ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಎಡಹಳ್ಳಿ ಜಿಲ್ಲೆಗೆ ಪ್ರಥಮ

Edahalli district tops NMMS exam

ತಾಳಿಕೋಟಿ 09: ಸ್ಥಳೀಯ ವೀರಶೈವ ವಿದ್ಯಾವರ್ಧಕ ಸಂಘದ ಎಸ್ ಕೆ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಂಟನೇ ತರಗತಿ ವಿದ್ಯಾರ್ಥಿ ಕುಮಾರ್ ವಾಯುಪುತ್ರ ಪರಶುರಾಮ್ ಎಡಹಳ್ಳಿ ರಾಷ್ಟ್ರೀಯ ಪ್ರತಿಭಾನ್ವೇಷಣೆ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಶಿಷ್ಯವೇತನಕ್ಕೆ ಅರ್ಹನಾಗಿದ್ದಾನೆ.  

ತಾಲೂಕಿನ ಹರನಾಳ ಗ್ರಾಮದ ಪರಶುರಾಮ ಮತ್ತು ಅಕ್ಷತಾ ಯಡಹಳ್ಳಿ ದಂಪತಿಗಳ ಪುತ್ರನಾಗಿರುವ ಈ ವಿದ್ಯಾರ್ಥಿಗೆ ನ್ಯಾಷನಲ್ ಮೀನ್ಸ್‌ ಕಮ್ ಮೆರಿಟ್ ಸ್ಕಾಲರ್ಶಿಪ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 180 ಕ್ಕೆ 109 ಅಂಕ ಬಂದಿದ್ದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಶಿಷ್ಯವೇತನಕ್ಕೆ ಅಹರನಾಗಿದ್ದಾನೆ. ಸ್ಪರ್ಧಾತ್ಮಕ ಪರೀಕ್ಷೆಯ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿಎಸ್ ಸಾವಳಗಿ ಮತ್ತು ಎನ್ ಎಂ ಎಂ ಎಸ್ ನೋಡಲ್ ಅಧಿಕಾರಿ ಅಮೋಘಸಿದ್ಧ ಬಗಲಿ ಅವರು ವಿಶೇಷ ಕಾಳಜಿ ವಹಿಸಿ ಎಸ್ ಕೆ ಪ್ರೌಢಶಾಲೆಯಲ್ಲಿ ಒಂದು ದಿನದ ಕಾರ್ಯಗಾರ ನಡೆಸಿ ಪರೀಕ್ಷೆ ಪೂರ್ವದಲ್ಲಿ ತಾಳಿಕೋಟಿ ತಾಲೂಕಿನ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಪರೀಕ್ಷೆಯ ವಿಶೇಷ ತರಬೇತಿ ನೀಡಿದ್ದರು. ಇದು ವಿದ್ಯಾರ್ಥಿ ವಾಯುಪುತ್ರ ಎಡಹಳ್ಳಿ ಯಶಸ್ವಿಯಲ್ಲಿ ಸಹಕಾರಿ ಯಾಗಿದೆ.  

ವಿದ್ಯಾರ್ಥಿಯ ಈ ಸಾಧನೆಗೆ ವಿ.ವಿ.ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ,ಉಪಾಧ್ಯಕ್ಷ ಬಿಎನ್ ಹಿಪ್ಪರಗಿ,ಕಾರ್ಯದರ್ಶಿ ಎಂ.ಎಸ್‌. ಸರಶಟ್ಟಿ,ಸಹ ಕಾರ್ಯದರ್ಶಿ ಕೆ.ಎಸ್‌.ಮುರಾಳ,ಹೈಸ್ಕೂಲ್ ವಿಭಾಗದ ಅಧ್ಯಕ್ಷ ಎಂ.ಜಿ.ಕತ್ತಿ,ಪ.ಪೂ.ಕಾಲೇಜ ಅಧ್ಯಕ್ಷ ಎಂ.ಆರ್‌.ಕತ್ತಿ, ಉಪ ಪ್ರಾಚಾರ್ಯ ಜೆ.ಎಸ್‌.ಕಟ್ಟಿಮನಿ,ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗೆ ಅಭಿನಂದಿಸಿದ್ದಾರೆ.