ಚೀನಾದಲ್ಲಿ ಕಳೆದ 24 ತಾಸಿನ ಅವಧಿಯಲ್ಲಿ 16 ಕರೋನ ಪ್ರಕರಣಗಳು ದೃಢ, ಸಾವು ವರದಿಯಿಲ್ಲ

ಬೀಜಿಂಗ್, ಏಪ್ರಿಲ್ 19, ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 16 ಕರೋನವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಈ ಅವಧಿಯಲ್ಲಿ 33 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.ಆದರೆ ಸಾವಿನ ಸಂಖ್ಯೆ ಒಂದು ದಿನದ ಹಿಂದಿನಂತೆಯೇ ಇದೆ ಎಂದು ದೇಶದ ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ.ತಿಳಿಸಿದೆ. ಹೊಸ 16 ಪ್ರಕರಣಗಳಲ್ಲಿ ಒಂಬತ್ತು ಪ್ರಕರಣಗಳು ವಿದೇಶದಿಂದ ಬಂದ ವ್ಯಕ್ತಿಗಳಾಗಿದ್ದಾರೆ. ಆಯೋಗದ ವರದಿಯಂತೆ, ಚೀನಾದಲ್ಲಿ ಸದ್ಯ ದೃಢಪಟ್ಟ ಕೊರೊನ ಪ್ರಕರಣಗಳ ಸಂಖ್ಯೆ 82,735 ರಷ್ಟಿದ್ದು, ಸಾವಿನ ಸಂಖ್ಯೆ 4,632ರಷ್ಟಿದೆ.ಸೋಂಕಿನಿಂದ ಗುಣಮುಖರಾದ 77,000 ಕ್ಕೂ ಹೆಚ್ಚು ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ 44 ರೋಗ ಲಕ್ಷಣರಹಿತ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದು, ಈ  ಪ್ರಕರಣಗಳು ವಿದೇಶದಿಂದ ಬಂದ ವ್ಯಕ್ತಿಗಳಾಗಿದ್ದಾರೆ. ಕೊವಿದ್‍-19 ರ 17 ಹೊಸ ವಿದೇಶಿ ಆಮದು ಪ್ರಕರಣಗಳು ಮತ್ತು ಆಂತರಿಕ ಪ್ರಸರಣದ 10 ಹೊಸ ಪ್ರಕರಣಗಳು ವರದಿಯಾಗಿದ್ದು, ಹೊಸದಾಗಿ ಸಾವು ಪ್ರಕರಣಗಳು ಎಂದು ಚೀನಾ ಆರೋಗ್ಯಾಧಿಕಾರಿಗಳು ಶನಿವಾರ ತಿಳಿಸಿದ್ದರು.