ಎಂಥದ್ದೇ ಕಷ್ಟವನ್ನು ಎದುರಿಸುವ ಆತ್ಮವಿಶ್ವಾಸ ಕೊಡುತ್ತದೆ ಶಿಕ್ಷಣ: ಸರಿಕರ
Education gives you the confidence to face any difficulty: Sarikar
ಹಾರೂಗೇರಿ 06: ಸಮಾಜದಲ್ಲಿ ಹೆಣ್ಣು ಸುಶಿಕ್ಷತಳಾದರೆ ಮಾತ್ರ ಬದಲಾವಣೆ ತರಲು ಸಾಧ್ಯವಿದೆ. ಅದಕ್ಕಾಗಿ ಹೆಣ್ಣುಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಳ್ಳಬೇಕೆಂದು ಮಾಜಿ ಶಾಸಕ ಬಿ.ಸಿ.ಸರಿಕರ ಹೇಳಿದರು.
ಪಟ್ಟಣದ ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಸಾಧಕರಿಗೆ ಸಿದ್ಧಸಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿನಲ್ಲಿ ಎಷ್ಟೇ ಕಷ್ಟದ ಸಂದರ್ಭ ಬಂದರೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸವನ್ನು ಶಿಕ್ಷಣ ಕೊಡುತ್ತದೆ. ಆ ಕಾರಣಕ್ಕಾಗಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಶಿಕ್ಷಣ ವಿದ್ಯಾರ್ಥಿಗಳನ್ನು ಸಜ್ಜನ ಮಾಡುವುದಲ್ಲದೇ, ವ್ಯಕ್ತಿತ್ವ ವಿಕಸನ, ಮೌಲ್ಯಗಳ ಕಲಿಕೆ ಮತ್ತು ಯಶಸ್ವಿ ಜೀವನದ ಬುನಾದಿಯಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬನಹಟ್ಟಿಯ ಪ್ರೊ.ಎಸ್.ಕೆ.ನಡುವಿನಕೇರಿ ಮಾತನಾಡಿ ಓದುವ ಮಕ್ಕಳಿಗೆ ಉನ್ನತ ಸಾಧಕರು ಆದರ್ಶವಾಗಬೇಕೆ ಹೊರತು, ಟಿ.ವಿ, ಸಿನೇಮಾಗಳ ಹೀರೋಗಳಲ್ಲ ಎಂದರು. ಸಿದ್ಧಸಿರಿ ಪ್ರಶಸ್ತಿ ಪ್ರದಾನ : ಜಾನಪದ ಹಿರಿಯ ಕಲಾವಿದ ಸಿದ್ದಣ್ಣ ನಾಗನೂರ ಮತ್ತು ಗೀಗೀಪದ ಕಲಾವಿದ ಮಹಾದೇವಿ ದೇವರವರ ಅವರಿಗೆ ಸಿದ್ಧಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪಾರಿತೋಷಕಗಳನ್ನು ವಿತರಿಸಲಾಯಿತು. ಸಂಸ್ಥೆ ಅಧ್ಯಕ್ಷ ಎನ್.ಎಸ್.ಚೌಗಲಾ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಆಡಳಿತಾಧಿಕಾರಿ ಎಮ್.ಎನ್.ಚೌಗಲಾ, ಮಗೆಪ್ಪ ಠಕ್ಕಣ್ಣವರ, ಧನಪಾಲ ಶಿರಹಟ್ಟಿ, ಸಿದ್ದಲಿಂಗ ಠಕ್ಕಣ್ಣವರ, ವತ್ಸಲಾ ಚೌಗಲಾ, ಬಸವರಾಜ ಚೌಗಲಾ, ಪ್ರವೀಣ ಚೌಗಲಾ, ಅಣ್ಣಪ್ಪ ಅಸ್ಕಿ, ಮುಖ್ಯೋಪಾಧ್ಯಾಯ ವಿಜಯ ಕಂಬಾರ, ಎಸ್.ಜಿ.ರಾಯಬಾಗಕರ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು. ಪ್ರಾಚಾರ್ಯ ಟಿ.ಎಸ್.ವಂಟಗೂಡಿ ಸ್ವಾಗತಿಸಿದರು. ಆಶಾ ಕಂಕಣವಾಡಿ ಮತ್ತು ಸುನೀತಾ ಬದ್ನಿಕಾಯಿ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 