ಸಂಬರಗಿ 10: ನನ್ನ ಹಳ್ಳಿ ಜೀವನದಲ್ಲಿ ಇಲ್ಲಿಯ ಗುರುಗಳ ಮಾರ್ಗದರ್ಶನವೇ ನನಗೆ ಈ ಸ್ಥಾನಕ್ಕೆ ಹೋಗಲು ಸಾಧ್ಯವಾಯಿತು. ಜೀವನದಲ್ಲಿ ಸಾಧಿಸಬೇಕಾದರೆ ಮುಂದೆ ಗುರಿ ಇರಬೇಕು ಅದಕ್ಕೆ ಹಿಂದೆ ಗುರು ಇರಬೇಕು ಅಂತಾ ಬೀದರ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ ಬನಸೋಡೆ ಹೇಳಿದರು.
ಸಂಬರಗಿ ಗ್ರಾಮದ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಮಾತನಾಡಿ ಅವರು ಪಟ್ಟಣಕ್ಕಿಂತ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಒಳ್ಳೆಗುಣಮಟ್ಟದಿದ್ದು, ನಾನು ಶಿಕ್ಷಣವನ್ನು ಗ್ರಾಮೀಣ ಭಾಗದಲ್ಲಿ ಕಲಿತಿದ್ದೇನೆ. ಈ ಮಟ್ಟಕ್ಕೆ ಬರಲು ಗುರುವಿನ ಆಶಿರ್ವಾದ ಹಾಗೂ ಅವರು ನೀಡಿದ ಶಿಕ್ಷಣವು ನನಗೆ ಅನುಕೂಲವಾಯಿತು.
ಮುಖ್ಯ ಅಥಿತಿಯಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಜಿ.ಡಿ.ಓ ಪಾಂಡುರಂಗ ಬಂಡಾರಿ ಮಾತನಾಡಿ ಗಡಿ ಭಾಗದಲ್ಲಿ ಇರುವ ಶಾಲಾ ಮಹಾವಿದ್ಯಾಲಯದಲ್ಲಿ ಒಳ್ಳೆಯ ಗುಣಮಟ್ಟದ ಶಿಕ್ಷರಿದ್ದು, ಗ್ರಾಮೀಣ ಮಟ್ಟದ ಶಿಕ್ಷಣ ಪಡೆಯುವ ವಿದ್ಯಾರ್ಥಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ನಾಗನೂರ ಪಿ.ಎ ಗ್ರಾಮದ ಸಿದ್ಧಶ್ರೀ ಬೀರಲಿಂಗೇಶ್ವರ ದಿವ್ಯ ಸಾನಿದ್ಯ ವಹಿಸಿ ಆಶಿರ್ವದಿಸಿದರು. ಮಾಜಿ ಯೋಧರು ಶ್ರೀಮಂತ ರೂಪ್ಪನೂರ, ವಿಲಾಸ ಠೋಣೆ, ಅಣ್ಣಾಪ್ಪಾ ಮಿಸಾಳ, ಅಬ್ದುಲ್ ಮುಲ್ಲಾ, ತುಕಾರಾಮ ಶಿಳಕೆ, ಶಾಲಾ ನಿವೃತ್ತ ಮುಖ್ಯೋಪಾಧ್ಯಯರು ಕೆ.ಎಮ್.ಕಾಂಬಳೆ, ಎಂ.ಬಿ.ಮೋರಟಗಿ, ಬಾಳು ಹಜಾರೆ, ಪಾಂಡುರಂಗ ಕಾಂಬಳೆ, ಎಮ್.ಜಿ.ದೇವಮಾನೆ, ಶಾಲೆಯ ಹೆಡ್‌ಮಾಸ್ಟರ್ ಆರ್.ಡಿ.ಶಿಂಗೆ ಸೇರಿದಂತಹ ಸಂಸ್ಥಾ ಸದಸ್ಯರು, ಗ್ರಾಮದ ಗಣ್ಯರು ಉಪಸ್ಥಿತ ಇದ್ದರು.