ವಿದ್ಯಾರ್ಥಿಗಳ ಬಹುಮುಖ ವ್ಯಕ್ತಿತ್ವವನ್ನು ರೂಪಿಸುವ ಸಾಧನವೇ ಶಿಕ್ಷಣ: ಕುನ್ನೂರ

ಲೋಕದರ್ಶನವರದಿ

ಶಿಗ್ಗಾವಿ27 : ಶಿಕ್ಷಣ ವಿದ್ಯಾರ್ಥಿಗಳ ಬಹುಮುಖ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾಗಬೇಕು ಇಂದಿನ ಸಂಕೀರ್ಣಮಯ ಸನ್ನಿವೇಶದಲ್ಲಿಯೂ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಅನುಕೂಲವಾಗುವಂತಹ ಶಿಕ್ಷಣ ಪದ್ದತಿಯ ಅವಶ್ಯಕತೆಯಿದೆ ವಿದ್ಯಾಥರ್ಿಗಳು ಹೊಸಕಾಲದ ಆವಿಷ್ಕಾರಗಳಿಗೆ ತಕ್ಕಂತೆ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ವಿದ್ಯಾಥರ್ಿ ಹಂತದಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು  ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕು ಎಂದು ಶಿಗ್ಗಾವಿ ಚನ್ನಬಸವೇಶ್ವರ ಗ್ರಾಮೀಣ ವಿದ್ಯಾಸಂಸ್ಥೆ ಕಾರ್ಯದಶರ್ಿ ರಾಜು ಎಂ ಕುನ್ನೂರ ಹೇಳಿದರು

   ಪಟ್ಟಣದ ಚನ್ನಪ್ಪ ಕುನ್ನೂರ ಕಾಲೇಜಿನಲ್ಲಿ ಏರ್ಪಡಿಸಲಾದ ಕಾಲೇಜು ಒಕ್ಕೂಟದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಾಲಾ ಪಠ್ಯಕ್ರಮ ಕೇವಲ ಅಂಕಗಳಿಕೆಯ ಮಾನದಂಡವಾಗಬಾರದು ಬದುಕನ್ನು ರೂಪಿಸುವ ಮಾರ್ಗವಾಗಬೇಕು  ಜೀವನದಲ್ಲಿ ಒಂದು ಗುರಿಯನ್ನಿಟ್ಟುಕೊಂಡು ವಿದ್ಯಾಥರ್ಿಗಳು ಸಾಗಬೇಕು ಎಂದು ಅಭಿಪ್ರಾಯಪಟ್ಟರು.

 ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಂಟೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಫ್ ಬಿ ಸೊರಟೂರ ಅವರು ವಿದ್ಯಾಥರ್ಿ ಜೀವನ ಬಹಳ ಮೌಲ್ಯಯುತವಾದುದು ಈ ಜೀವನವನ್ನು ಸಮರ್ಥವಾಗಿ ಸದ್ಭಳಕೆ ಮಾಡಿಕೊಂಡು ಸುಂದರ ಬದುಕನ್ನು ನಿಮರ್ಿಸಿಕೊಳ್ಳಬೇಕು.

        ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ ಹಾಗಾಗಿ ವಿದ್ಯಾಥರ್ಿಗಳಾದವರು ಭವಿಷ್ಯತ್ ಬದುಕಿನ ಸುಂದರ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರಲ್ಲದೆ ಜೀವನದಲ್ಲಿ ದೊಡ್ಡ ಗುರಿಯನ್ನು ಹೊಂದಿರಬೇಕು ಎಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು 

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ವಿದ್ಯಾಥರ್ಿಗಳಲ್ಲಿ ಸ್ನೇಹ ಸೌಹಾರ್ಧದ ಮನೋಭಾವ ಬೆಳೆದು ಬರುವುದು ಇಂದಿನ ಅವಶ್ಯಕತೆಯಾಗಿದೆ ಕಾಲೇಜು ಒಕ್ಕೂಟಗಳಲ್ಲಿ ವಿದ್ಯಾಥರ್ಿಗಳು ಕ್ರೀಯಾಶೀಲರಾಗಿ ತೊಡಗಿಸಿಕೊಳ್ಳುವ ಮೂಲಕ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು  ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ಕಾಲೇಜು ಒಕ್ಕೂಟಕ್ಕೆ ಆಯ್ಕೆಯಾದ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು ಕಾರ್ಯಕ್ರಮದಲ್ಲಿ ವಿವಿಧ ಸಂಘಗಳ ಕಾಯರ್ಾಧ್ಯಕ್ಷರಾದ ಪ್ರೊ. ಎಂ ಎಸ್ ಕುರಂದವಾಡ, ಪ್ರೊ. ಕೆ ಸಿ ಹೂಗಾರ ಪ್ರೊ. ಅನ್ನಪೂರ್ಣ ಅಂಕಲಕೋಟಿ, ಪ್ರೊ. ಸುಮಿತ್ರಾ ರಾಮಾಪೂರಮಠ, ಪ್ರೊ. ಉಮೇಶ ತಳವಾರ ಪ್ರಧಾನ ಕಾರ್ಯದಶರ್ಿ ಕುಮಾರಿ ಶಾಂತಾ ಹೊಸಮನಿ ಮುಂತಾದವರು ಪಾಲ್ಗೊಂಡಿದ್ದರು.

   ಪ್ರಾರಂಭದಲ್ಲಿ ಕಾಲೇಜು ಒಕ್ಕೂಟದ ಕಾಯರ್ಾಧ್ಯಕ್ಷ ಪ್ರೊ. ಕೆ ಬಸಣ್ಣ ಸ್ವಾಗತಿಸಿದರು ಸಾಂಸ್ಕೃತಿಕ ಸಂಘದ ಕಾಯರ್ಾಧ್ಯಕ್ಷ ಡಾ. ಕೆ ಎಸ್ ಬರದೆಲಿ ಕಾರ್ಯಕ್ರಮ ನಿರೂಪಿಸಿದರು.