯಬಣ್ಣ ಪುರದಾಳ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 