ಪ್ರತಿಯೊಬ್ಬ ರೋಗಿಯನ್ನು ಗೌರವದಿಂದ ಕಾಣಬೇಕು: ನಾಯಕ
ಲೋಕದರ್ಶನ ವರದಿ
ಹಾವೇರಿ 27: ವೈದ್ಯರಿಗೆ ರೋಗಿಗಳೆ ಆಸ್ತಿ ಆದ್ದರಿಂದ ನಮ್ಮ ಹತ್ತಿರ ಬರುವ ಪ್ರತಿಯೊಬ್ಬ ರೋಗಿಯನ್ನು ನಾವು ಗೌರವದಿಂದ ಕಾಣಬೇಕು ಅಂದಾಗ ಮಾತ್ರ ವೈದ್ಯರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಟಿ ನಾಗರಾಜ ನಾಯಕ ಹೇಳಿದರು.
ಪಟ್ಟಣದ ಜಿಲ್ಲಾ ಆಸ್ಪತ್ರೆವತಿಯಿಂದ ಹಮ್ಮಿಕೊಂಡ 70 ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮುದ್ದು ಮಕ್ಕಳಗಳು ಜೊತೆಗೂಡಿ ದ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾರೇ ಸಿಬ್ಬಂದಿಗಳಾಗಲಿ ಅಥವಾ ನಾನೇ ತಪ್ಪು ಮಾಡಲಿ ಅದು ತಪ್ಪೆ ಅದಕ್ಕೆ ಎಲ್ಲರೂ ಸ್ಪಂದನೆ ಮಾಡದೇ ಅವರಿಗೆ ತಪ್ಪಿನ ಅರಿವನ್ನು ಮೂಡಿಸಬೇಕು ಹಾಗೂ ಎಲ್ಲ ಸಿಬ್ಬಂದಿಗಳು ಒಗ್ಗಟಿನಿಂದ ಕೆಲಸ ಕಾರ್ಯವನ್ನು ನಿರ್ವಹಿಸಬೇಕು ಅಂದಾಗ ನಾವು ಯಶಸ್ಸು ಕಾಣಲು ಸಾದ್ಯವಾಗುತ್ತದೆ ಎಂದು ಮಾಮರ್ಿಕವಾಗಿ ಹೇಳಿದರು. ಮತ್ತು 2018-19 ನೇ ಸಾಲಿನ ಉತ್ತಮ ಸೇವೆಗಾಗಿ ಸವರ್ೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾದ ಜಿಲ್ಲಾ ಆಸ್ಪತ್ರೆಯ ಡಾ. ನಿರಂಜನ ಮಾಲಿ ಬಣಕಾರ ಅವರನ್ನು ಅಬಿನಂದಿಸಿದರು.
ಸ್ಥಾನಿಕ ವೈದ್ಯಾದಿಕಾರಿ ಡಾ. ಸುರೇಶ ಪೂಜಾರ ಮಾತನಾಡಿ ಸಾರ್ವಜನಿಕರಿಗೆ ಉತ್ತಮವಾದ ಆರೋಗ್ಯವನ್ನು ನಿಮರ್ಾಣ ಮಾಡಿ ಕೊಡುವಲ್ಲಿ ನಮ್ಮ ನಿಮ್ಮೆಲ್ಲರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಪಿ.ಆರ್. ಹಾವನೂರ, ಮಹಿಳಾ ತಜ್ಞ ವೈದ್ಯರಿಂದ, ನಿರ್ಮಲಾ ಹೆಗಡೆ, ರಕ್ಷಿತಾ ಸಂಕನಗೌಡ್ರ ಹಾಗೂ ನಸರ್ಿಂಗ್ ಶಾಲಾ ವಿದ್ಯಾಥರ್ಿನಿಯರಿಂದ ದೇಶಭಕ್ತಿ ಗಿತೆಯ ಕಾರ್ಯಕ್ರಮಗಳು ಜರುಗಿದವು.ಆರೋಗ್ಯ ರಕ್ಷಾ ಸಮಿತಿಯ ಅದಿಕಾರೇತರ ಸದಸ್ಯರಾದ ನಾಗಪ್ಪ ಬಸಗಣ್ಣಿ, ಬಸವರಾಜ ಕಾಯಕದ, ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ತಜ್ಞ ವೈದ್ಯರು ಹಾಗೂ ಎಲ್ಲ ವಿಭಾಗದ ಸಿಬ್ಬಂದಿ ವರ್ಗದವರು, ನಸರ್ಿಂಗ್ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 