ಗ್ರಾಮೀಣ ರಸ್ತೆಗಳ ಸುಧಾರಣೆಯಿಂದ ಆರ್ಥಿಕ ಸಬಲತೆ - ಪ್ರಕಾಶ್ ಕೋಳಿವಾಡ
Economic empowerment through improvement of rural roads - Prakash Koliwad
ರಾಣಿಬೆನ್ನೂರು :27 ಗ್ರಾಮೀಣ ರಸ್ತೆಗಳು ಸರಿಯಾಗಿದ್ದರೆ ರೈತ ಸಮುದಾಯಕ್ಕೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವುದರ ಜೊತೆಗೆ, ರಾಜ್ಯದ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ತುಂಬಾ ಸಹಕಾರಿಯಾಗಲಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.
ಅವರು ತಾಲೂಕಿನ ಹರನಗಿರಿ ಗ್ರಾಮದಲ್ಲಿ, ಬಾಗಲಕೋಟೆ ಬಿಳಿಗಿರಿರಂಗನ ಬೆಟ್ಟ ರಸ್ತೆಗೆ ಸಂಪರ್ಕ ಕಲ್ಪಿಸುವ ಚಿಕ್ಕ ಕುರುವತ್ತಿ - ಚೌಡಯ್ಯದಾನಪುರ ರಸ್ತೆ ಸುಧಾರಣಾ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದರು. ಸರ್ಕಾರ ರಾಜ್ಯದ ಎಲ್ಲಾ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ, ಭೂಮಿ ಪೂಜೆ ನೆರವೇರಿಸುವುದರ ಮೂಲಕ ಆಯಾ ಪ್ರದೇಶಗಳಲ್ಲಿ ಕಾಮಗಾರಿ ಆರಂಭಿಸಿದೆ. ನಮ್ಮ ಕ್ಷೇತ್ರದಲ್ಲಿ ಆಗಬಹುದಾದ ಆಗಬೇಕಾದ ಎಲ್ಲಾ ಕಾಮಗಾರಿಗಳನ್ನು ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದರು.
ತಾಲೂಕಿನಲ್ಲಿ ಹರನಗಿರಿ ಗ್ರಾಮ ಸೇರಿದಂತೆ ಇದರ ವ್ಯಾಪ್ತಿಯ, ಯತ್ತಿನಹಳ್ಳಿ, ಗುಡಗೂರು ಗುಡಗೂರ ತಾಂಡೆ ಮತ್ತಿತರ ಕಡೆಗಳಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು. ಗ್ರಾಮದ ನಾಗರಿಕರು ಯಾವುದೇ ಪಾರ್ಟಿ ಪಕ್ಷ ಭೇಧ,ಭಾವ ಎಣಿಸದೆ, ಅಭಿವೃದ್ಧಿ ಕಾರ್ಯಗಳ ಕುರಿತು ಚಿಂತನೆ ನಡೆಸಬೇಕು. ಇಲ್ಲಿ ಮತ್ತೆ ಏನಾಗಬೇಕು ಎನ್ನುವುದನ್ನು ತಿಳಿಸಿದರೆ ಅದು ಸಹ ಮಾಡಿಸಲು ತಾವು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಸೋಮರೆಡ್ಡಿ ರಾಯರೆಡ್ಡಿ, ಗ್ರಾಪಂ ಅಧ್ಯಕ್ಷ ಶ್ರೀಮತಿ ರೇಣುಕಾ ಶ್ರೀಕಾಂತ್ ಪುಟ್ಟಪ್ಪನವರ, ಶೇಕಪ್ಪ ತೋಪಿನ, ಶ್ರೀಕಾಂತ್ ಪುಟ್ಟಪ್ಪನವರ, ಚಂದ್ರ್ಪ ಮಡಿವಾಳರ, ಕುಬೇರ್ಪ ತೋಪಿನ್, ಭರ್ಮಪ್ಪ ಕುದುರಿಹಾಳ ಶಿವಪ್ಪ ಚಿಕ್ಕಪ್ಪನವರ, ರಾಜಪ್ಪ, ಗುತ್ತಿಗೆದಾರ ಎನ್.ಜಿ. ಜಾಧವ, ಸೇರಿದಂತೆ ಗ್ರಾಮದ ಅನೇಕ ಮುಖಂಡರು, ಗಣ್ಯರು, ಗುತ್ತಿಗೆದಾರರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 