ಲೋಕದರ್ಶನ ವರದಿ
ಗದಗ 01: ಲಕ್ಷ್ಮೇಶ್ವರ-ಶಿರಹಟ್ಟಿಯ ಆಸರೆ ಅಂಗವಿಲಕರ ಕ್ಷೇಮಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕನರ್ಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದೊಂದಿಗೆ ಜಿಲ್ಲಾಮಟ್ಟದ ಮಕ್ಕಳ ಸಂಸತ್ತನ್ನು ಗದಗ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಹಮ್ಮಿಕೊಂಡಿತ್ತು.
ಮಕ್ಕಳ ಸಂಸತ್ತನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಉದ್ಘಾಟಿಸಿ ಮಾತನಾಡಿ, ಮಕ್ಕಳು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದರೊಂದಿಗೆ ಮಕ್ಕಳು ಸಮಗ್ರ ಅಭಿವೃದ್ಧಿಯತ್ತ ಚಿಂತಿಸಬೇಕು ಎಂದರು.
ಮಕ್ಕಳಿಗೆ ಆಗುತ್ತಿರುವ ಬಸ್ ಸಮಸ್ಯೆ, ಬಸ್ ನಿಲ್ದಾಣ ಹಾಗೂ ರೇಲ್ವೆ ನಿಲ್ದಾಣಗಳಲ್ಲಿನ ಶೌಚಾಲಯ ಬಳಕೆಗೆ ಶುಲ್ಕ, ಶಾಲೆಯಲ್ಲಿನ ಮಕ್ಕಳ ಸಂಘಗಳನ್ನು ಬಲಪಡಿಸುವುದು, ಮಕ್ಕಳ ರಕ್ಷಣೆ ಮತ್ತು ವಿಕಾಸ, ಶಾಲೆಗಳಿಗೆ ಕಂಪೌಂಡ್, ಲ್ಯಾಬ್ ಸೇರಿದಂತೆ ಮುಂತಾದ ಪ್ರಶ್ನೆಗಳನ್ನು ಮಕ್ಕಳು ಜಿಲ್ಲಾಧಿಕಾರಿಗಳಿಗೆ ಕೇಳಿದರು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಕ್ಕಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದರೊಂದಿಗೆ ಸಂಬಂಧಿಸಿದ ಇಲಾಖೆಗಳಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾದ ಎಸ್.ಜಿ.ಸಲಗರೆ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕೆ.ಆರ್.ನಾಯ್ಕರ, ಸದಸ್ಯ ಸಿ.ಎಸ್.ಬೊಮ್ಮನಳ್ಳಿ ಪಾಲ್ಗೊಂಡಿದ್ದರು. ಕಾನೂನು ಪರಿವೀಕ್ಷಣಾಧಿಕಾರಿ ಪ್ರಕಾಶ ವಾಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕುರಿತು ಮಕ್ಕಳ ಸಂಸತ್ತಿನ ಸಂಚಾಲಕ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮಂಜುನಾಥ ಬಮ್ಮನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಸರೆ ಸಂಸ್ಥೆಯ ಅಧ್ಯಕ್ಷ ಫಕ್ಕೀರೇಶ ಮ್ಯಾಟಣ್ಣವರ ಸ್ವಾಗತಿಸಿದರು. ಎಂ.ಡಿ.ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದಶರ್ಿ ಶಶಿಧರ ಶಿರಸಂಗಿ ವಂದಿಸಿದರು.
ಜಿಲ್ಲಾ ಮಕ್ಕಳ ಸಂಸತ್ತು ಕಾರ್ಯಕ್ರಮಕ್ಕೆ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಕಾರ ನೀಡಿದ್ದವು. ಈ ಸಂಸತ್ತಿನಲ್ಲಿ ಜಿಲ್ಲೆಯ 6 ಶೈಕ್ಷಣಿಕ ವಲಯದಿಂದ ತಲಾ ನಾಲ್ಕು ಬಾಲಕಿಯರು ಹಾಗೂ ನಾಲ್ಕು ಬಾಲಕರು, ಸಕರ್ಾರಿ ಬಾಲಕರ, ಬಾಲಕಿಯರ ಬಾಲಮಂದಿರ ಮಕ್ಕಳು ಸೇರಿದಂತೆ 50 ಮಕ್ಕಳು ಪಾಲ್ಗೊಂಡಿದ್ದರು. ಇವರಲ್ಲಿ ಇಬ್ಬರು ಮಕ್ಕಳನ್ನು ಆಯ್ಕೆ ಮಾಡಿ ಮುಂದಿನ ತಿಂಗಳ ವಿಧಾನಸೌಧದಲ್ಲಿ ನಡೆಯುವ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ರಾಜ್ಯಮಟ್ಟದ ಮಕ್ಕಳ ಹಕ್ಕುಗಳ ಸಂಸತ್ತಿನಲ್ಲಿ ಭಾಗವಹಿಸಲು ಕಳುಹಿಸಲಾಗುತ್ತದೆ.
ಪಾಲ್ಗೊಂಡ 50 ಮಕ್ಕಳು ತಮ್ಮ ವಿವಿಧ ಸಮಸ್ಯೆಗಳನ್ನು ಸಭೆಯಲ್ಲಿ ಚಚರ್ಿಸಿದರು. ಜೊತೆಗೆ ಪ್ರಶ್ನಾವಳಿಗಳನ್ನು ಸಂಘಟಿಕರಿಗೆ ತಲುಪಿಸಿದ್ದು, ಈ ಪ್ರಶ್ನಾವಳಿಗಳನ್ನು ಕ್ರೂಡಿಕರಿಸಿ ಸಂಬಂಧಿಸಿದ ಇಲಾಖೆಗೆ ಕೊಡಲು ಆಸರೆ ಸಂಸ್ಥೆ ತಿಮರ್ಾನಿಸಿದೆ. ಸಂಸತ್ತಿನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಜಿಲ್ಲಾ ಮಕ್ಕಳ ಸಹಾಯವಾಣಿ ಸಿಬ್ಬಂದಿ ಪಾಲ್ಗೊಂಡಿದ್ದರು.