ಮಾನವೀಯತೆಯ ವಿಕಾಸವೇ ಶಿಕ್ಷಣ: ಡಾ. ಅಜಿತ ಪ್ರಸಾದ
Education is the evolution of humanity: Dr. Ajit Prasad
ಧಾರವಾಡ 01: ಶಿಕ್ಷಣಕ್ಕೆ ಹಲವಾರು ವ್ಯಾಖ್ಯಾನಗಳಿವೆ. ಆದರೆ, ಶಿಕ್ಷಣವೆಂದರೇ ಮಾನವೀಯ ವಿಕಾಸ ಸಂಸ್ಕಾರಯುತ ನೈತಿಕ ನೆಲೆಗಟ್ಟಿನ ಮೇಲೆ ದೊರೆಯುವ ಶಿಕ್ಷಣ ವಿದ್ಯಾರ್ಥಿಗಳನ್ನು ಸತ್ಥಪ್ರಜೆಗಳನ್ನಾಗಿ ಮಾಡುತ್ತದೆ. ತಾಳ್ಮೆ, ಸಹನೆ, ಶಿಸ್ತು, ಆತ್ಮವಿಶ್ವಾಸ, ಗೌರವ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಇದ್ದಾಗ ಮಾತ್ರ ಆತ ಕಲಿತ ಶಿಕ್ಷಣಕ್ಕೆ ಮಹತ್ವ ದೊರೆಯುತ್ತದೆ ಎಂದು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ಪದವಿ ವಿದ್ಯಾರ್ಥಿಗಳಿಗೆ ಎರಡು ವಾರಗಳ ಕಾಲ ಆಯೋಜಿಸಿರುವ ವ್ಯಕ್ತಿತ್ವ ವಿಕಸನ ಕಾರ್ಯಗಾರವನ್ನು ಉದ್ಘಾಟಿಸಿ ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ರವರು ಮಾತನಾಡಿದರು.
ಧಾರವಾಡ ಶಿಕ್ಷಣ ಕಾಶಿಯಾಗಿ ಬೆಳೆಯಲು ಪೂಜ್ಯ ವೀರೇಂದ್ರ ಹೆಗ್ಗಡೆ ಅವರದು ಸಿಂಹ ಪಾಲಿದೆ. ಜೆ.ಎಸ್.ಎಸ್ ಮುಖಾಂತರ ಶಿಕ್ಷಣ ಎಸ್.ಡಿ.ಎಮ್ ಮುಖಾಂತರ ಶಿಕ್ಷಣ ಹಾಗೂ ಆರೋಗ್ಯ, ಎಸ್.ಕೆ.ಡಿ.ಆರ್.ಡಿ.ಪಿ ಇಂದ ಗಾಮಾಭಿವೃದ್ಧಿ, ರುಡ್‌ಸೆಟ್‌ನಿಂದ ಸ್ವ-ಉದ್ಯೋಗ ಕಲ್ಪಿಸಿ, ಧಾರವಾಡ ಒಂದು ಮಾದರಿ ನಗರವನ್ನಾಗಿ ಮಾಡಿದ್ದಾರೆ. ಕೇವಲ ಪದವಿ ಪಡೆಯುವುದು ವಿದ್ಯಾರ್ಥಿಯ ಗುರಿಯಾಗಬಾರದು. ಪದವಿ ಜೊತೆಗೆ ಕೌಶಲ್ಯ, ಮಾನವೀಯ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಆತನ ಶಿಕ್ಷಣ ಪರಿಪೂರ್ಣವಾಗುತ್ತದೆ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಮಾಡಲು ಈ ರೀತಿ ಕಾರ್ಯಗಾರಗಳನ್ನು ಜೆ.ಎಸ್.ಎಸ್ ಆಯೋಜಿಸುತ್ತಿದೆ ಇದರ ಫಲವಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ರಾಂಕುಗಳನ್ನು ಪಡೆಯುತ್ತಿರುವುದಲ್ಲದೇ, ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಭಾಗ್ಯ ಪಡೆದಿದ್ದಾರೆ ಎಂದು ಹೇಳಿದರು.
ಈ ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಇಂಟರ್‌ನ್ಯಾಷನಲ್ ಮೋಟಿವೇಶನಲ್ ಸ್ಪೀಕರ್ ಬೆಂಗಳೂರಿನ ಬ್ರೇನ್‌ತಾನನ ಸಂಸ್ಥಾಪಕ ಪ್ರದೀಪ್ ಆಚಾರ್ಯ ಮಾತನಾಡಿದರು. ಕಾಯಕ್ರಮದ ಪ್ರಾರಂಭದಲ್ಲಿ ಕು. ಚಿನ್ಮಯಿ ಜಹಾಗಿರದಾರ ಪ್ರಾರ್ಥಿಸಿದರು. ಡಾ. ಸೂರಜ್ ಜೈನ್ ಸ್ವಾಗತಿಸಿದರು. ಶೃತಿ ಶೆಟ್ಟಿ ವಂದಿಸಿದರು. ಮಹಾಂತ ದೇಸಾಯಿ ನಿರೂಪಿಸಿದರು. ಮಹಾವೀರ ಉಪಾದ್ಯೆ, ಆರ್.ವಿ.ಚಿಟಗುಪ್ಪಿ, ಜಿನ್ನಪ್ಪ ಕುಂದಗೋಳ, ವಿವೇಕ ಲಕ್ಷ್ಮೇಶ್ವರ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 