ಇಂದಿನಿಂದ ದುರ್ಗಾದೇವಿ ಜಾತ್ರೆ: ತುರುಸಿನ ಹರದೇಶಿ -ನಾಗೇಶಿ ಜಾನಪದ ಚೌಡಕಿ ಮೇಳ
Durga Devi Fair from today: Hardeshi-Nageshi Folklore Chowdaki Mela in Turusina
ಪಾಲಬಾವಿ 03: ಗ್ರಾಮದ ಆರಾಧ್ಯದೇವತೆ ಜಗನ್ಮಾತೆ ದುರ್ಗಾದೇವಿ ಜಾತ್ರಾ ಮಹೋತ್ಸವವು ಪ್ರತಿವರ್ಷದಂತೆ ಈ ವರ್ಷವು ದಿ.4 ಹಾಗೂ 5ರಂದು ಎರಡು ದಿನಗಳವರೆಗೆ ಸಡಗರ ಸಂಭ್ರಮದಿಂದ ಜರುಗಲಿದೆ. ಸೋಮವಾರ ಮುಂಜಾನೆ 6ಗಂಟೆಗೆ ದುರ್ಗಾದೇವಿ ಕರ್ತೃ ಗದ್ದುಗೆಗೆ ಅರ್ಚಕ ಮುತ್ತಪ್ಪ ಮಾದರ ಇವರಿಂದ ವಿಶೇಷ ಪೂಜೆ ನೆರವೇರುವುದು. ಮುಂಜಾನೆ 7ಗಂಟೆಗೆ ದುರ್ಗಾದೇವಿ ದೇವಸ್ಥಾನದ ಪ್ರಭಾಮಂಡಲದಲ್ಲಿ ನಾವಲಗಿ ಗ್ರಾಮದ ಸಿದ್ದಲಿಂಗಯ್ಯ ಈರಯ್ಯ ಕಾಡದೇವರ ಇವರಿಂದ ಹೋಮ, ಹವನ, ವಿಶೇಷ ಪೂಜೆ ಜರುಗುವುದು. ರಾತ್ರಿ 8ಗಂಟೆಗೆ ಶಂಕರ ಮೇತ್ರಿ, ಅರ್ಜುನ ಮೇತ್ರಿ ಇವರಿಂದ ದೇವಿಯ ಪಾದ ಹೊಲಿಯುವ ಧರ್ಮ ಕಾರ್ಯವು ನೆರವೇರಿಸುವುದು ದುರ್ಗಾದೇವಿ ಸಭಾಭವನದಲ್ಲಿ 9 ಗಂಟೆಗೆ ಮುಧೋಳ ತಾಲೂಕು ಯಡಹಳ್ಳಿ ಗ್ರಾಮದ ಗಜಾನನ ಗಾಯನ ಸಂಘ ಹಾಗೂ ಮುಧೋಳ ಪಟ್ಟಣದ ರೇಣುಕಾದೇವಿ ಗಾಯನ ಸಂಘದ ಸುಪ್ರಸಿದ್ಧ ಕಲಾವಿದರಿಂದ ತುರುಸಾ- ತುರುಸಿನ ಹರದೇಶಿ ನಾಗಶಿ ಚೌಡಕಿ ಪದಗಳ ಹಾಡುಗಾರಿಕೆ ಜಗುವುದು.
ದಿ. 5ರಂದು ಮಂಗಳವಾರ ಮುಂಜಾನೆ ಆರು ಗಂಟೆಗೆ ದೇವಿಯ ಮೂರ್ತಿಗೆ ವಿಶೇಷ ಪೂಜೆ ನೆರವೇರುವುದು. ಮುಂಜಾನೆ 11ಗಂಟೆಗೆ ದುರ್ಗಾದೇವಿಯ ಪಲ್ಲಕ್ಕಿ ಹಾಗೂ ಭಾವಚಿತ್ರದ ಭವ್ಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರಗುವುದು. ಮಧ್ಯಾಹ್ನ 2 ಗಂಟೆಗೆ ಬರಲಿಂಗೇಶ್ವರ ದೇವಸ್ಥಾನದ ದಾಸೋಹ ಮಹಾಮನೆಯಲ್ಲಿ ಅನ್ನ ಸಂತರೆ್ಣ ನೆರವೇರುವುದು. ಸಂಜೆ 5.30ಕ್ಕೆ ದುರ್ಗಾದೇವಿ ದೇವಸ್ಥಾನದ ಮುಂಭಾಗದಲ್ಲಿ ನಿಗಿನಿಗಿ ಉರಿಯುವ ಬೆಂಕಿಯ ಕೆಂಡದ ಮೇಲೆ ಅರ್ಚಕ ಮುತ್ತಪ್ಪ ಮಾದರ ಹಾಗೂ ಭಕ್ತರಿಂದ ಅಗ್ನಿಪ್ರವೇಶ ಮಾಡಿ ಭಕ್ತಿಯ ಹರಕೆ ತೀರಿಸುವರು ಎಂದು ಜಾತ್ರಾ ಕಮಿಟಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 