ಘನ ತ್ಯಾಜ್ಯ ವಸ್ತುಗಳ ವಿಂಗಡಣೆ ಕುರಿತು ಜನಸಾಮಾನ್ಯರಿಗೆ ಜಾಗೃತಿ ಮೂಡಿಸಿ: ನಿವೃತ್ತ ಉಪಲೋಕಾಯುಕ್ತರಾದ ಸುಭಾಷ್

ಕೊಪ್ಪಳ 13: ಘನ ತ್ಯಾಜ್ಯ ವಸ್ತುಗಳ ವಿಂಗಡಣೆ ಕುರಿತು ಜನಸಾಮಾನ್ಯರಿಗೆ ಜಾಗೃತಿ ಮೂಡಿಸಿ, ಕಸವನ್ನು ಮೂರು ವಿಧಗಳಾಗಿ ವಿಂಗಡಿಸಿ ಕಸವನ್ನು ಸಂಗ್ರಹಣೆ ಮಾಡುವ ಹೊಣೆಗಾರಿಕೆ ಸ್ಥಳೀಯ ಸಂಸ್ಥೆಗಳದ್ದಾಗಿದೆ. ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠದ ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷರು ಹಾಗೂ ನಿವೃತ್ತ ಉಪಲೋಕಾಯುಕ್ತರಾದ ಸುಭಾಷ್ ಬಿ.ಆಡಿ ಅವರು ಹೇಳಿದರು.

ಜಿಲ್ಲಾ ಪಂಚಾಯತನ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ನಡೆದ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ-2016 ರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಸವನ್ನು ಮೂರು ವಿಧಗಳಾಗಿ ಸಂಗ್ರಹಣೆ ಮಾಡಬೇಕು. ಅವುಗಳೆಂದರೆ ಮನೆ, ಅಂಗಡಿಯಲ್ಲಿ ಸಂಗ್ರಹವಾಗುವ ಅಡುಗೆ ಮನೆ ತ್ಯಾಜ್ಯ, ಆಹಾರ ಪದಾರ್ಥ, ಕೃಷಿ ತ್ಯಾಜ್ಯ, ತರಕಾರಿ ತ್ಯಾಜ್ಯ, ಮಾಂಸ, ಮೊಟ್ಟೆ ಸಿಪ್ಪೆ, ಮರದ ಎಲೆ ಇತ್ಯಾದಿ ಹಸಿಕಸವಾಗಿ, ಹಾಲಿನ ಕವರ್, ಪ್ಲಾಸ್ಟಿಕ್ ಬ್ಯಾಗ್, ಪಿವಿಸಿ ಪೈಪ್, ಟೈರ್, ಟ್ಯೂಬ್, ಗಾಜು, ಪುಸ್ತಕ, ಕಾಗದ, ಟಿನ್, ತೆಂಗಿನ ಚಿಪ್ಪು, ಬಟ್ಟೆ ಇವು ಒಣ ಕಸವಾಗಿ ಸಂಗ್ರಹಿಸಬೇಕು. ಕಟ್ಟಡ ಅಥವಾ ಸೇತುವೆಗಳನ್ನು ತೆರವುಗೊಳಿಸಿದಾಗ ಉತ್ಪಾದನೆ ಆಗುವ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು.

ಇದರಲ್ಲಿ ಮರುಬಳಕೆ ಮಾಡಲಾಗದ ತ್ಯಾಜ್ಯಗಳಾದ ಥಮರ್ೊಕೋಲ್, ಟ್ಯಾಬ್ಲೆಟ್, ಎಫ್ಆಪರ್ಿ, ಟೆಟ್ರಾ ಪ್ಯಾಕ್ಗಳು, ಚಿಪ್ಸ್ ಕವರ್ ಇನ್ನೂ ಮುಂತಾದವು ಅಪಾಯಕಾರಿ ತ್ಯಾಜ್ಯವಾಗಿದ್ದು ಪರಿಸರಕ್ಕೆ ಹಾನಿ ಮಾಡುವುದಲ್ಲದೆ, ಪ್ರಾಣಿಗಳ ಜೀವಕ್ಕೆ ಆಪತ್ತು ತರುವಂತವುಗಳಾಗಿವೆ. ಆದ್ದರಿಂದ ಅಂತಹ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕಾಗುತ್ತದೆ ಎಂದರು.

ಪಟ್ಟಣದ ಮನೆ, ಹೋಟೆಲ್, ಅಂಗಡಿಯಲ್ಲಿ ಸಂಗ್ರಹವಾಗುವ ಹಸಿಕಸವನ್ನು ಗೊಬ್ಬರವಾಗಿ ಮಾರ್ಪಡಿಸಬೇಕು.  ಅದಕ್ಕಾಗಿ ಒಂದು ಸ್ಥಳ ನಿಗದಿಪಡಿಸಿಕೊಂಡು ಶೆಡ್ ನಿಮರ್ಾಣ ಹಾಗೂ ಪ್ಲಾಟ್ ಫಾರಂ ನಿಮರ್ಿಸಿಕೊಂಡು, ಗುಂಡಿಯಲ್ಲಿ ಹಸಿಕಸದಿಂದ ಗೊಬ್ಬರ ತಯಾರಿಸುವ ಕೆಲಸವಾಗಬೇಕು. ಈ ಕುರಿತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ವೈಜ್ಞಾನಿಕವಾಗಿ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಜನ ಸಾಮಾನ್ಯರಿಗೆ ಕೆಳಹಂತದಲ್ಲಿಯೇ ಕಸವನ್ನು ಸಂಗ್ರಹಿಸುವಂತೆ ಮಾಹಿತಿ ನೀಡಬೇಕು. ಈ ಕುರಿತು  ಶೇ.100 ರಷ್ಟು ಫಲಿತಾಂಶವನ್ನು ತರಲುವಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಣತೊಡಬೇಕು. ಅಲ್ಲದೆ ಕೊಪ್ಪಳ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣವಾಗಿಲ್ಲ ಈ ಕುರಿತು ಅಧಿಕಾರಿಗಳು ಅಂಗಡಿಗಳಿಗೆ ತೆರಳಿ, ತನಿಖೆ ನಡೆಸಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ದಂಡ ವಿಧಿಸಿ, ಲೈಸನ್ಸ್ ರದ್ದು ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಕರ್ತವ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಕಸವನ್ನು ಬೇರ್ಪಡಿಸಿ ಮುನ್ಸಿಪಲ್ ವಾಹನಗಳಿಗೆ ನೀಡುವುದು ಆದ್ಯ ಕರ್ತವ್ಯವಾಗಿರುತ್ತದೆ ಎಂದರು.

ಹಾಗೆಯೇ ಸಂಗ್ರಹಿಸಿದ ಕಸವನ್ನು ಬೇರೆಡೆಗೆ ಮಾರುಕಟ್ಟೆ ಮಾಡಲು ಜಿಲ್ಲೆಯಲ್ಲಿಯೇ ಮಾರುಕಟ್ಟೆ ಕೇಂದ್ರ ಒದಗಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು. ಜೊತೆಗೆ ಸಂಗ್ರಹಿಸಿದ ಕಸದ ಗುಣಮಟ್ಟವನ್ನು ಪರೀಕ್ಷೆ ಮಾಡಲು ಕೃಷಿ ಇಲಾಖೆಗೆ ಕಳುಹಿಸಬೇಕು. ಅವರು ಅದನ್ನು ಪರೀಕ್ಷೆ ಮಾಡಿ, ಅದರ ಮೌಲ್ಯವನ್ನು ನಿರ್ಧರಿಸಿದ ಆಧಾರದ ಮೇಲೆ ಮಾರುಕಟ್ಟೆ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಫೆಬ್ರವರಿ ಅಂತ್ಯದೊಳಗೆ ಪ್ಲಾಸ್ಟಿಕ್ ಬಳಕೆ ನಿಷೇಧವಾಗಬೇಕು. ಪ್ಲಾಸ್ಟಿಕ್ ನಿಷೇಧವನ್ನು ಅನುಷ್ಟಾನಗೊಲಿಸುವಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಯಾವುದೇ ತೊಂದರೆಗಳಿದ್ದಲ್ಲಿ ಅವುಗಳ ಕುರಿತು ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ, ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ್ ಮೂತರ್ಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


ಮರಿಯಮ್ಮನಹಳ್ಳಿ ಅಪಘಾತ ಪ್ರಕರಣದ ಬಗ್ಗೆ ಮಾಹಿತಿಯಿಲ್ಲ: ಗೃಹ ಸಚಿವ ಬೊಮ್ಮಾಯಿ