ಗದಗ-ಬೆಟಗೇರಿಯಲ್ಲಿ ಕುಡಿಯುವ ನೀರಿನ ಜಲಸಂಗ್ರಹಾಗಾರ ಲೋಕಾರೆ್ಣ
Drinking water reservoir inaugurated in Gadag-Betageri
ಗದಗ 20: ಗದಗ-ಬೆಟಗೇರಿ ನಗರಸಭೆಯ 27ನೇ ವಾರ್ಡ್ ವ್ಯಾಪ್ತಿಯ ಪ್ರತಿಷ್ಠಿತ ಕೆ.ಎಚ್. ಪಾಟೀಲ್ ಹಾಗೂ ವೀರನಾರಾಯಣ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿದ್ದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾದ ಕುಡಿಯುವ ನೀರಿನ ಜಲಸಂಗ್ರಹಾಗಾರವನ್ನು ಲೋಕಾರೆ್ಣ ಮಾಡಲಾಯಿತು.
ನಗರಸಭೆಯ 27ನೇ ವಾರ್ಡ್ ಸದಸ್ಯೆ ಶ್ರೀಮತಿ ಲಲಿತಾ ಬಿ. ಅಸೂಟಿ ಅವರ ಪ್ರಯತ್ನದ ಫಲವಾಗಿ, ನಾಗರಿಕರಿಗೆ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಜಲಸಂಗ್ರಹಾಗಾರ ನಿರ್ಮಿಸಲಾಗಿದೆ.
ಈ ಜಲಸಂಗ್ರಹಾಗಾರದ ಉದ್ಘಾಟನೆಯನ್ನು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ 27ನೇ ವಾರ್ಡ್ ಸದಸ್ಯೆ ಶ್ರೀಮತಿ ಲಲಿತಾ ಬಿ. ಅಸೂಟಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಡಾವಣೆಯ ಅಧ್ಯಕ್ಷ ಮಾಲಿಂಗಪ್ಪ ಬರಬರಿ, ಉಪಾಧ್ಯಕ್ಷ ಕಲ್ಮೇಶ್ ಆಲದಗಟ್ಟಿ, ಎಸ್.ಜಿ. ಕಟ್ಟಿಗೆಹಳ್ಳಿಮಠ, ಮಂಜುನಾಥ ದೊಡ್ಡಮನಿ, ಮಹಮ್ಮದ್ಸಾಬ್ ವಾಲೀಕಾರ, ಅಪ್ಪಾಸಾಬ್ ಮುದ್ಹೊಳ, ಕುಬೇರಗೌಡ ಪಾಟೀಲ, ಬಾಬುಸಾಬ್ ಶಿರಹಟ್ಟಿ, ಆನಂದ ಇನಾಮತಿ, ಶಿವಪ್ಪ ಮೂಲಿಮನಿ, ಮುಸ್ತಾಕ್ ಬೆಳಿಗಾರ, ಬಸಪ್ಪ ಹಳ್ಳಿಗುಡಿ, ಕಳಕಪ್ಪ ಮಡಿವಾಳರ, ಮುತ್ತು ಸುಂಕದ, ಶ್ರೀಮತಿ ರಾಜಬೀ ಬಳಗಾರ,
ಶ್ರೀಮತಿ ಸರೋಜಾ ಬರಬರಿ, ಭೀಮಣ್ಣ ಮುದ್ಹೊಳ, ಶಿವಾನಂದ ಹೊಸಂಗಡಿ, ಈರಣ್ಣ ಹುಚ್ಚನಗೌಡ್ರ, ಮಲ್ಲನಗೌಡ ಪಾಟೀಲ, ವಿರೂಪಾಕ್ಷಪ್ಪ ಪೊಲೀಸ್ ಪಾಟೀಲ ಸೇರಿದಂತೆ ಬಡಾವಣೆಯ ಅನೇಕ ಗಣ್ಯರು ಹಾಗೂ ನಿವಾಸಿಗಳು ಭಾಗವಹಿಸಿದ್ದರು. ಸ್ಥಳೀಯರು ಈ ಯೋಜನೆಗೆ ಸಂತಸ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮತ್ತಷ್ಟು ಸುಗಮವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ 