ನಾಟಕ ಸಮಾಜದ ಪ್ರತಿಬಿಂಬವಿದ್ದಂತೆ: ಕೊಟ್ರೇಶ

ನಾಟಕ ಸಮಾಜದ ಪ್ರತಿಬಿಂಬವಿದ್ದಂತೆ: ಕೊಟ್ರೇಶ Drama is a reflection of society: Kotresha

ಧಾರವಾಡ   24: ನಾಟಕ ಸಮಾಜದ ಪ್ರತಿಬಿಂಬವಿದ್ದಂತೆ. ಸಮಾಜದ ಅಂಕು-ಡೊಂಕು ತಿದ್ದುವ ದಿವ್ಯಶಕ್ತಿ ಅದರಲ್ಲಿದೆ ಎಂದು ಹಿರಿಯ ರಂಗ ಕಲಾವಿದ ಎಂ.ಎಸ್‌. ಕೊಟ್ರೇಶ ಅಭಿಪ್ರಾಯಪಟ್ಟರು.   

ಕರ್ನಾಟಕ ವಿದ್ಯಾವರ್ಧಕ ಸಂಘವು 136ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ, 3 ದಿನಗಳ ನಾಟಕೋತ್ಸವ ಹಾಗೂ ಸಂಘದ ಹಿರಿಯ ಸದಸ್ಯರಿಗೆ ಗೌರವ ಸಮರಾ​‍್ಣ ಕಾರ್ಯಕ್ರಮದಲ್ಲಿ ಡಾ. ನಿಂಗೂ ಸೊಲಗಿ ರಚಿಸಿದ  ‘ದಾಂಪತ್ಯ ಗೀತ’ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.  

ಕ.ವಿ.ವ. ಸಂಘವು ಸಾಹಿತ್ಯದ ಜೊತೆಗೆ ರಂಗಕಲೆಗೂ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಸಾಮಾಜಿಕ, ಐತಿಹಾಸಿಕ, ಪೌರಾಣಿಕ ನಾಟಕಗಳ ಪ್ರದರ್ಶನಕ್ಕೆ ಅನುಕೂಲಿಸುತ್ತದೆ. ಆದರೆ ನಾಟಕಗಳಿಗೆ ಹಿಂದಿನಂತೆ ಪ್ರೋತ್ಸಾಹ ಸಿಗದೇ ಇರುವುದು ವಿಷಾದನೀಯ. ನೆರೆಯ ಕೇರಳದಲ್ಲಿ ಕ.ವಿ.ವ. ಸಂಘದ ಕಾರ್ಯಕ್ರಮಗಳಿಗೆ ವ್ಯಾಪಕವಾದ ಒಳ್ಳೆಯ ಅಭಿಪ್ರಾಯವಿದೆ. ನಮ್ಮ ನಿತ್ಯ ಜೀವನದಲ್ಲಿ ನಡೆಯುವ ಪ್ರಸಂಗಗಳೇ ನಾಟಕಕ್ಕೆ ಮೂಲ ಎಂದು ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಹಳ್ಳಿಯ ಜನರಿಗೆ ಹಿಂದಿನ ದಿನಗಳಲ್ಲಿ ನಾಟಕಗಳೇ ಮನರಂಜನಾ ಸಾಧನಗಳಾಗಿದ್ದವು. ಆದರೆ ಯುವಕರು ಈ ರಂಗಕಲೆಯಿಂದ ಇಂದು ವಿಮುಖರಾಗುತ್ತಿರುವುದು ಬೇಸರ. ಒಂದು ರೀತಿ ನಾಟಕಗಳ ಪ್ರದರ್ಶನ ಕಡಿಮೆಯಾಗುತ್ತಿದ್ದರೂ ಸಹ ನಾಟಕವು ತನ್ನತನವನ್ನು ಉಳಿಸಿಕೊಂಡು ಬಂದಿದೆ. ಎಂ.ಎಸ್‌. ಕೊಟ್ರೇಶ 78ರ ವೃದ್ಧಾಪದಲ್ಲೂ ಅವರ ಬಣ್ಣದ ಬದುಕು ಕ್ರಿಯಾಶೀಲವಾಗಿದೆ. ಅವರ ಅಭಿನಯದ ಅಜಾತ ಶ್ರೀ ನಾಗಲಿಂಗ ಮಹಿಮೆ 20 ಸಾವಿರ ಪ್ರಯೋಗ ಕಂಡು ಜನಮನ್ನಣೆ ಪಡೆದದ್ದು ದಾಖಲೆಯಾಗಿದೆ. ರಂಗಭೂಮಿಗೆ ಸುಳ್ಳದ ದೇಸಾಯಿಯವರು ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ್ದು ಒಂದು ಇತಿಹಾಸ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಕ.ವಿ.ವ. ಸಂಘದ ಹಿರಿಯ ಸದಸ್ಯರಾದ ಎಂ.ಸಿ. ಕೊಡ್ಲಿವಾಡ, ಸಿ.ಪಿ. ಉಗರಗೋಳ, ಡಿ.ಎನ್‌. ಮಾಸ್ತಮ್ಮನವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಾಂತೇಶ ರಾಮದುರ್ಗ ನಿರ್ದೇಶನದ ನಿಂಗೂ ಸೊಲಗಿ ರಚಿಸಿದ ‘ದಾಂಪತ್ಯ ಗೀತ’ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರನ್ನು ರಂಜಿಸಿತು. ರಾಘವ ಕಮ್ಮಾರ ಹಾಗೂ ದ್ರಾಕ್ಷಾಯಿಣಿ ಹೊಂಬಾಳಿ ರಂಗಗೀತೆ ಪ್ರಸ್ತುತಪಡಿಸಿದರು. ವೀರಣ್ಣ ಪತ್ತಾರ ರಂಗಸಜ್ಜಿಕೆ ನಿರ್ವಹಿಸಿದರು.  

ಸತೀಶ ತುರಮರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ನಿರ್ವಹಿಸಿ, ವಂದಿಸಿದರು.  

ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಡಾ. ಮಹೇಶ ಧ. ಹೊರಕೇರಿ, ಗುರು ಹಿರೇಮಠ, ವಿಶ್ವೇಶ್ವರಿ ಬ. ಹಿರೇಮಠ, ಎಂ.ಎಂ. ಚಿಕ್ಕಮಠ, ಗದಿಗೆಯ್ಯಾ ಹಿರೇಮಠ, ಡಾ. ಅರುಣಾ ಹಳ್ಳಿಕೇರಿ ಸೇರಿದಂತೆ ರಂಗಾಸಕ್ತರು ಉಪಸ್ಥಿತರಿದ್ದರು.  ರ್ಶಿ