ನರೇಗಾ ಜಾಬ್ ಕಾರ್ಡ್ಗೆ ಇ-ಕೆವೈಸಿ ನವೀಕರಣ ಕಡ್ಡಾಯ
E-KYC update mandatory for NREGA job card
ನರೇಗಾ ಜಾಬ್ ಕಾರ್ಡ್ಗೆ ಇ-ಕೆವೈಸಿ ನವೀಕರಣ ಕಡ್ಡಾಯ
ಲೋಕದರ್ಶನ ವರದಿ
ಹೂವಿನಹಡಗಲಿ 09: ನರೇಗಾ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಎಲ್ಲಸಕ್ರಿಯ ಕೂಲಿಕಾರರು ಇ-ಕೆವೈಸಿಯನ್ನು ಎನ್‌ಎಮ್‌ಎಮ್‌ಎಸ್ ಆ್ಯಪ್ ಮೂಲಕ ನವೀಕರಣ(ಅಪ್ಲೇಟ್) ಮಾಡಿಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಇಒ ಪರಮೇಶಪ್ಪ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿದ ಅವರು, ಕೂಲಿಕಾರರ ಹಾಜರಾತಿಗೆ ಸಂಬಂಧಿಸಿದಂತೆ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇ- ಕೆವೈಸಿ(ಉದ್ಯೋಗ ಚೀಟಿಯೊಂದಿಗೆ ಆಧಾರ್ ಲಿಂಕ್) ಮೂಲಕ ಕೂಲಿಕಾರರ ಮಾಹಿತಿಯನ್ನು ನವೀಕರಣ ಮಾಡಲಾಗುತ್ತಿದೆ ಎಂದರು. ಈಗಾಗಲೇ ಕೂಲಿಕಾರರ ಇ-ಕೆವೈಸಿ ಮೂಲಕ ಮಾಹಿತಿ ನವೀಕರಣ ಮಾಡಿಕೊಂಡಿದ್ದಾರೆ.ಎಲ್ಲನೋಂದಾಯಿತ ಸಕ್ರಿಯ ಕೂಲಿಕಾರರು ಅ. 31ರ ಒಳಗಾಗಿ ಇ- ಕೆವೈಸಿ ಮಾಡಿಸುವುದು ಹಾಗೂ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 