ಪರವಾನಗಿ ಇಲ್ಲದೇ ವಾಹನ ಚಾಲನೆ ಅಪರಾಧ : ನ್ಯಾಯಾದೀಶ ಸುನೀಲ
ಶಿಗ್ಗಾವಿ 27: ಅಲ್ಪ ವಯೋಮಾನದಲ್ಲಿ ಪರವಾನಗಿ ಇಲ್ಲದೇ ವಾಹನ ಚಾಲನೆ ಅಪರಾಧ ಎಂದು ನ್ಯಾಯಾದೀಶ ಸುನೀಲ ತಳವಾರ ತಿಳಿ ಹೇಳಿದರು. ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ರಂಭಾಪುರಿ ಜಗದ್ಗುರು ವೀರಗಂಗಾಧರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ವಿಶೇಷ ಶಿಬಿದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಹಕರು ಅಪರಾಧ ಮಾಡಿದರೆ ದಂಡ ಶಿಕ್ಷೆಗೆ ಗುರಿಯಾಗುತ್ತಾರೆ ನಂತರ ಶಿಬಿರಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ ಜಾಗ್ರತಿ ಮೂಡಿಸಿದರು. ನ್ಯಾಯಾದೀಶೆ ಅಶ್ವಿನಿ ಚಂದ್ರಕಾಂತ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯಗಳ ನಡೆಯುತ್ತಿವೆ ಆದ್ದರಿಂದ ಮಹಿಳೆಯರು ಕಾನೂನನ್ನು ಕರಗತ ಮಾಡಿಕೊಂಡುಜಾಗೃತರಾಗಿರಿ ಎಂದರು.
ನ್ಯಾಯವಾದಿ ವ್ಹಿ. ಸಿ. ಪಾಟೀಲ ಮಾತನಾಡಿ ಮೋಟಾರು ಕಾಯ್ದೆ, ಕೌಟುಂಬಿಕ ಸಮಸ್ಯೆ, ಮತ್ತು ಗ್ರಾಹಕರ ಕಾಯ್ದೆಯ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.ಕಾರ್ಯಕ್ರಮಾಧಿಕಾರಿ ಪ್ರೊ ಶಿವಯ್ಯ ಪೂಜಾರ ಪ್ರಾಸ್ಥಾವಿಕವಾಗಿ ಮಾತನಾಡಿದರು. ವೇ ಮೂ ರೇವಣಸಿದ್ಧಯ್ಯಾ ಹಿರೇಮಠ ಸಾನಿಧ್ಯವಹಿಸಿದ್ದರು. ನ್ಯಾಯವಾದಿಗಳಾದ ಎಫ್ ಬಿ, ಗಂಜೀಗಟ್ಟಿ, ಬಿ ಪಿ ಗುಂಡಣ್ಢವರ, ಎಮ್. ಆಯ್. ಗೋಣೆಪ್ಪನವರ, ಪಿ. ಆರ್.ಕಲ್ಯಾಣಿ ಮುಂತಾದವರು ಉಪಸ್ಥಿತರಿದ್ದರು.ಕುಮಾರಿ ಸುಜಾತಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.