ಧಾರವಾಡ 19: ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಾಯರ್ಾಲಯವು ಗುರುವಾರ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಾ. ಎಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನವು ಹೊರತಂದ 'ಶಿಕ್ಷಣ ಪರಿಶ್ರಮ ಪರಿಮಳ' ಕಥನ ಮಾಲಿಕೆ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಆಯುಕ್ತರ ಕಛೇರಿಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ನಿದರ್ೆಶಕ ಡಾ.ಬಿ.ಕೆ.ಎಸ್. ವರ್ಧನ್, ಉಪನಿದರ್ೆಶಕ ಮೃತ್ಯುಂಜಯ ಕುಂದಗೋಳ, ಸಾರ್ವಜನಿಕ ಸಂಪಕರ್ಾಧಿಕಾರಿ ಉಮೇಶ ಬಮ್ಮಕ್ಕನವರ, ಹಿರಿಯ ಸಹಾಯಕ ನಿದರ್ೆಶಕ ಅಜರ್ುನ ಕಂಬೋಗಿ, ಯೋಜನಾ ಸಹಾಯಕ ಚಂದ್ರಶೇಖರ ಅಳಗೋಡಿ, ಡೆಪ್ಯೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ಗೌರವ ನಿದರ್ೆಶಕ ಎಸ್.ಬಿ. ಕೊಡ್ಲಿ, ಸಹಾಯಕ ನಿದರ್ೆಶಕ ಶಂಕರ ಗಂಗಣ್ಣವರ, 'ಜೀವನ ಶಿಕ್ಷಣ' ಮಾಸಪತ್ರಿಕೆಯ ಜಂಟಿ ಸಂಪಾದಕ ಗುರುಮೂತರ್ಿ ಯರಗಂಬಳಿಮಠ ಇದ್ದರು.
ಸಭೆಯಲ್ಲಿ ವಿಜಯಪೂರ, ಬಾಗಲಕೋಟ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಗದಗ, ಹಾವೇರಿ, ಚಿಕ್ಕೋಡಿ ಹಾಗೂ ಶಿರಸಿ ಜಿಲ್ಲೆಗಳ ಡಯಟ್ ಪ್ರಾಚಾರ್ಯರು, ಹಿರಿಯ ಉಪನ್ಯಾಸಕರು, ಡಿಡಿಪಿಐ ಕಛೇರಿಗಳ ಎಲ್ಲ ವಿಷಯ ಪರಿವೀಕ್ಷಕರು, 9 ಜಿಲ್ಲೆಗಳ ಎಲ್ಲ 59 ತಾಲೂಕುಗಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರೌಢ ಶಾಲಾ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದಲ್ಲಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಪ್ರಗತಿ ಪರಿಶೀಲನೆಯನ್ನು ಜಿಲ್ಲಾವಾರು ನಡೆಸಲಾಯಿತು.