ಟಿಬೆಟ್ನಲ್ಲಿ 5.1 ತೀವ್ರತೆ ಭೂಕಂಪ, ಪ್ರಾಣಹಾನಿಯಿಲ್ಲ

 
ಲಾಸಾ, ಮಾರ್ಚ್ 13: ನೈ ರುತ್ಯ  ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ. ಭೂಕಂಪಕನದ ತೀವ್ರತೆ ರಿಕ್ಟರ್ ಮಾಪನದಲ್ಲಿ  5.1 ಎಂದೂ  ದಾಖಲಾಗಿರುವುದಾಗಿ  ಗುರುವಾರ, ಚೀನಾ ಭೂಕಂಪ ಜಾಲ  ಕೇಂದ್ರ ವರದಿ ಮಾಡಿದೆ.   ಭೂಕಂಪನದ ಕೇಂದ್ರ ಬಿಂದು   ಗೊಗ್ಮೊ ಗ್ರಾಮದಲ್ಲಿತ್ತು ಎನ್ನಲಾಗಿದೆ  ಸ್ಥಳೀಯ ಜನರಿಗೆ ಭೂಮಿ  ನಡುಗಿದ  ಅನುಭವವಾಗಿದೆ  ಆದರೂ ಸಹ  ದೂರಸಂಪರ್ಕ, ವಿದ್ಯುತ್ ಮತ್ತು ನೀರು ಸರಬರಾಜು ಅಲ್ಲಿ  ಸಾಮಾನ್ಯವಾಗಿದೆ.