ಆರೋಗ್ಯಯುತ ಜೀವನಕ್ಕೆ ಪೌಷ್ಟಿಕ ಆಹಾರ ಸೇವಿಸಿ: ಪಾಟೀಲ

ಆರೋಗ್ಯಯುತ ಜೀವನಕ್ಕೆ  ಪೌಷ್ಟಿಕ ಆಹಾರ ಸೇವಿಸಿ: ಪಾಟೀಲ  Eat nutritious food for a healthy life: Patil

ಸಿಂದಗಿ  18: ಆರೋಗ್ಯಯುತ ಜೀವನಕ್ಕೆ ಸ್ವಚ್ಛ, ಶುದ್ಧ ಹಾಗೂ ಪೌಷ್ಟಿಕ ಆಹಾರ ತಯಾರಿಸಿ ಸೇವಿಸಬೇಕು ಎಂದು ಪಟ್ಟಣದ ಡಾ.ಭಾವಿಕಟ್ಟಿ ಆಸ್ಪತ್ರೆಯ ಡಾ.ಸಂಗಮೇಶ ಪಾಟೀಲ ಹೇಳಿದರು. 

ಪಟ್ಟಣದ ಭಾವಿಕಟ್ಟಿ ಆಸ್ಪತ್ರೆಯಲ್ಲಿ ಬುಧವಾರ ಸಣ್ಣ ಕೈಗಾರಿಕೆ ಮತ್ತು ಆಹಾರ ಉತ್ಪಾಧಕ ಘಟಕಗಳ ವತಿಯಿಂದ ಹಮ್ಮಿಕೊಂಡ ಪೌಷ್ಠಿಕ ಆಹಾರದ ಉತ್ಪನ್‌ಗಳ ಕಾರ್ಯಾಗಾರದಲ್ಲಿ ಹೇಲ್ತ ಪ್ರೌಡ- ದೇಹದ ಸಮತೋಲನ ಪೋಷಣೆಯ ಆಹಾರ ಉತ್ಪನ್ ಬಿಡುಗಡೆ ಮಾಡಿ ಅವರು ಅವರು ಮಾತನಾಡಿದರು. 

ಕೇಂದ್ರ ಸರ್ಕಾರ ಆಹಾರ ಧಾನ್ಯ ಉತ್ಪನ್ ತಯಾರಿಕಾ ಘಟಕ ಸ್ಥಾಪಿಸಲು ಉತ್ತೇಜನ ನೀಡುತ್ತಿದೆ. ಇದರ ಸದುಪಯೋಗ ಯುವಕರು ಸದುಪಯೋಗ ಪಡೆಸಿಕೊಳ್ಳ ಬೇಕು. ಸಿರಿಧಾನ್ಯಗಳು ಇತ್ತೇಚೆಗೆ ಸಾಮಾನ್ಯವಾಗಿ ಕಾಡುವ ಬಿಪಿ, ಶುಗರ್ ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಸಿರಿಧಾನ್ಯಗಳು ರಾಜ್ಯದಲ್ಲಿ ಹೆರಳವಾಗಿ ಸಿಗುತ್ತವೆ. ಸಿರಿಧಾನ್ಯಗಳ ಆಹಾರ ಉತ್ಪನ್‌ಗಳ ತಯಾರಿಸಲು ಯುವಕರು ಮುಂದಾಗಬೇಕು. ತಾಳಿಕೋಟಿ ತಾಲೂಕಿನ ಗಡಿಸೋಮನಾಳ ಗ್ರಾಮದ ಯುವಕ ಶ್ರೇಯಸ್ ಇಂಡಸ್ಟರೀಸ್ ಮೂಲಕ ಹೇಲ್ತ ಪ್ರೌಡ- ದೇಹದ ಸಮತೋಲನ ಪೋಷಣೆಯ ಆಹಾರ ಉತ್ಪನ್ ಸಿದ್ದ ಪಡೆಸಿದ್ದಾನೆ. ಈ ಉತ್ಪನ್ ಸಿರಿದಾನ್ಯಗಳಿಂದ ಕುಡಿದೆ. ಇದರ ಸೇವನೆ ಆರೋಗ್ಯಕ್ಕೆ ಉತ್ತಮವಾಗಿದೆ. ಅಲ್ಲದೇ ದೇಹದ ಸಮತೋಲನ ಪೋಷಣೆಯ ಆಹಾರವಾಗಿದೆ ಎಂದು ಹೇಳಿದರು. 

ಚೇತನಾ ಮೇಡಿಕಲ್‌ನ ಸಿ.ವಾಯ್‌. ಪಾಟೀಲ, ಕ್ಷ-ಕಿರಣ ತಂತ್ರಜ್ಞೆ ಸುರೇಖಾ ಭಜಂತ್ರಿ, ಸುನೀಲ ಮಜ್ಜಗಿ, ಸಂಗಣ್ಣ ಹರವಾಳ, ಮೌನೇಶ ಪೂಜಾರಿ, ಭಗವಂತ್ರಾಯ ವಾಲಿಕಾರ, ರಾಘವೆಂದ್ರ ಕಾಂಬಳೆ, ಸನಿಕಿತಾ ಬಿರಾದಾರ, ವೀಣಾ ಸಿಂಗೆ, ಚನ್ನು ಪಟ್ಟಣಶೆಟ್ಟಿ ಸೇರಿದಂತೆ ಇತರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.