ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಾಟಕೋತ್ಸವ ಕಾರ್ಯಕ್ರಮದ ಚಾಲನೆ

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಾಟಕೋತ್ಸವ ಕಾರ್ಯಕ್ರಮದ ಚಾಲನೆ  Drama festival program launched as part of Karnataka Rajyotsava

ಧಾರವಾಡ 01: ಕನ್ನಡ ವೃತ್ತಿರಂಗಭೂಮಿಗೆ 150 ವರ್ಷಗಳ ಸುಧೀರ್ಘ ಇತಿಹಾಸವಿದೆ. ಕನ್ನಡ ರಂಗಭೂಮಿಯ ಪಿತಾಮಹರೆನಿಸಿದ ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಕನ್ನಡ ವೃತ್ತಿರಂಗಭೂಮಿಗೆ ಬುನಾದಿ ಹಾಕಿದ ಆದ್ಯರು ಎಂದು ಡಾ.ಮಂಜುಳಾ ಸದಾಶಿವ ಮರ್ಜಿ ಹೇಳಿದರು. 

ಕರ್ನಾಟಕ ವಿದ್ಯಾವರ್ಧಕ ಸಂಘವು, ಕರ್ನಾಟಕರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ನಾಟಕೋತ್ಸವ ಕಾರ್ಯಕ್ರಮದಲ್ಲಿ ‘ಕೊಡಲ್ಲಅಂದ್ರಕೊಡಲ್ಲ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದರು. 

ಕನ್ನಡರಂಗಭೂಮಿ ಪಾರ್ಸಿ ನಾಟಕದಿಂದ ಪ್ರಭಾವಿತವಾಗಿದೆ. ವಿಶೇಷವಾಗಿ ಉತ್ತರಕರ್ನಾಟಕದ ಅನೇಕ ರಂಗಕಲಾವಿದರುತಮ್ಮಇಡೀಜೀವನವನ್ನೇ ಕಲೆಗಾಗಿ ಮೀಸಲು ಇಟ್ಟವರಾಗಿದ್ದಾರೆ.ಈ ಭಾಗದಲ್ಲಿ ಹವ್ಯಾಸಕಲಾವಿದರು ನಾಟಕ ಪ್ರದರ್ಶನಎಂದರೆ ಹಬ್ಬದ ವಾತಾವರಣ ಸೃಷ್ಟಿಯಾದಂತೆ ಪ್ರದರ್ಶನ ಮಾಡುತ್ತಿದ್ದರು.ಈ ಪರಂಪರೆ ಈಗಲೂ ಹಳ್ಳಿಗಳಲ್ಲಿದೆ. 

ಆದರೆ 70ರ ದಶಕದಿಂದ ವೃತ್ತಿರಂಗಭೂಮಿ, ಕ್ಷೀಣವಾದಂತೆಕಾಣುತ್ತಿದೆ.ಟಿವಿ ಹಾಗೂ ಸಾಮಾಜಿಕಜಾಲತಾಣದ ಪ್ರಭಾವದಿಂದ ಯುವಕರು ರಂಗಕಲೆಯಿಂದ ವಿಮುಖರಾಗುತ್ತಿರುವುದು ವಿಷಾಧನೀಯ. ಇತ್ತೀಚೆಗೆ ನಾಟಕಗಳಲ್ಲಿ ದ್ವಂದಾರ್ಥದ ಸಂಭಾಷಣೆಯಿಂದ ಪ್ರೇಕ್ಷಕರಿಗೆ ಹೆಚ್ಚು ಕಿರಿಕಿರಿ ಉಂಟಾಗುತ್ತಿದೆ ಹಾಗೂ ನಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿಗೆ ಮಾರಕಗಳಾಗುತ್ತಿವೆ. ಜಗವೇಒಂದುರಂಗಭೂಮಿ, ನಾವೆಲ್ಲ ಪಾತ್ರಧಾರಿಗಳಷ್ಟೇ ಎಂದು ಹೇಳಿದರು. 

ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಕವಿವ ಸಂಘ ಕಳೆದ ಹತ್ತು ವರ್ಷಗಳಿಂದ ಎಲೆ ಮರೆಯ ಕಾಯಿಯಂತೆ ರಂಗಸೇವೆ ಮಾಡಿದ ಗ್ರಾಮೀಣ ರಂಗಕಲಾವಿದರನ್ನು ಗುರುತಿಸಿ ಸನ್ಮಾನ ಮಾಡುತ್ತಿದೆ.ಎಲ್ಲಾ ಪ್ರಕಾರದ ನಾಟಕ ಪ್ರದರ್ಶನಕ್ಕೆ ಕವಿವ ಸಂಘ ವೇದಿಕೆ ಕಲ್ಪಿಸಿದೆ.ಡಿಸೆಂಬರ್ 2025ರ ಮೊದಲ ವಾರದಲ್ಲಿ ಸರ್ಕಾರಿ ಶಾಲೆಯಲ್ಲಿಓದುವರಂಗಕಲಾಸಕ್ತ ಮಕ್ಕಳಿಗೆ ಕ.ವಿ.ವ. ಸಂಘ ‘ರವಿವಾರ ನಾಟಕ ಶಾಲೆ’ ಎಂಬ ಹೆಸರಿನಿಂದರಂಗತರಬೇತಿಯನ್ನು ನೀಡಿಸಿ, ಆ ಮಕ್ಕಳಿಂದಲೇ ಕೊನೆಗೆ ಪ್ರದರ್ಶಿಸುವ ಅವಕಾಶ ಕೊಡಿಸುವಯೋಜನೆ ರೂಪಿಸಿದೆ ಎಂದು ಹೇಳಿದರು. 

ವೇದಿಕೆಯ ಮೇಲೆ ಕವಿವ ಸಂಘದಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣಒಡ್ಡೀನ, ಡಾ.ಜಿನದತ್ತ ಹಡಗಲಿ ಇದ್ದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು.ಶಂಕರ ಕುಂಬಿ ನಿರ್ವಹಿಸಿದರು.ಸತೀಶ ತುರಮರಿ ವಂದಿಸಿದರು.ರಂಗಕಲಾವಿದರಾದ ಬಸಲಿಂಗಪ್ಪ ಅಂಗಡಿ ಮತ್ತುಕಲ್ಲಯ್ಯ ಹಿರೇಮಠ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕೊನೆಗೆ ದಾರಿಯೋ ಪೋ ಅವರು ರಚಿಸಿದ ಶಕೀಲ್‌ಅಹಮದ್ ನಿರ್ದೇಶನದ ‘ಕೊಡಲ್ಲಅಂದ್ರೆಕೊಡಲ್ಲ’ ನಾಟಕವನ್ನು ಮೈಸೂರಿನ ನಿರ್ದಿಗಂತ ತಂಡದವರು ಪ್ರದರ್ಶನ ನೀಡಿದರು.