ನಶಾ ಮುಕ್ತ ಯುವ ಸ್ಪರ್ಧೆ: ಬಸವೇಶ್ವರ ಪಿಯು ಕಾಲೇಜಿಗೆ ರಾಜ್ಯ ಮಟ್ಟದ ಅರ್ಹತೆ

ನಶಾ ಮುಕ್ತ ಯುವ ಸ್ಪರ್ಧೆ: ಬಸವೇಶ್ವರ ಪಿಯು ಕಾಲೇಜಿಗೆ ರಾಜ್ಯ ಮಟ್ಟದ ಅರ್ಹತೆ Drug-Free Youth Competition: Basaveshwara PU College Qualifies for State Level

ಲೋಕದರ್ಶನ ವರದಿ 

ಬಾಗಲಕೋಟೆ 03: ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ವತಿಯಿಂದ ಆಯೋಜಿಸಲಾದ ‘ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ’ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಸವೇಶ್ವರ ಪಿಯು ಕಲಾ ಮಹಾವಿದ್ಯಾಲಯದ ಪಿಯುಸಿ ವಿಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ. 

ಸ್ಪರ್ಧೆಯ ಸಮೂಹ ಜಾನಪದ ಗೀತೆ ವಿಭಾಗದಲ್ಲಿ ಬಾಲಮ್ಮ ದಿಬ್ಬದಮನಿ ಮತ್ತು ತಂಡ ಪ್ರಥಮ ಸ್ಥಾನ, ಸಮೂಹ ನೃತ್ಯ ವಿಭಾಗದಲ್ಲಿ ಪ್ರಯಾಂಕ ಇಟಗಿ ಮತ್ತು ತಂಡ ಪ್ರಥಮ ಸ್ಥಾನ ಹಾಗೂ ರೀಲ್ಸ್‌ ಮೇಕಿಂಗ್ ವಿಭಾಗದಲ್ಲಿ ಸಂತೋಷ ಮಾದರ ಮತ್ತು ತಂಡ ದ್ವಿತೀಯ ಸ್ಥಾನ ಪಡೆದು ವಿದ್ಯಾರ್ಥಿಗಳು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. 

ಜಿಲ್ಲಾ ಮಟ್ಟದಲ್ಲಿ ದಾಖಲಿಸಿದ ಈ ಸಾಧನೆಯ ಫಲವಾಗಿ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಿಲ್ಲೆಯ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ. 

ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಸಿ. ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ್ ಎನ್‌. ಅಥಣಿ, ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಆಡಳಿತ ಅಧಿಕಾರಿಗಳಾದ ವಿ. ಆರ್‌. ಶಿರೋಳ ಹಾಗೂ ಡಾ. ವಿ. ಎಸ್‌. ಕಟಗಿಹಳ್ಳಿಮಠ, ಪ್ರಾಚಾರ್ಯ ಎಸ್‌. ಆರ್‌. ಮೂಗನೂರಮಠ ಮತ್ತು ಪಿಯುಸಿ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.