ಕುಡಿಯುವ ನೀರಿನ ಕಾಮಗಾರಿ ತೀವ್ರಗೊಳಿಸಿ: ಸಚಿವ ಕೃಷ್ಣಬೈರೇಗೌಡ

ಬಾಗಲಕೋಟೆ 29: ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕುಡಿಯುವ ನೀರಿನ ಕಾಮಗಾರಿಗಳನ್ನು ತೀವ್ರಗೊಳಿಸುವಂತೆ ಗ್ರಾಮೀಣಾಭಿವೃದ್ದಿ, ಪಂಚಾಯತ ರಾಜ್, ಕಾನೂನು ಹಾಗೂ ಸಂಸದಿಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಗೆ ಕುಡಿಯುವ ನೀರಿಗಾಗಿ ಜಿಲ್ಲೆಗೆ ನಿಗದಿಪಡಿಸಿದ ಒಟ್ಟು 54 ಕೋಟಿ ರೂ. ಅನುದಾನ ಪೈಕಿ ಈಗಾಗಲೇ 30 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ 54 ಕೋಟಿ ರೂ.ಗಳ ಕ್ರೀಯಾಯೋಜನೆ ತಯಾರಿಸಿ ಡಿಸೆಂಬರ 30 ರೊಳಗಾಗಿ ವರ್ಕ ಆರ್ಡರ್ ನೀಡುವಂತೆ ಸೂಚಿಸಿದರು. ಅಲ್ಲದೇ ಈ ಕ್ರೀಯಾ ಯೋಜನೆಯಲ್ಲಿ ಹಾಕಿಕೊಂಡ ಕಾಮಗಾರಿಗಳು ಮಾರ್ಚ ಅಂತ್ಯಕ್ಕೆ ಪೂರ್ಣಗೊಳ್ಳಬೇಕೆಂದು ಸೂಚಿಸಿದರು.

ಸದ್ಯ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ಗ್ರಾಮಗಳಲ್ಲಿ ಎರಡು ದಿನಗಳ ಒಳಗಾಗಿ ಟ್ಯಾಂಕರ್ ಮೂಲಕ ನೀರು ಕೊಡಬೇಕು. ಇಲ್ಲವೇ ಖಾಸಗಿ ಅವರಿಂದ ಬೋರವೆಲ್ ಬಾಡಿಗೆ ತೆಗೆದುಕೊಂಡು ನೀರು ಪೂರೈಸುವ ಕೆಲಸವಾಗಬೇಕು. ಇದಾಗದಿದ್ದಲ್ಲಿ ಜಿಲ್ಲಾ ಟಾಸ್ಕಪೋರ್ಸ ಮೂಲಕ ಅನುಮತಿ ಪಡೆದು ಬೋರ್ವೆಲ್ ಕೊರೆಯಿಸಲು ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು. ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ಜಿಲ್ಲೆಯಲ್ಲಿ ಕಂಡುಬರುವ ಕ್ರಿಟಿಕಲ್ ಗ್ರಾಮಗಳನ್ನು ಗುರುತಿಸಿ ಆ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮವಹಿಸಲು ತಿಳಿಸಿದರು.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗೆ ಆದ್ಯತೆ ಮೇರೆಗೆ ಜಲಧಾರೆ ಯೋಜನೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆ ಜಿಲ್ಲೆಯಲ್ಲಿ ಬರುವ ಪ್ರತಿಯೊಂದು ಗ್ರಾಮಕ್ಕು ನೀರು ಪೂರೈಸುವುದಾಗಿದೆ. ಈ ಯೋಜನೆ ಅನುಷ್ಠಾನಗೊಳಿಸಲು ಕ್ರೀಯಾಯೋಜನೆ ಹಾಗೂ ನೀಲನಕ್ಷೆಯ ವರದಿಯನ್ನು ಎಷ್ಟು ಬೇಗ ಕಳುಹಿಸುತ್ತೀರಿ ಅಷ್ಟು ಬೇಗ ಅದಕ್ಕೆ ಮಂಜೂರಾತಿ ನೀಡಲಾಗುವುದೆಂದರು. ಈ ಕಾರ್ಯವನ್ನು ತೀವ್ರಗತಿಯಲ್ಲಿ ಕೆಲಸ ಮಾಡಿ ವರದಿ ಕಳುಹಿಸಲು ಸೂಚಿಸಿದರು. ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಸಹ ಇದರಲ್ಲಿ ಸೇರಿಸಲು ತಿಳಿಸಿದರು.

ಜಿಲ್ಲೆಯಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು 100ಕ್ಕೆ 50 ರಷ್ಟು ಘಟಕಗಳನ್ನು ಸ್ಥಗಿತಗೊಂಡಿರುವುದಾಗಿ ಶಾಸಕರು ಸಭೆಗೆ ತಿಳಿಸಿದಾಗ ಸಚಿವರು ಪ್ರತಿ ತಾಲೂಕಿಗೆ ಒಬ್ಬರು ಜನಪ್ರತಿನಿಧಿಗಳು, ಇಬ್ಬರು ಇಂಜಿನೀಯರ್ ಹಾಗೂ ಅಧಿಕಾರಿಗಳ ತಂಡ ರಚಿಸಿ ಸವರ್ೆ ಮಾಡಿ ಪೋಟೋ ಸಮೇತ ವರದಿ ಪಡೆಯಲು ತಿಳಿಸಿದರು. ನಂತರ ಅವುಗಳನ್ನು ಸುಸ್ಥಿತಿಯಲ್ಲಿ ನಡೆಯುವಂತೆ ಆರ್ಡಿಡಬ್ಲೂ, ಎಸ್ಡಿ ಹಾಗೂ ಕೆಆರ್ಐಡಿಎಲ್ ಅವರಿಗೆ ಸೂಚಿಸಿದರು.

ಜಿಲ್ಲೆಯ 6 ತಾಲೂಕುಗಳನ್ನು ಬರಪೀಡಿತ ಪ್ರವೇಶವೆಂದು ಸರಕಾರ ಘೋಷಿಸಿದ್ದು, ಜಿಲ್ಲೆಯ ಜನತೆ ಉದ್ಯೋಗ ಅರಸಿ ಬೆರೆಡೆ ವಲಸಿ ಹೋಗದಂತೆ ನರೇಗಾ ಯೋಜನೆಯಡಿ ಸಾಮೂಹಿಕ ಕೆಲಸಗಳನ್ನು ಹಾಕಿಕೊಳ್ಳಬೇಕು. ನರೇಗಾ ಯೋಜನೆಯಡಿ ಕೃಷಿಹೊಂಡ, ಬದು ನಿಮರ್ಾಣ ಹಾಗೂ ದನದ ತೊಟ್ಟಿ ನಿಮರ್ಾಣಕ್ಕೂ ಅವಕಾಶವಿರುವುದಾಗಿ ತಿಳಿಸಿದ ಸಚಿವರು ಡಿಸೆಂಬರ ನಂತರ ಬರಿದಾಗುವ ಹಳ್ಳಗಳಲ್ಲಿ ಪ್ರತಿ ಕಿ.ಮೀಟರಗೆ ಒಂದು ಮಲ್ಟಿ ಚೆಕ್ಡ್ಯಾಮ್ ಹಾಕಲು ತಿಳಿಸಿದರು.  

ತೋಟಗಾರಿಕೆ ಇಲಾಖೆಗೆ ಸಂಬಂದಿಸಿದಂತೆ ಪಪ್ಪಾಯಿ, ಬಾಳೆ, ಸೇಬು, ಪೇರು, ದ್ರಾಕ್ಷಿ, ರೇಷ್ಮೆ ಸೊಪ್ಪು ಬೆಳೆಯ ಪ್ಲಾಂಟ್ ಹಾಗೂ ನಾಟಿ ಮಾಡಲಿಕ್ಕೆ ನರೇಗಾ ಯೋಜನೆಯಡಿ ಪ್ರತಿ ಎಕರೆಗೆ 30 ರಿಂದ 50 ಸಾವಿರ ರೂ. ನೀಡುವ ಅವಕಾಶವಿದೆ. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ ಇದರ ಪ್ರಯೋಜನ ಪಡೆಯವಂತೆ ಮಾಡಲು ಸೂಚಿಸಿದರು. ಅಲ್ಲದೇ ಕೆಲವೊಂದು ಪ್ಲಾಂಟ್ಗಳ ನಿರ್ವಹಣಾ ವೆಚ್ಚ ಸಹ ನೀಡಲು ಅವಕಾಶವಿದ್ದು ರೈತರು ಇದರ ಪ್ರಯೋಜನ ಪಡೆಯುವಂತೆ ಮಾಡಬೇಕೆಂದರು. 

ಶಾಲಾ ಕಂಪೌಂಡ್ ನಿಮರ್ಾಣ ಮಾಡಲು ಸಹ ನರೇಗಾ ಯೋಜನೆಯಡಿ ಅವಕಾಶವಿದ್ದು,  ಜಿಲ್ಲೆಯಲ್ಲಿರುವ ಪ್ರತಿಯೊಂದು ಶಾಲೆಯ ಕಂಪೌಂಡ್ ನಿಮರ್ಿಸಲು ಕ್ರೀಯಾಯೋಜನೆ ತಯಾರಿಸಬೇಕು. ಜಾಗವಿರದಿದ್ದರೆ ಬಿಟ್ಟು ಉಳಿದ ಶಾಲೆಗಳಿಗೆ ಕಂಪೌಂಡ್ಗಳ ಕಾಮಗಾರಿಗಳನ್ನು ಬರುವ ಶೈಕ್ಷಣಿಕ ಅವಧಿಗೆ ಪೂರ್ಣಗೊಳಿಸುವಂತೆ ಶಿಕ್ಷಣ ಇಲಾಖೆಯ ಉಪನಿದರ್ೇಶಕರಿಗೆ ಸೂಚಿಸಿದರು. ಈಗಾಗಲೇ 208 ಶಾಲೆಗಳ ಪೈಕಿ 126 ಶಾಲೆಗಳ ಕಂಪೌಂಡ್ ನಿಮರ್ಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ಶಾಸಕರಾದ ಸಿದ್ದು ಸವದಿ, ಮುರುಗೇಶ ನಿರಾಣಿ, ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ, ಆರ್.ಬಿ.ತಿಮ್ಮಾಪೂರ, ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.