ಇಂದು ತುಂಗಭದ್ರಾ ಕಾಲುವೆಗೆ ಕುಡಿಯಲು ನೀರು ಬಿಡುಗಡೆ

ಇಂದು ತುಂಗಭದ್ರಾ ಕಾಲುವೆಗೆ ಕುಡಿಯಲು ನೀರು ಬಿಡುಗಡೆ Drinking water released into Tungabhadra canal today

ಬಳ್ಳಾರಿ 02: ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ನಾಳೆಯಿಂದ ತುಂಗಭದ್ರಾ ಎಚ್‌ಎಲ್‌ಸಿ ಕಾಲುವೆಗೆ ಕುಡಿಯಲು ನೀರು ಹರಿಸಲಾಗುತ್ತದೆ. ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆಯಾಗಬೇಕು. ಯಾವುದೇ ಕಾರಣಕ್ಕೂ ಅಕ್ರಮವಾಗಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. 

ಕೃಷಿ, ಕೈಗಾರಿಕೆಗಳು ಅಥವಾ ವಾಣಿಜ್ಯ ಉದ್ದೇಶಗಳಿಗಾಗಿ ಕಾಲುವೆಯಿಂದ ಅಕ್ರಮವಾಗಿ ನೀರುಎತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾಲುವೆ ಹಾದುಹೋಗುವ ಮಾರ್ಗದುದ್ದಕ್ಕೂ ಪೊಲೀಸ್, ನೀರಾವರಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಮೂಲಕ ನಿರಂತರವಾಗಿ ಬೀಟ್ ವ್ಯವಸ್ಥೆ ಕೈಗೊಳ್ಳುವ ಮೂಲಕ ನಿಗಾವಹಿಸಬೇಕು ಎಂದು ತಿಳಿಸಿದರು. 

ಕುಡಿಯುವ ನೀರಿನ ಸಮರ​‍್ಕ ಪೂರೈಕೆಗಾಗಿ ಅಧಿಕಾರಿಗಳು ಪಂಪಿಂಗ್ ಶೆಡ್ಯೂಲ್ ಸಿದ್ಧಪಡಿಸಿಕೊಳ್ಳಬೇಕು. ನೀರು ಬಂದ ನಂತರಕೆರೆ ತುಂಬಿಸಿಕೊಳ್ಳಲು ಮೋಟಾರ್ ಮತ್ತು ಪಂಪ್‌ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಮುಂಬರುವ ಬೇಸಿಗೆಯ ದಿನಗಳಲ್ಲಿ ನೀರಿಗೆತೊಂದರೆಯಾಗದಂತೆ ಕೆರೆಗಳಲ್ಲಿ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.