ಇಕೋ ಸಂಸ್ಕೃತಿ ಪಯಣ ಮ್ಯಾರಥಾನ ಅಭಿಯಾನ
Eco Culture Travel Marathon Campaign
ಬಳ್ಳಾರಿ 06: ನಗರದಲ್ಲಿ ವೀರಶೈವ ವಿದ್ಯಾವರ್ಧಕ ಸಂಘ, ಎಸ್ ಕೆ ಮೋದಿ ನ್ಯಾಷನಲ್ ಶಾಲೆ, ಬಳ್ಳಾರಿ ಶಾಲಾ ವತಿಯಿಂದ ಶುಕ್ರವಾರದಂದು ಬೆಳಿಗ್ಗೆ 6.30 ಗಂಟೆಗೆ "ಇಕೋ ಸಂಸ್ಕೃತಿ ಪಯಣ ಮ್ಯಾರಥಾನ್ " ಅಭಿಯಾನವನ್ನು ಆರಂಭಿಸಲಾಯಿತು.ಇದು ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಅಭಿಯಾನವಾಗಿದೆ.ಈ ಅಭಿಯಾನಕ್ಕೆ ಬಳ್ಳಾರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಶೋಭಾರಾಣಿ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಕೆ ಮೋದಿ ಶಾಲೆಯ ಅಧ್ಯಕ್ಷರು ಏಳುಬೆಂಚಿ ರಾಜಶೇಖರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್ ಕೆ ಮೋದಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ಅಣ್ಣ ವಿರೂಪಾಕ್ಷಪ್ಪ, ವಸಂತಕುಮಾರ ಗೌಡ ಪಾಟೀಲ್, ಪ್ರಾಂಶುಪಾಲರಾದ ಶ್ರೀಮತಿ ಸುನಂದಾ ಎಂ ಪಾಟೀಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣದ ಮಹತ್ವ ಹಾಗೂ ಮಕ್ಕಳಿಗೆ ಪರೀಕ್ಷಾ ಭಯವನ್ನು ಹೋಗಲಾಡಿಸಲು ಸಲಹೆಯನ್ನು ನೀಡಿದರು. ಸಾಧನೆ ಎನ್ನುವುದು ರಾತ್ರೋರಾತ್ರಿ ಆಗುದಲ್ಲ ಅದಕ್ಕೆ ಶ್ರಮ ಪಡಬೇಕು, ಸತತ ಪ್ರಯತ್ನಿಸಬೇಕು ಎಂಬ ಸ್ಫೂರ್ತಿಯ ನುಡಿಗಳನ್ನು ಮಕ್ಕಳಿಗೆ ತಿಳಿಸಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಅಧ್ಯಕ್ಷರು ಏಳುಬೆಂಚಿ ರಾಜಶೇಖರರವರು ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಎಂಬ ವಿಷಯದ ಕುರಿತು ಮಾತನಾಡಿದರು. ನಂತರ ಇಕೋ ಸಂಸ್ಕೃತಿ ಪಯಣ ಅಭಿಯಾನ ಪ್ರಾರಂಭವಾಯಿತು. ಶಾಲೆಯಿಂದ ಪ್ರಾರಂಭವಾಗಿ ವಿದ್ಯಾನಗರ ಸರ್ಕಲ್, ಸುಧಾ ಕ್ರಾಸ್ ಮಾರ್ಗವಾಗಿ ಪ್ರಮುಖ ಸರ್ಕಲ್ ಗಳಲ್ಲಿ ಮ್ಯಾರ್ಥನ್ ಓಟ ಜರುಗಿತು. ಸಾರ್ವಜನಿಕರಿಗೆ ವೃಕ್ಷದ ಬೀಜಗಳನ್ನು ಕೊಡುವುದರ ಮೂಲಕ ಹಸಿರು ಸಂಸ್ಕೃತಿ ಮಹತ್ವವನ್ನು ಸಾರಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 