ಅಂತರರ್ಜಲ ಹೆಚ್ಚಾಗಿ ವಿವಿದ ಜಿಲ್ಲೆಯಲ್ಲಿ ಭೂ ಕಂಪನ
Earthquakes in various districts, mostly underground
ಅಂತರರ್ಜಲ ಹೆಚ್ಚಾಗಿ ವಿವಿದ ಜಿಲ್ಲೆಯಲ್ಲಿ ಭೂ ಕಂಪನ
ಸಿಂದಗಿ; ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹೆಚ್ಚುವರಿ ನೀರು ಹರಿದು ಬರುತ್ತಿರುವುದರಿಂದ ಅಲ್ಲದೆ ವಾಡಿಕೆಯಂತೆ ಮಳೆ ಹೆಚ್ಚಾಗಿದ್ದರಿಂದ ಅಂತರರ್ಜಲ ಹೆಚ್ಚಾಗಿ ರಾಜ್ಯದ ಬೀದರ, ಕಲಬುರ್ಗಿ, ವಿಜಯಪುರ ಸೇರಿದಂತೆ ಒಟ್ಟು 174 ಕಡೆ ಭೂ ಕಂಪನವಾಗಿದ್ದು ವಿಜಯಪುರ ಜಿಲ್ಲೆಯಲ್ಲಿ 74 ಬಾರಿ ಭೂ ಕಂಪನವಾಗಿದೆ ಇದರಿಂದ ಯಾವುದೇ ಹಾನಿಯಿಲ್ಲ ಸಾರ್ವಜನಿಕರು ಭಯ ಪಡುವ ಹಾಗಿಲ್ಲ ಎಂದು ಕೆಎಸ್‌ಎನ್‌ಡಿಎಂಎಸ್‌ನ ವೈಜ್ಞಾನಿಕ ಅಧಿಕಾರಿ ಜಗದೀಶ ಸ್ಪಷ್ಟಪಡಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿರುವ ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಎನ್‌ಡಿಎಂಎಸ್‌ನ ವೈಜ್ಞಾನಿಕ ಅಧಿಕಾರಿ ಮಾತನಾಡಿ, ಸಿಂದಗಿ 47, ಬ.ಬಾಗೆವಾಡಿ 22, ಬಬಲೇಶ್ವರ 4, ವಿಜಯಪುರ 7 ಹೀಗೆ 74 ಕಡೆಗಳಲ್ಲಿ ಭೂ ಕಂಪನವಾಗಿದೆ ಇದು ಅಕ್ಟೋಬರ ತಿಂಗಳ ಅಂತ್ಯದವರೆಗೆ ಮಳೆಯಿರುವ ಕಾರಣ ಹೀಗೆ ಕಾಣಿಸಿಕೊಳ್ಳುವುದು ಸಹಜ. ಸಿಂದಗಿ ಬಾಗದಲ್ಲಿ ಸುಣ್ಣದ ಕಲ್ಲುವಿದೆ ಅದು ಪೌಡರವಾಗಿ ನೀರು ಮಿಶ್ರಣವಾಗಿ ನೀರಿನ ಒತ್ತಡ ಜಾಸ್ತಿಯಾಗಿ ಉದ್ಬವವಾದ ಶಬ್ದ ಸಹಿತ ಕಂಪನವಾಗುತ್ತಿದೆ ಇದರಿಂದ ಭೂಕುಸಿತ ಸಂಬವಿಸುವುದಿಲ್ಲ. ಯಾವುದೇ ಕಟ್ಟಡಗಳಿಗೆ ಹಾನಿಯಿಲ್ಲ ಕಂಪನ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರೆ ಹೊರಗಡೆಯಿದ್ದು ಯಾವುದೊ ಕಾರ್ಯದಲ್ಲಿ ತೊಡಗಿ ಅದಕ್ಕೆ ಯಾರು ಭಯಪಡುವ ಅಗತ್ಯವಿಲ್ಲ. ಎಂದು ಸಲಹೆ ನೀಡಿದರು.
ತಹಸಿಲ್ದಾರ್ ಕರೆಪ್ಪ ಬೆಳ್ಳಿ ಮಾತನಾಡಿ, ಕಳೇದ ಮೇ ತಿಂಗಳಿನಿಂದ ಪ್ರಾರಂಭವಾದ ಮಳೆ ಇನ್ನೂವರೆ ಮುಂದುವರೆದಿದೆ ಅದಕ್ಕೆ ಅಂತರರ್ಜಲ ಹೆಚ್ಚಾಗಿದ್ದು ಆದ್ದರಿಂದ ಭೂಕಂಪನವಾಗುತ್ತಿದೆ ಇದು ಭೂಕಂಪವಲ್ಲ ಸಾರ್ವಜನಿಕರು ಯಾವುದೇ ಆತಂಕ ಪಡಬೇಕಾಗಿಲ್ಲ. ರಾಂಪೂರದಲ್ಲಿ ಭೂಕಂಪನ ಮಾಪನ ಅಳವಡಿಸಲಾಗಿದ್ದು ಕಂಪನವಾಗುತ್ತಿರುವ ಬಗ್ಗೆ ಮಾಹಿತಿ ದೊರಕುತ್ತದೆ ಅದನ್ನು ಹಂತ ಹಂತವಾಗಿ ಮಾಹಿತಿ ನೀಡಲಗುವುದು ಎಂದರು.
ಈ ಸಂದರ್ಭದಲ್ಲಿ ವೈಜ್ಞಾನಿಕ ಸಹಾಯಕ ಅಧಿಕಾರಿಗಳಾದ ಸಂತೋಷಕುಮಾರ, ಅಣುವೀರ್ಪ ಬಿರಾದಾರ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 