ವಿಶ್ವ ಪರಿಸರ ದಿನಾಚರಣೆ - 2026 ರ ಅಂಗವಾಗಿ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ

ವಿಶ್ವ ಪರಿಸರ ದಿನಾಚರಣೆ - 2026 ರ ಅಂಗವಾಗಿ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ    Drama performance by students as part of World Environment Day - 2026

ಕೊಪ್ಪಳ 05: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ. ರವರ ಆದೇಶದ ಮೇರೆಗೆ, ವಿಶ್ವ ಪರಿಸರ ದಿನಾಚರಣೆ - 2026 ರ "ಒಬ್ಬ ವಿದ್ಯಾರ್ಥಿಗೆ ಒಂದು ಸಸಿ" ಎಂಬ ಘೋಷವಾಕ್ಯದಡಿ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್‌ ಸಂಸ್ಥೆಯ ಶ್ರೀ ಗವಿಸಿದ್ದೇಶ್ವರ ಕಾಲೇಜ್ ಆಫ್ ನರ್ಸಿಂಗ್, ಕೊಪ್ಪಳ ಇಲ್ಲಿ ಇಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಖಉಗಿಗಿಖಿ ಟ್ರಸ್ಟಿನ ಕಾರ್ಯದರ್ಶಿಗಳಾದ ಶ್ರೀ ಮರಿಗೌಡರು, ನರ್ಸಿಂಗ್ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಶ್ರೀ ನಾಗರಾಜ ಬೊಮ್ಮನಾಳ ಸರ್ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಡಾ. ಮರ್ಷಿಲ್ ಎಸ್‌. ಹೆಚ್‌. ರವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಅರಣ್ಯ ನಾಶದಿಂದಾಗುವ ದುಷ್ಪರಿಣಾಮಗಳು ಮತ್ತು ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರ ಜೀವನ ಕಥೆ ಆಧಾರಿತ ನಾಟಕವನ್ನು ಪ್ರದರ್ಶಿಸಿದರು.

ನಾಟಕದ ಮೂಲಕ ಅರಣ್ಯ ಸಂರಕ್ಷಣೆಯ ಮಹತ್ವ, ಮರ-ಗಿಡಗಳ ಅವಶ್ಯಕತೆ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರದ ಕಾವಲುಗಾರನಾಗಬೇಕೆಂಬ ಸಂದೇಶವನ್ನು ಸಾರಲಾಯಿತು.ಕಾರ್ಯಕ್ರಮದ ಅಂಗವಾಗಿ ಗಣ್ಯರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಸಸಿ ನೆಡುವ ಕಾರ್ಯದಲ್ಲೂ ಭಾಗವಹಿಸಿ, ನೆಟ್ಟ ಸಸಿಗಳ ರಕ್ಷಣೆಯ ಹೊಣೆ ಹೊರಲಿದ್ದಾರೆ. ಈ ಅರ್ಥಪೂರ್ಣ ಕಾರ್ಯಕ್ರಮದ ಸುದ್ದಿಯನ್ನು ತಮ್ಮ ಜನಪ್ರಿಯ ಮಾಧ್ಯಮದ ಮೂಲಕ ಪ್ರಕಟಿಸಿ, ಪರಿಸರ ಜಾಗೃತಿಯನ್ನು ಇನ್ನಷ್ಟು ಜನರಿಗೆ ತಲುಪಿಸಲು ಸಹಕರಿಸಬೇಕಾಗಿ ತಮ್ಮಲ್ಲಿ ವಿನಮ್ರ ಮನವಿ.

ಕಾರ್ಯಕ್ರಮದ ವಿವರ:- ದಿನಾಂಕ: 05 ಜೂನ್ 2026- ಸ್ಥಳ: ಶ್ರೀ ಗವಿಸಿದ್ದೇಶ್ವರ ಕಾಲೇಜ್ ಆಫ್ ನರ್ಸಿಂಗ್, ಕೊಪ್ಪಳ- ಆಯೋಜಕರು: ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್‌- ಘೋಷವಾಕ್ಯ: ಒಬ್ಬ ವಿದ್ಯಾರ್ಥಿಗೆ ಒಂದು ಸಸಿ- ಭಾಗವಹಿಸಿದ ಗಣ್ಯರು: ಶ್ರೀ ಮರಿಗೌಡ, ಶ್ರೀ ನಾಗರಾಜ ಬೊಮ್ಮನಾಳ, ಪ್ರಾಚಾರ್ಯರಾದ ಡಾ. ಮರ್ಷಿಲ್ ಎಸ್‌. ಹೆಚ್‌.- ಚಟುವಟಿಕೆ: ಪರಿಸರ ಜಾಗೃತಿ ನಾಟಕ, ಸಸಿ ನೆಡುವ ಕಾರ್ಯಕ್ರಮವಂದನೆಗಳೊಂದಿಗೆ,ಪ್ರಾಚಾರ್ಯರುಶ್ರೀ ಗವಿಸಿದ್ದೇಶ್ವರ ಕಾಲೇಜ್ ಆಫ್ ನರ್ಸಿಂಗ್, ಕೊಪ್ಪಳ