ಮೆಕ್ಸಿಕೊದಲ್ಲಿ ಡ್ರಗ್ ಮಾಫಿಯಾ ದಾಳಿ: ಅಮೆರಿಕ ಕುಟುಂಬದ 9 ಜನರ ಹತ್ಯೆ

ಮೆಕ್ಸಿಕೊ ನಗರ, ನವೆಂಬರ್ 6:  ಉತ್ತರ ಮೆಕ್ಸಿಕೊದಲ್ಲಿ ಜರುಗಿದ ಹಠಾತ್ ದಾಳಿಯಲ್ಲಿ  ಮೂವರು ತಾಯಂದಿರು ಮತ್ತು ಆರು ಮಕ್ಕಳು ಸೇರಿದಂತೆ ಅಮೆರಿಕದ ಕುಟುಂಬದ  ಒಟ್ಟು 9 ಸದಸ್ಯರನ್ನು ಹೊಂಚುಹಾಕಿ ಗುಂಡಿಟ್ಟು ಹತ್ಯೆ ಮಾಡಲಾಗಿದೆಎಂದು ಅಧಿಕಾರಿಗಳು ತಿಳಿಸಿದ್ದಾರೆ.    ಸೋಮವಾರ ಮಧ್ಯಾಹ್ನ ದಾಳಿ ನಡೆದಿದ್ದು ಇವರನ್ನು  ಡ್ರಗ್ ಮಾಫಿಯಾ ತಂಡದ ಸದಸ್ಯರು  ಹೊಂಚು ಹಾಕಿ ಗುಂಡಿನ   ದಾಳಿ ಮಾಡಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ ನೆರೆಯ ಸೋನೊರಾ ರಾಜ್ಯದ ನಡುವಿನ ಕಚ್ಚಾ ರಸ್ತೆಯಲ್ಲಿ ಎರಡು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ, ದಾಳಿ ಕೋರರು ಸತತವಾಗಿ ವಾಹನದ ಮೇಲೆ ಗುಂಡಿನ ದಾಳಿ ಮಾಡಿ ನಂತರ   ಬೆಂಕಿ ಹಚ್ಚಿದ್ದು, ಪರಿಣಾಮ ಆರು ಮಕ್ಕಳು ಗಾಯಗೊಂಡಿದ್ದಾರೆ.   ಪೆಸಿಫಿಕ್ ಡ್ರಗ್ ಕಾರ್ಟ್ಲ್ಗೆ ಸಂಬಂಧಿಸಿರುವ ಒಂದು ಗುಂಪು ಈ  ಪ್ರದೇಶದಲ್ಲಿ ಸಕ್ರಿಯವಾಗಿದೆ ಎಂದು ಹೇಳಿದ್ದಾರೆ.