ಬೆಂಗಳೂರು ಆಗಸ್ಟ್ 25 ಮಾರಣಾಂತಿಕ ಅತಿಸಾರ ಭೇದಿ ಖಾಯಿಲೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಹೊರತಂದಿರುವ ರೋಟಾ ವೈರಸ್ ಲಸಿಕೆಯನ್ನು ಸಾಂಕೇತಿಕವಾಗಿ ಶಿಶುಗಳಿಗೆ ಲಸಿಕಾ ಹನಿ ನೀಡುವ ಮೂಲಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪರಿಚಯಿಸಿದರು
ಮಾಹಿತಿಗಳ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 5 ವರ್ಷದೊಳಗಿನ 32.7 ಲಕ್ಷ ಮಕ್ಕಳು ಅತಿಸಾರ ಭೇದಿಯಿಂದ ಬಳಲುತ್ತಾರೆ. ಇದರಲ್ಲಿ 78ಸಾವಿರ ಮಕ್ಕಳು ಸಾವಿಗಿಡಾಗುತ್ತಾರೆ. ಈ ಮಾರಣಾಂತಿಕ ಖಾಯಿಲೆಗೆ ಉತ್ತರವಾಗಿ ಆರೋಗ್ಯ ಇಲಾಖೆ ರೋಟಾ ವೈರಸ್ ಲಸಿಕೆಯನ್ನು ಪರಿಚಯಿಸುತ್ತಿದೆ. ಈ ಲಸಿಕೆಯನ್ನು 6, 10 ಹಾಗೂ 14 ವಾರಗಳ ಶಿಶುಗಳಿಗೆ ನೀಡಲಾಗುವುದು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಆರೋಗ್ಯ ಇಲಾಖೆಯ ಈ ಅಭಿಯಾನ ಶ್ಲಾಘನೀಯ. ಸರಿಯಾದ ಸಮಯದಲ್ಲಿ ಮಕ್ಕಳಿಗೆ ಈ ಲಸಿಕೆ ನೀಡಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದಶರ್ಿಗಳಾದ ಜಾವೇದ್ ಅಕ್ತರ್, ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ, ಅಭಿಯಾನ ನಿದರ್ೆಶಕರಾದ ಡಿ. ಎಸ್. ರಮೇಶ್ ಮತ್ತಿತರ ಅಧಿಕಾರಿಗಳು, ವೈದ್ಯರು ಉಪಸ್ಥಿತರಿದ್ದರು.