ಬೆಟಗೇರಿ ಸುತ್ತಮುತ್ತ ಜಿಟಿ ಜಿಟಿ ಮಳೆ...ರೈತರ ಮುಖದಲ್ಲಿ ಮಂದಹಾಸ
Drizzle in and around Betageri... smiles on the faces of farmers
ಲೋಕದರ್ಶನ ವರದಿ
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಜು.4 ಶನಿವಾರ ಬೆಳಗಿನ ಜಾವದಿಂದ ಹಿಡಿದು ಸಂಜೆ ತನಕ ರವಿವಾರ ಜು.5 ರಂದು ಆಗಾಗ ಜಿಟಿ ಜಿಟಿ ಮಳೆ ಸುರಿದು, ಭೂಮಿ ತಂಪಾಗಿಸಿ ರೈತರ ಮುಖದಲ್ಲಿ ಕೊಂಚ ಮಂದಹಾಸ ಮೂಡಿಸಿದೆ. ರವಿವಾರದಂದು ಮುಂಜಾನೆಯಿಂದ ಸಂಜೆತನಕ ಮೂಡಕವಿದ ಮತ್ತು ತಂಪಾದ ವಾತಾವರಣ ಇತ್ತು. ಪ್ರಸಕ್ತ ಮುಂಗಾರು ಮಳೆ ಆಗಾದೆ ರೈತರು ಹಾಗೂ ಜನಸಾಮಾನ್ಯರಲ್ಲಿ ಮಳೆಯಾಗುವ ಲಕ್ಷಣ ಗೋಚರಿಸದೆ ಆತಂಕ ಮೂಡಿಸಿತ್ತು.
ಬೆಟಗೇರಿ ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಬಿರು ಬಿಸಿಲಿನ ತಾಪಕ್ಕೆ ವಿವಿಧ ಬೆಳೆಗಳು ಸಂಪೂರ್ಣ ಒಣಗುವ ಹಂತ ತಲುಪುತ್ತಿದ್ದರೆ, ದಿನ ಬೆಳಗಾದರೆ ಇಲ್ಲಿಯ ರೈತರು, ವೃದ್ಧರು ಮೇಘರಾಜ ಧರೆಗಿಳಿಯುವ ದಾರಿಗಾಗಿ ಆಕಾಶದತ್ತ ಮುಖಮಾಡುವಂತಾಗಿತ್ತು. ಮಳೆಯ ನೀರೀಕ್ಷೆಯಲ್ಲಿ ಹಗಲಿರುಳು ಕಾಲ ಕಳೆಯುತ್ತಿದ್ದ ಇಲ್ಲಿಯ ರೈತರು ಶನಿವಾರ ಬಂದ ಮಳೆ ಭೂಮಿ ತಂಪಾಗಿಸಿದ್ದರಿಂದ ಜನರು ನಿಟ್ಟಿಸಿರುಬಿಡುವಂತಾಗಿದೆ.
ಪ್ರಸಕ್ತ ವರ್ಷ ಮುಂಗಾರು ಮಳೆ ಸಂಪೂರ್ಣ ಆಗದೇ ಇದ್ದುದರಿಂದ ದಿನ ಆಕಾಶದ ಕಡೆ ಮುಖಮಾಡುವಂತಾಗಿತ್ತು, ನೀರಿನ ಕೊರತೆಯಿಂದ ಭೂಮಿಯಲ್ಲಿ ಈಗಿದ್ದ ಬೆಳೆಗಳು ಒಣಗುತ್ತಿದ್ದವು. ಇಂದು ಶನಿವಾರ ಮತ್ತು ರವಿವಾರ ದಿನ ಆಗಾಗ ಜಿಟಿ ಜಿಟಿ ಮಳೆಯಾಗಿ ಇಲ್ಲಿಯ ರೈತರಿಗೆ ಸ್ವಲ್ಪ ಖುಷಿಯಾಗಿದೆ. ಇನ್ನೂ ಸಂಪೂರ್ಣ ಮುಂಗಾರು ಮಳೆಯಾಗಬೇಕಾದ ಅಗತ್ಯವಿದೆ ಎಂದು ಸ್ಥಳೀಯ ನಾಗರಿಕರು ಅಭಿಪ್ರಾಯ ಪಟ್ಟಿದ್ದಾರೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 