ಪೂರ್ವ ಚೀನಾದಲ್ಲಿ ಲೆಕಿಮಾ ಚಂಡಮಾರುತದಿಂದ ಭೂಕುಸಿತ: 28 ಸಾವು

ಹ್ಯಾಂಗ್ಜಹು, ಆಗಸ್ಟ್ 11      ಪೂರ್ವ ಚೀನಾದ ಜೆಜಿಯಾಂಗ್ ಪ್ರಾಂತ್ಯದಲ್ಲಿ ಲೆಕಿಮಾ ಚಂಡಮಾರುತ ಅಪ್ಪಳಿಸಿದ ಬಳಿಕ ಶನಿವಾರ ಭೂಕುಸಿತ ಸಂಭವಿಸಿ ಒಟ್ಟು 28 ಜನರು ಸಾವನ್ನಪ್ಪಿದ್ದು, ಇತರ 20 ಜನರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಭಾನುವಾರ ಬೆಳಿಗ್ಗೆ ತಿಳಿಸಿದ್ದಾರೆ. ಚಂಡಮಾರುತ ಬಾಧಿತ ಪ್ರದೇಶವಾದ ಜೆಜಿಯಾಂಗ್ ನಿಂದ ಸುಮಾರು 1.8 ದಶಲಕ್ಷ ಜನರನ್ನು  ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹಕ್ಕೆ 5 ದಶಲಕ್ಷ ಜನರು ಸಂತ್ರಸ್ತರಾಗಿದ್ದಾರೆ ಎಂದು ಪ್ರಾಂತ್ಯದ ಪ್ರವಾಹ ನಿಯಂತ್ರಣ ಕೇಂದ್ರ ಕಚೇರಿ ತಿಳಿಸಿದೆ.    ಜೆಜಿಯಾಂಗ್ನಲ್ಲಿ ಶನಿವಾರ ಸುಮಾರು 1.45ರ ಸುಮಾರಿಗೆ ಚಂಡಮಾರುತ ಅಪ್ಪಳಿಸಿದ್ದು, ಭಾರಿ ಮಳೆ ಬಿರುಗಾಳಿ ಬೀಸಿದೆ. ಇದು ಪ್ರವಾಹಕ್ಕೆ ಕಾರಣವಾಯಿತು. ಯೋಂಗ್ಜಿಯಾ ಕೌಂಟಿಯಲ್ಲಿ, ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಭೂಕುಸಿತ ಉಂಟಾಯಿತು. ಸರೋವರಕ್ಕೆ ಕಟ್ಟಿದ ತಡೆಗೋಡೆ ಒಡೆದು ಪ್ರವಾಹ ಉಂಟಾಗಿ ಜನರು ತೊಂದರೆಗೊಳಗಾದರು ಎಂದು ಕ್ಸಿನ್ಹುವಾ ನ್ಯೂಸ್ ವರದಿ ಮಾಡಿದೆ. ಲೆಕಿಮಾ ಚಂಡಮಾರುತ ಭಾನುವಾರ ಪೂರ್ವ ಕರಾವಳಿಯ ಶಾಂಡೋಂಗ್ ಪ್ರಾಂತ್ಯದ ಕಡೆಗೆ ಚಲಿಸುವ ಸಾಧ್ಯತೆ ಇದೆ.