ನಾಟಕಗಳು ನಮ್ಮ ಸಂಸ್ಕೃತಿ, ಪರಂಪರೆಯ ಒಂದು ಭಾಗ. : ಆರತಿ ದೇವಶಿ ಖಾಮಣಿ

ನಾಟಕಗಳು ನಮ್ಮ ಸಂಸ್ಕೃತಿ, ಪರಂಪರೆಯ ಒಂದು ಭಾಗ.	: ಆರತಿ ದೇವಶಿ ಖಾಮಣಿ	Dramas are a part of our culture and heritage. : Aarti Devashi Khamani

           ಧಾರವಾಡ 30 : ನಾಟಕಗಳು ಮಾನಸಿಕ ಸಮತೋಲನ ಉಂಟು ಮಾಡುವದರ ಜೊತೆಗೆ ಸಮಾಜದಲ್ಲಿ ಬದುಕುವ ಕಲೆಯನ್ನು ಕಲಿಸುತ್ತವೆ. ನಮ್ಮ ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಪ್ರಭಲ ಮಾಧ್ಯಮಗಳೇ ನಾಟಕಗಳು ಎಂದು ರಂಗ ಕಲಾವಿದೆ ಆರತಿ ದೇವಶಿ ಖಾಮಣಿ ಅಭಿಪ್ರಾಯಪಟ್ಟರು. 

ಅವರುಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ 10 ದಿನಗಳ ನಾಟಕೋತ್ಸವದಲ್ಲಿ “ಹಸಿವು” ರಷ್ಯನ್ ಸಸ್ಯವಿಜ್ಞಾನಿ ವ್ಯಾವಿಲಾವ ನಿಕೊಲಾಯ್‌ಜೀವನ ಆಧಾರಿತ ನಾಟಕಕ್ಕೆ ಚಾಲನೆ ನೀಡಿ, ಮಾತನಾಡಿದರು. 

ನಾಟಕಗಳು ನಮ್ಮ ಸಂಸ್ಕೃತಿ, ಪರಂಪರೆಯ ಒಂದು ಭಾಗ.ನಮ್ಮಜೀವನದ ನಿತ್ಯ ಬದುಕಿನ ನೈಜ ಘಟನೆಗಳೇ ನಾಟಕ ರೂಪದಲ್ಲಿ ಪ್ರದರ್ಶನವಾಗಿ ಸಮಾಜ ಪರಿವರ್ತನೆಗೆ ಸಹಕಾರಿಗಳಾಗುತ್ತವೆ. ಇಂದು ನಾಟಕಗಳು ಜೀವಂತವಾಗಿರಲು ವೃತ್ತಿರಂಗ ಭೂಮಿಯೇ ಕಾರಣ.ಸಿನೇಮಾಕ್ಕಿಂತ ನಾಟಕಗಳೇ ಹೆಚ್ಚು ಜನಪ್ರಿಯವಾದವುಗಳು.ಇಂದಿನ ಬದಲಾದ ಸನ್ನಿವೇಷದಲ್ಲಿ ಮಕ್ಕಳಿಗೆ ರಂಗ ಶಿಕ್ಷಣ ನೀಡುವುದು ಅಗತ್ಯವಾಗಿದೆ. ನಾನು ಅನೇಕ ಹಿರಿಯ ರಂಗಕಲಾವಿದರ ಜೊತೆ ಅಭಿನಯಿಸಿದ್ದು, ನನ್ನ ಸಾಧನೆಗೆ ಆ ಹಿರಿಯ ಕಲಾವಿದರ ಶ್ರೀರಕ್ಷೆಯೇ ಕಾರಣ.ರಂಗಕಲೆ ಒಂದು ತಪಸ್ಸು ಎಂಬ ಪವಿತ್ರ ಭಾವನೆಯಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದರು. 

ಕ.ವಿ.ವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಕವಿವ ಸಂಘವು ಹತ್ತು ದಿನಗಳ ನಾಟಕೋತ್ಸವದಲ್ಲಿ ಸಾಮಾಜಿಕ ನಾಟಕಗಳ ಜೊತೆ ವಿಜ್ಞಾನಾಧಾರಿತ ನಾಟಕಗಳಿಗೂ ಅವಕಾಶ ನೀಡಿದೆ.ಇಂದಿನ ಹಸಿವು ನಾಟಕಖ್ಯಾತರಷ್ಯನ್ ಸಸ್ಯವಿಜ್ಞಾನಿ ಯೊಬ್ಬರ ಜೀವನಾಧಾರಿತ ನಾಟಕವಾಗಿದೆ. ವಿಜ್ಞಾನದ ಮೂಲಕ ಜನರಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸುವುದು ನಮ್ಮ ಪ್ರಯತ್ನ. ಧಾರವಾಡದಲ್ಲಿ ಮಹಿಳಾ ರಂಗಕಲಾವಿದೆಯರು ತಮ್ಮ ಪ್ರಭುದ್ದ ನಟನೆಯ ಮೂಲಕ ರಂಗಭೂಮಿಯನ್ನು ಜೀವಂತ ಉಳಿಸಿದ್ದಾರೆ ಎಂದರು. 

ರಂಗಕಲಾವಿದರಾದ ಹಾವೇರಿಯ ರಾಘವೇಂದ್ರ ಕಬಾಡಿ ಹಾಗೂ ಧಾರವಾಡದ ಮಹಾಂತೇಶ ಹವಳಣ್ಣವರ ಅವರನ್ನು ಕವಿವ ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಯಾಗಿಇರ್ವರೂ ಮಾತನಾಡಿದರು. 

ಶಂಕರ ಕುಂಬಿ ಸ್ವಾಗತಿಸಿದರು.ವೀರಣ್ಣಒಡ್ಡೀನ ನಿರೂಪಿಸಿ, ವಂದಿಸಿದರು.ಕಾರ್ಯಕ್ರಮದಲ್ಲಿಡಾ.ಸದಾಶಿವ ಮರ್ಜಿ, ಡಾ.ಮಂಜುಳಾ ಮರ್ಜಿ, ಸಿ.ಎಸ್‌. ಪಾಟೀಲ ಕುಲಕರ್ಣಿ, ಭೀಮುಖಟಾವಿ ಸೇರಿದಂತೆ ಕಲಾವಿದರು, ರಂಗಾಸಕ್ತರುಇದ್ದರು. 

ಕೊನೆಯಲ್ಲಿ ರಷ್ಯನ್ ಸಸ್ಯವಿಜ್ಞಾನಿ ನಿಕೋಲಾಯ ವ್ಯಾವಿಲಾವ್ ಜೀವನಾಧಾರಿತ ‘ಹಸಿವು’ ನಾಟಕ ಪ್ರದರ್ಶನಗೊಂಡಿತು. ಪ್ರವೀಣ ಬೆಳ್ಳಿ ನಿರ್ದೇಶನ ಮಾಡಿದ ಈ ನಾಟಕ ಸಂತೋಷ ತಾಮ್ರಪರ್ಣಿ ರಚನೆ ಮಾಡಿದ್ದಾರೆ. ಮೈಸೂರಿನ ಅರಿವು ರಂಗ ನಾಟಕ ಪ್ರಸ್ತುತ ಪಡಿಸಿದರು.