ಸಮಾಜದಲ್ಲಿ ಸಮಾನತೆ ಬರಲು ಶಿಕ್ಷಣ ಅಗತ್ಯ: ವೀರಪ್ಪ ಮೊಯ್ಲಿ

ಬೆಂಗಳೂರ  :27   ಸಮಾಜದಲ್ಲಿ ಸಮಾನತೆ ನಿಮರ್ಾಣ ಆಗಲು ಚಿಂತನಶೀಲ ಶಿಕ್ಷಣದ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅಭಿಪ್ರಾಯ ಪಟ್ಟರು. ಬೆಂಗಳೂರಿನ ಪ್ರತಿಷ್ಠಿತ ಕಮ್ಯುನಿಟಿ ಸೆಂಟರ್ ಗ್ರೂಪ್ ಆಫ್ ಎಜ್ಯುಕೇಷನಲ್ ಇನ್ಸ್ಟಿಟ್ಯೂಟ್ ನ ವಜ್ರ ಮಹೋತ್ಸವದಲ್ಲಿ ಭಾಗವಹಿಸಿದ್ದ ಅವರು, ಜಾಗತಿಕ ಸವಾಲುಗಳನ್ನು ಎದುರಿಸಲು ಪೂರಕವಾದ ಶಿಕ್ಷಣವನ್ನು ನೀಡಲು ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕಿದೆ ಅಂತ ಹೇಳಿದರು. 

ಶಿಕ್ಷಣ ಕೇವಲ ಬೌದ್ಧಿಕತೆಯನ್ನು ಹೆಚ್ಚಿಸುವುದಷ್ಟೇ ಅಲ್ಲ, ನಮ್ಮೆದುರು ತೆರೆದು ನಿಂತಿರುವ ಜಾಗತಿಕ ಸವಾಲುಗಳನ್ನು ಎದುರಿಸುವ ಶಕ್ತಿಶಾಲಿ ಸಾಧನವಾಗಬೇಕಿದೆ.  ಹೀಗಾಗಿ ಬದಲಾವಣೆಯ ಆಲೋಚನೆಗಳನ್ನು ಬಿತ್ತುವ,  ನಿರಂತರ ಸಕಾರಾತ್ಮಕ ನಿಲುವುಗಳನ್ನು ಪರಿಸರಿಸುವ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆಗಳು ಮುಂದಾಗಲಿ ಎಂದು ವೀರಪ್ಪ ಮೊಯ್ಲಿ ಆಶಯ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸವಾಲುಗಳ ಕುರಿತು ಬೆಳಕು ಚೆಲ್ಲಿದ ಮಾಜಿ ಶಿಕ್ಷಣ ಸಚಿವರು ಆಗಿರುವ ವೀರಪ್ಪ ಮೊಯಿಲಿ,  ಶಿಕ್ಷಣ ಸಂಸ್ಥೆಗಳನ್ನು ನಡೆಸುವವರ ದೂರದೃಷ್ಟಿ ಯಾವಾಗಲೂ ಆ ಸಂಸ್ಥೆಗಳು ನೀಡುವ ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಉತ್ತಮ ಚಿಂತನೆಗಳು ಶೈಕ್ಷಣಿಕ ಸಂಸ್ಥೆಗಳಿಗಿರಬೇಕು ಎಂದರು. ಪ್ರಸ್ತುತ ಗುಣಮಟ್ಟದ ಶಿಕ್ಷಣದ ಅಗತ್ಯ ಹೆಚ್ಚಾಗಿದ್ದು, ಜಾಗತಿಕ ಉದ್ಯೋಗವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕಿದೆ. ಜಾಗತೀಕ ಉದ್ಯೋಗ ಕ್ಷೇತ್ರದಲ್ಲಿ ನಮ್ಮ ಭಾರತೀಯ ಶಿಕ್ಷಣ ವ್ಯವಸ್ಥೆಯ ಮೂಲಕ ಹೊರಬಂದವರೇ ಉನ್ನತ ಸ್ಥಾನ ವಹಿಸುತ್ತಿರುವುದು ಸಮಾಧಾನಕರ ಸಂಗತಿ. ಪರಿವರ್ತನೆಯ ಶಿಕ್ಷಣ, ಕೌಶಲಾಭಿವೃದ್ಧಿಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಶ್ರಮವಹಿಸಬೇಕಿದೆ.  ಈಗ ಪ್ರಮುಖವಾದ ಉದ್ಯೋಗ ಕ್ಷೇತ್ರದ ಸಿಇಓ ಗಳು ಭಾರತೀಯರು ಆಗಿದ್ದಾರೆ. ಅವರೆಲ್ಲಾ ಭಾರತೀಯ ಶಿಕ್ಷಣ ವ್ಯವಸ್ಥೆ ಮೂಲಕ ಹೊರಬಂದವರು. ಆರು ನೊಬೆಲ್ ಪುರಸ್ಕೃತರು ಭಾರತೀಯ ಶಿಕ್ಷಣ ಪಡೆದವರು. ಇದು ನಮ್ಮ ಶಿಕ್ಷಣದ ಹೆಮ್ಮೆ ಅಂತ ವೀರಪ್ಪ ಮೊಯಿಲಿ ಹೇಳಿದ್ರು. 

ನಮ್ಮ ಭಾರತೀಯ ಶಿಕ್ಷಣ ಸಂಸ್ಥೆಗಳು ಗ್ಲೋಬಲ್ ಸಿಟಿಜನ್ ಸೃಷ್ಟಿ ಮಾಡುವ ತಾಕತ್ತು ಪ್ರದಶರ್ಿಸಲು ಮುಂದಾಗಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಸಮಾನತೆ ತರಲು ಸಾಧ್ಯವಾಗಲಿದೆ. ಹೀಗಾಗಿ ಇಂತಹ ಪ್ರಯತ್ನ ನಿರಂತರವಾಗಿ ಸಾಗಲಿ ಎಂದು ವೀರಪ್ಪ ಮೊಯ್ಲಿ ಹೇಳಿದರು. ನಾನು ಸಚಿವರಾಗಿದ್ದ ಅವಧಿಯಲ್ಲಿ ಸಿಲಿಕಾನ್ ಸಿಟಿ ಮಾಡುವ ಪ್ರಯತ್ನ ಮಾಡಿದಾಗ ನನಗೆ ಸಹಕಾರ ಸಿಗಲಿಲ್ಲ. 1000 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಐಟಿಪಿಎಲ್  ಮಾಡಲು ಮುಂದಾದಾಗಲೂ ಸಹಕಾರ ಸಿಗಲಿಲ್ಲ. ಆದರೆ ಪ್ರಯತ್ನ ಮುಂದುವರಿಸಿದ್ದರಿಂದ ಈಗ ಬೆಂಗಳೂರು ಸಿಲಿಕಾನ್ ಸಿಟಿ ಆಗಿದೆ. ಆದ್ದರಿಂದ ಬದಲಾವಣೆ ತರುವ ನಮ್ಮ ಶಿಕ್ಷಣ ವ್ಯವಸ್ಥೆ ಮಾಡಲಿ ಅಂತ ಹಾರೈಸುತ್ತೇನೆ ಎಂದು ವೀರಪ್ಪ ಮೊಯ್ಲಿ ಹೇಳಿದರು. ಸಂಸ್ಥೆಯ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುಪ್ರೀಂಕೋಟರ್್ ನಿವೃತ್ತ ಮುಖ್ಯನ್ಯಾಯಮೂತರ್ಿ ಎಂ.ಎನ್ ವೆಂಕಟಾಚಲಯ್ಯ ಅವರು, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯ ಅಗತ್ಯವಿದೆ ಅಂತ ಪ್ರತಿಪಾದಿಸಿದರು.ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಿನ ಅನಿವಾರ್ಯತೆ ಯನ್ನು ಅರಿತು ಕೊಳ್ಳಬೇಕು. ಸೃಜನಶೀಲತೆ ತರುವ ನಿಟ್ಟಿನಲ್ಲಿ ಕಮ್ಯುನಿಟಿ ಸೆಂಟರ್ ಶಿಕ್ಷಣ ಸಂಸ್ಥೆ ಕೆಲಸ ಮಾಡಿಕೊಂಡು ಬರುತ್ತಿದೆ. ಜೀವನದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ವಿದ್ಯಾಥರ್ಿಗಳನ್ನು ರೆಡಿ ಮಾಡುವ ಕೆಲಸ ಆಗ್ತಿರೋದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ದೇಶ ಮೊದಲು ಅನ್ನೋ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಲಿ ಅಂತ ಹಾರೈಸುತ್ತೇನೆ ಎಂದು ನಿವೃತ್ತ ನ್ಯಾಯಮೂತರ್ಿ ಎಂ ಎನ್ ವೆಂಕಟಾಚಯ್ಯ ಹೇಳಿದರು. 

ಕಮ್ಯುನಿಟಿ ಸೆಂಟರ್ ಗ್ರೂಪ್ ಆಫ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ನಾಗರಾಜ್ ಮಾತನಾಡಿ, ಕುಗ್ರಾಮ ಅಂತ ಗುರುತಿಸಿಕೊಂಡಿದ್ದ ಕನಕನಪಾಳ್ಯವನ್ನು ಇಂದು ಶಿಕ್ಷಣ ಕೇಂದ್ರವಾಗಿ ರೂಪಿಸಿದ ಹೆಮ್ಮೆಯಿದೆ ಅಂತ ಸಂತಸ ವ್ಯಕ್ತಪಡಿಸಿದ್ರು. ಕಡಿಮೆ ಅಂಕ ಪಡೆದ ವಿದ್ಯಾಥರ್ಿಗಳಿಗೆ ಮೊದಲ ಆದ್ಯತೆಯಾಗಿ ಪ್ರವೇಶ ನೀಡುವ ಮೂಲಕ ಸಾಮಾಜಿಕ ಚಳುವಳಿಯಾಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟುವ ಕೆಲಸ ಮಾಡಿದ್ದೇವೆ. ಆಥರ್ಿಕವಾಗಿ ಪ್ರತಿ ವಿದ್ಯಾಥರ್ಿಯು ಗೆಲುವು ಸಾಧಿಸುವ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿದ್ದೇವೆ. ನಿರಂತರ 60 ವರ್ಷಗಳ ಕಾಲ ಮಾಡಿದ ಸೇವೆ ತೃಪ್ತಿ ತಂದಿದ್ದು, ಹಣಗಳಿಕೆಯ ಉದ್ದೇಶ ನಮ್ಮದಲ್ಲ ಅಂತ ತುಂಬಿದ ಸಭೆಯಲ್ಲಿ ಭಾವುಕರಾದರು. ಮುಂದೆಯೂ ಈ ಸಂಸ್ಥೆಯು ತುಳಿತಕ್ಕೆ ಒಳಗಾದವರ ಶೈಕ್ಷಣಿಕ ಹಕ್ಕನ್ನು ಗೌರವಿಸಿ ಕೆಲಸ ಮಾಡಲಿದೆ ಅಂತ ಭರವಸೆ ನೀಡಿದ್ರು. ಸಭೆಯಲ್ಲಿ ಶಾಸಕರಾದ ಉದಯ್ ಗರುಡಾಚಾರ್, ಸಂಸ್ಥೆಯ ಹಳೆಯ ವಿದ್ಯಾಥರ್ಿಯಾಗಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಹಾಗೂ ಬಿಬಿಎಂಪಿ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್ ಹಳೆಯ ದಿನಗಳನ್ನು ಮೆಲುಕು ಹಾಕಿದ್ರು. ಮಾಜಿ ಮೇಯರ್ ಗಂಗಾಬಿಕೆ ಮಲ್ಲಿಕಾಜರ್ುನ, ಉದ್ಯಮಿ ಬಿ.ಆರ್ ವಾಸುದೇವ್, ಸಂಸ್ಥೆಯ ಕಾರ್ಯದಶರ್ಿ ಚಿಕ್ಕಯ್ಯ ಮತ್ತು ಅಮರೇಶ್ ಹಾಗೂ ಆಡಳಿತ ಮಂಡಳಿ ಸದಸ್ಯರು, ವಿದ್ಯಾಥರ್ಿಗಳು ,ಸಿಬ್ಬಂದಿ ವರ್ಗ ಸಮಾರಂಭದಲ್ಲಿ ಉಪಸ್ಥಿತರಿದ್ದರು.