ರಾಣೇಬೆನ್ನೂರು: ಮೆ 6 ಮನುಷ್ಯನ ಬದುಕು ಮತ್ತು ಜೀವನ ಸುಂದರ ವಾಗಿರಬೇಕಾದರೆ, ಮಾನಸಿಕ ಶಾಂತಿ ಮತ್ತು ನೆಮ್ಮದಿ ಅಗತ್ಯ ಮತ್ತು ಅವಶ್ಯವಾಗಿದೆ ಎಂದು ಲಿಂಗ ನಾಯಕನಹಳ್ಳಿ ಜಂಗಮ ಕ್ಷೇತ್ರದ ಶ್ರೀ ಚನ್ನವೀರ ಮಹಾಶಿವಯೋಗಿಗಳು ಹೇಳಿದರು.
ಅವರು ಸೋಮವಾರ ತಾಲೂಕಿನ ಇತಿಹಾಸ ಪ್ರಸಿದ್ಧ ಕೊನಬೇವು ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ನೂತನ ಗೋಪುರ, ಭರಮದೇವರ ಕಳಸಾರೋಹಣ ಶ್ರೀ ಬಸವ ದರ್ಶನ ಪ್ರವಚನ, ಮತ್ತು ತುಂಬಾೋತ್ಸವ ಧರ್ಮ ಸಭೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಸಂಸ್ಕೃತಿ ಮತ್ತು ಸಂಸ್ಕಾರ ಭಾರತೀಯ ಮಹಿಳೆಯ ಪರಂಪರೆ, ಮಹಿಳೆ ದೇಶವನ್ನು ಆಳಬಲ್ಲಳು. ಇಂದು ಕೇವಲ ನಾಲ್ಕು ಗೋಡೆಗೆ ಸೀಮಿತವಾಗದೆ ಎಲ್ಲ ರಂಗಗಳಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡು ಶ್ರಮಿಸುತ್ತಿದ್ದಾಳೆ ಎಂದರು. ಆಧುನಿಕ ಬದುಕಿನಲ್ಲಿ ಧರ್ಮದರ್ಶನ ದೂರವಾಗಿ, ದೂರದರ್ಶನ ಹತ್ತಿರವಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು, ಧರ್ಮ ಮತ್ತು ಸಂಸ್ಕಾರ ಅಳವಡಿಸಿಕೊಂಡು ಧರ್ಮದ ಕಾರ್ಯದಲ್ಲಿ ಮುಂದಾಗಿರುವುದು ತುಂಬಾ ಸಂತೋಷ ನೀಡಿದೆ ಎಂದರು.
ಸ್ವಾಮಿಗಳಾದವರಿಗೆ ಯಾವುದೇ ಜಾತಿ, ಮತ, ಪಕ್ಷ, ಪಂಗಡ ಭೇದ ಭಾವ ಇಲ್ಲ ಅವರು ಅಳವಡಿಸಿಕೊಳ್ಳುವುದಿಲ್ಲ.ಎತ್ತಿಕೊಂಡವರ ಕೂಸು. ಸರ್ವ ಜನಾಂಗದ ಮತ್ತು ಭಕ್ತರ ಉದ್ಧಾರವನ್ನು ಬಯಸುತ್ತಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರು ಮಾತನಾಡಿ, ಸಮಾಜದಲ್ಲಿ ಶಾಂತಿ ನೆಮ್ಮದಿಗಾಗಿ, ಧರ್ಮದೇಗುಲಗಳ ಮೂಲಕ ಪೂಜೆ ಪ್ರಾರ್ಥನೆಗಳು ನಿತ್ಯ ನಿರಂತರವಾಗಿ ನಡೆಯಬೇಕಾಗಿದೆ. ಅಂತಹ ಧರ್ಮ ಪರಂಪರೆಯ ಗ್ರಾಮ ಇದಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ತತ್ವ ಇಲ್ಲಿನ ನಾಗರಿಕರು ಅಳವಡಿಸಿಕೊಂಡಿದ್ದಾರೆ. ಜಿಲ್ಲೆಗೆ ಇದು ಹೆಮ್ಮೆ ತರುವ ಸಂಗತಿ ಎಂದರು. ತಾಲೂಕಿನ ಸರ್ವಾಗಿಣ ಅಭಿವೃದ್ಧಿಗಾಗಿ, ತಾವು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆಗಬೇಕಾದಷ್ಟು ಸಾಕಷ್ಟಿದೆ ಭವಿಷ್ಯದ ದಿನಗಳಲ್ಲಿ ಸಮಗ್ರ ಅಭಿವೃದ್ಧಿಗೆ ತಾವು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು.
ಇದೇ ಸಂದರ್ಭದಲ್ಲಿ ವಿವಿಧ ರೂಪದಲ್ಲಿ ಧನ ಸಹಾಯ ನೀಡಿದ ನೂರಾರು ಭಕ್ತರಿಗೆ, ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು. ದಿವ್ಯ ನೇತೃತ್ವದಲ್ಲಿದ್ದ ಗುಡ್ಡದ ಆನ್ವೇರಿ ಶ್ರೀ ಶಿವಯೋಗಿಸ್ವರ ಶ್ರೀಗಳು, ವಿಜಯಪುರ ಪತ್ರಿಮಠದ ಶ್ರೀ ಬಸವಕುಮಾರ ಶ್ರೀಗಳು, ಶ್ರೀ ಬಸಯ್ಯ ಹಿರೇಮಠ ಶ್ರೀಗಳವರು ತಮ್ಮ ಧರ್ಮ ಸಂದೇಶಾ ಮೃತ ನೀಡಿದರು. ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್. ಪಾಟೀಲ್, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ್ ಸಜ್ಜನರ, ಬಿಜೆಪಿ ಮುಖಂಡ ಎಂ.ಎಸ್.ಪಾಟೀಲ್, ಜಿ.ಪಂ.ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಸವಣೊರ, ದೇವಸ್ಥಾನ ಸಮಿತಿ ಅಧ್ಯಕ್ಷ ಪರಮೇಶಪ್ಪ ತೋರಗಲ್ಲ ಸೇರಿದಂತೆ ಮತ್ತಿತರ ಗಣ್ಯರು ಮಾತನಾಡಿದರು.
ವೇದಿಕೆಯಲ್ಲಿ ಮುಖಂಡರಾದ ಮಾಳಪ್ಪ ಪೂಜಾರ, ಶಂಕರ್ ಅಣಜಿ, ರಾಜಶೇಖರ ಬಣಕಾರ್, ಗುತ್ತಿಗೆದಾರ ಷಣ್ಮುಖಪ್ಪ ಬಳ್ಳಾರಿ, ರಮೇಶ್ ಮಾಡಳ್ಳಿ, ಸೈನಿಕರಾದ ಗುಡ್ಡಣ್ಣ ನೆಗಳೂರ, ಗ್ರಾ. ಪಂ. ಅಧ್ಯಕ್ಷ ಬಸವ್ವ ತಳವಾರ, ಉಪಾಧ್ಯಕ್ಷೆ ಲಕ್ಷ್ಮವ್ವ ಚಟ್ನಿ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂರಾರು ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಹನಾ ಸಂಘಟನೆಗಳು ಪ್ರಾರ್ಥಿಸಿದರು. ಗವಾಯಿ ಮಲ್ಲಿಕಾರ್ಜುನ ತಂಡದವರು ವಚನ ಸಂಗೀತ ಸೇವೆ ಸಲ್ಲಿಸಿದರು. ಶಿಕ್ಷಕ ಶಿವರಾಜ ಜ್ಯೋತಿ ಸ್ವಾಗತಿಸಿದರು. ಪ್ರೊ, ಗುಡ್ಡಪ್ಪ ಮಾಳ ಗುಡ್ಡಪ್ಪನವರ, ನಿರೂಪಿಸಿ, ಶಿಕ್ಷಕ ಎಂ.ಎಸ್. ಗಾಣಿಗೇರ, ವಂದಿಸಿದರು, ಅದ್ದೂರಿಯಾಗಿ ನಡೆದ ವಿವಿಧ ಧಾರ್ಮಿಕ ಸಮಾರಂಭದಲ್ಲಿ, ಪುರುಷರಿಗಿಂತ, ಅಧಿಕ ಸಂಖ್ಯೆಯಲ್ಲಿ ಮಹಿಳೆಯರೇ ಪಾಲ್ಗೊಂಡ್ಡಿ ದ್ದು, ಕಾರ್ಯಕ್ರಮದ ವಿಶೇಷವಾಗಿತ್ತು.ಊ6ಖಓಖ01-ಓಇಘಖ. ಂಓಆ. ಫೋಟೋ.