ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಣಾ ದಿನಾಚರಣೆ
ವಿಜಯಪುರ 13: ನಗರದ ಪ್ರತಿಷ್ಠಿತ ಸಿಕ್ಯಾಬ್ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆಯನ್ನು ಇತ್ತೀಚಿಗೆ ಆಚರಿಸಲಾಯಿತು.
ಸಂಸ್ಥೆಯ ಸಂಸ್ಥಾಪಕ ಶಂಶುದ್ಧೀನ್ ಪುಣೇಕರ್ ಮಾತನಾಡಿ, ಶಿಕ್ಷಣ ಕ್ಷೇತ್ರ ನಿಂತ ನೀರಲ್ಲ ಸದಾ ಹರಿಯುವ ನೀರಿನಂತೆ ಏನಾದರೂ ಹೊಸತನ ಮಾಡಲೇಬೇಕು. ನನಗೆ ಸಿಕ್ಕ ಸಮಯದಲ್ಲಿ ಶಿಕ್ಷಣ ಕ್ಷೇತ್ರಕ್ಕಾಗಿ ಶ್ರಮಿಸಿದ್ದೇನೆ. ಶಿಕ್ಷಣವೇ ಜೀವನಕ್ಕೆ ಮೂಲಾಧಾರವಾಗಿದೆ ಎಂದು ಹೇಳಿದರು.ಶಿಕ್ಷಣ ಜತೆಗೆ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ಕೊಡಬೇಕು. ಸರ್ವರೂ ನೂರಾರು ಕಾಲ ಬಾಳಿ ಶಿಕ್ಷಣ ಕ್ಷೇತ್ರವನ್ನು ಸಮೃದ್ಧಿಗೊಳಿಸಬೇಕು. ಆರೋಗ್ಯವೇ ಭಾಗ್ಯ ಎಂಬಂತೆ ಆರೋಗ್ಯದ ಕಡೆ ಎಲ್ಲರೂ ಗಮನಕೊಡಬೇಕು ಎಂದರು.
ನಿವೃತ್ತ ಅಧಿಕಾರಿ ಎಸ್.ಎಸ್.ಬಿಳಗೀಪೀರ ಮಾತನಾಡಿ, ಪುಣೇಕರ್ ಅವರು 69 ವರ್ಷದ ಹಿಂದೆ ಶಿಕ್ಷಣ ಸಂಸ್ಥೆ ಕಟ್ಟಿ ಅಂದಿನಿಂದ ಇಂದಿನವರೆಗೆ, ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ. ಅಂದು ಸೌಲಭ್ಯಗಳಿಲ್ಲದ ಆ ಕಾಲದಲ್ಲಿ ಶಿಕ್ಷಣ ಪ್ರಾರಂಭಿಸಿದ್ದು, ಅವರು ಶಿಕ್ಷಣಕ್ಕೆ ಎಷ್ಟು ಮಹತ್ವ ಕೊಡುತ್ತಿದ್ದರು ಎಂಬುದು ಗೊತ್ತಾಗುತ್ತದೆ. ಅವರಿಗೆ ಶಿಕ್ಷಣದ ಬಗ್ಗೆ ಸಾಕಷ್ಟು ಹಸಿವಿದೆ. ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಸಮಾಜಕ್ಕೆ ಅವರ ಕೊಡುಗೆ ಶ್ಲಾಘನೀಯ ಎಂದರು.ಇಂದಿನ ಮಕ್ಕಳು ನಾಳಿನ ನಾಡಿನ ಹೆಮ್ಮೆಯ ಪ್ರಜೆಗಳು. ಇಂದು ಹೆಣ್ಣು ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಮುಂದೆ ಬರುತ್ತಿದ್ದಾರೆ. ರಾ್ಯಂಕಗಳಿಸುವ ಜತೆಗೆ ಚಿನ್ನದ ಪದಕಗಳಿಗೆ ಕೊರಳೊಡ್ಡುತ್ತಿದ್ದಾರೆ. ಆದರೆ ನೋವಿನ ಸಂಗತಿ ಎಂದರೆ ಗಂಡು ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಇದೆ ರೀತಿ ಮುಂದುವರೆದರೆ ಶಿಕ್ಷಣ ಕ್ಷೇತ್ರದಲ್ಲಿ ಅಸಮತೋಲನ ಉಂಟಾಗಬಹುದು. ಗಂಡು-ಹೆಣ್ಣು ಎಂಬ ಬೇಧಭಾವವಿಲ್ಲದೆ ಶಿಕ್ಷಣ ಪಡೆಯಬೇಕು ಎಂದರು. ಸದ್ಯ ಮಹಿಳೆಯರು ಹಲವಾರು ಕ್ಷೇತ್ರದಲ್ಲಿ ಸಾಧನೆಯ ಶಿಖರ ಏರುತ್ತಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಎ.ಎಸ್.ಪಾಟೀಲ ಮಾತನಾಡಿ 1969 ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದಿದೆ. ರಾಜ್ಯ, ರಾಷ್ಟ್ರ ಮಟ್ಟದ ಸಿಕ್ಯಾಬ್ ಶಿಕ್ಷಣ ಸಂಸ್ಥೆ ಅಪಾರ ಸಾಧನೆಯನ್ನು ಮಾಡಿದೆ. ಸಂಸ್ಥೆಯು 26 ವಿದ್ಯಾಸಂಸ್ಥೆಗಳನ್ನು ಹೊಂದಿದೆ. ಸದ್ಯ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್‌ಕೆಜಿಯಿಂದ ಹಿಡಿದು ಪಿಜಿ ವರೆಗೆ ಶಿಕ್ಷಣ ಸಂಸ್ಥೆಗಳಿವೆ. ಪುಣೇಕರ್ ಅವರು ಶಿಕ್ಷಣ ಕ್ಷೇತ್ರಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ ಎಂದರು.1970ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಮಹಿಳಾ ಶಿಕ್ಷಣ ಕೊರತೆ ಎದ್ದು ಕಾಣುತ್ತಿತು. ಅದನ್ನು ನೀಗಿಸಲು 1972ರಲ್ಲಿ ಮಹಿಳಾ ಪದವಿ ಕಾಲೇಜುಗಳು ಪ್ರಾರಂಭಿಸಿದರು. ಹೀಗೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ ಎಂದರು.ಸನ್ಮಾನ :ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಶಂಶುದ್ಧೀನ್ ಪುಣೇಕರ್ ಅವರನ್ನು, ಸಾಧನೆ ತೋರಿದ ಹಾಗೂ ನಿವೃತ್ತ ಶಿಕ್ಷಕರು, ರಾ್ಯಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಕ್ಬುಲ್ ‘ಬಾಗವಾನ್, ರಾಜಕೀಯ ಧುರೀಣ ಶಿವಶರಣ ಪಾಟೀಲ, ಮಹಾಪೌರರಾದ ಮೆಹಜಬೀನ್ ಹೋರ್ತಿ, ರಫಿ ಭಂಡಾರಿ, ಸಿ.ಎಸ್.ನಿಂಬಾಳ, ಸಲೀಂ ಜಾಗೀರದಾರ, ರಫೀಕ್ ಇಂಡಿಕರ, ನಾಗರಾಜ ಲಂಬೂ, ಮಲ್ಲನಗೌಡ ಬಿರಾದಾರ, ಶಫೀಕ್ ಬಗದಾದಿ, ಅಶ್ಫಾಕ್ ಮನಗೂಳಿ, ಜಮೀರ್ ಬಾಂಗಿ, ಅಯೂಬ್ ನಾಡೆವಾಲೆ, ಸರ್ಫರಾಜ್ ಬಗಲಿ, ಫಯಾಜ್ ಕಲಾದಗಿ, ಜಹೂರ ಇಂಡಿಕರ್, ಬಾಬು ಪಟೇಲ್, ನಗರಾಭಿವೃದ್ಧಿ ಅಧ್ಯಕ್ಷ ಕನ್ನಾನ ಮುಶ್ರ್, ಪೀಟರ್ ಅಲೆಕ್ಸಾಂಡರ್, ಡಾ.ಪ್ರಭು ಗೌಡ ಲಿಂಗದಳ್ಳಿ, ಈದರಿಸ್ ಬಕ್ಷಿ, ಬಂದೆನವಾಜ್ ಮಹಾಬರಿ, ಮಹಮೂದ್ ಖಾಜಿ, ಅಬ್ದುಲ್ ರಜಾಕ್ ಮೇಟಿ ,ಮೋಯಿನ್ ಕಲಾದಗಿ, ಸಂಗಮೇಶ ಗುಡ್ಡೋಡಗಿ, ಕೌಸರ್ ಇನಾಮದಾರ, ಎಂ.ಆರ್.ಇಂಡಿಕರ್, ಎ.ಎಸ್.ಸೌದಾಗರ, ಹಾಜನಿಮಾ ಅತ್ತರ, ಅಜಿಮ್ ಇನಾಮದಾರ, ಪರಶುರಾಮ ಹೊಸಮನಿ, ಎಂ ಎ ಫೀರನ್, ಮಹೇಶ್ ಕ್ಯಾತನ, ರೌಫ್ ಶೇಖ್, ಫಶಿಹುದ್ದಿನ್ ಖಾಜಿ, ಎನ್.ಡಿ.ಉಸ್ತಾದ್, ಜಮೀರ್ ಬಕ್ಷಿ, ಜಿ.ಎಂ.ಪಾಟೀಲ, ನಬಿಲಾಲ್ ಕರ್ಜಗಿ, ಸೋಮನಾಥ ಕಳ್ಳಿಮನಿ, ಅಸ್ಲಂ ಬಾಗಲಕೋಟ, ಎಚ್ ಎಂ. ಪಾಟೀಲ, ಎಸ್. ಜಿ.ಕುಂಬಾರ, ಮೌಲಾನಾ ಶಕೀಲ್ ಮುಲ್ಲಾ, ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಭಾಗಿಯಾಗಿದ್ದರು.