ಡಾ ಬಿ ಆರ್ ಅಂಬೇಡ್ಕರ್ ಕೊಡುಗೆ ಅಪಾರವಾದುದ್ದು: ಮಂಜುನಾಥ ಡೊಳ್ಳಿ

Dr BR Ambedkar's contribution was immense: Manjunath Dolli

ಡಾ ಬಿ ಆರ್ ಅಂಬೇಡ್ಕರ್ ಕೊಡುಗೆ ಅಪಾರವಾದುದ್ದು: ಮಂಜುನಾಥ ಡೊಳ್ಳಿ 

 

ಇಂಡಿ 14: ಪರಿಶ್ರಮ ಮತ್ತು ಬೌದ್ಧಿಕ ಪ್ರತಿಭೆಯ ಮೂಲಕ ಶ್ರೇಷ್ಠ ಚಿಂತಕರಾಗಿದ್ದ ಡಾ.ಅಂಬೇಡ್ಕರ್ ಅವರದ್ದು ಪ್ರಬುದ್ಧ ವ್ಯಕ್ತಿತ್ವ. ತಳ ಸಮುದಾಯಗಳ ಹಾಗೂ ದಮನಿತರ ಸ್ಫೂರ್ತಿಯ ಸೆಲೆಯಾಗಿದ್ದ ಅವರು ಅಸ್ಪೃಶ್ಯತೆ ನಿವಾರಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅವರ ಚಿಂತನೆಗಳು ಇಂದಿಗೂ ಸಾರ್ವಕಾಲಿಕ ಮೌಲ್ಯ ಪಡೆದಿವೆ ಎಂದು ತಡವಲಗಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಡೊಳ್ಳಿ ಹೇಳಿದರು.  

ಸೋಮವಾರದಂದು ತಾಲೂಕಿನ ತಡವಲಗಾ ಗ್ರಾಮದ  ಡಾ.ಬಿ ಆರ್ ಅಂಬೇಡ್ಕರ್ ವೃತ್ತದ ಬಳಿ  ಡಾ.ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ  ಅವರು ಪೂಜೆ ಸಲ್ಲಿಸಿದರು.ಕಾಂಗ್ರೆಸ್ ಮುಖಂಡರಾದ ಅಶೋಕ ಮಿರ್ಜಿ ಅವರು ಮಾಲಾರೆ​‍್ಣ ಮಾಡಿ 134 ನೇ ಜಯಂತಿ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. 

ನಂತರ ಮಾತನಾಡಿದ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಂದಾ ವಾಲಿಕಾರ ಅವರು ಮಾತನಾಡಿ ಡಾ.ಅಂಬೇಡ್ಕರ್ ಒಬ್ಬ ಸಾಮಾಜಿಕ ನಾವೀನ್ಯತೆಯ ಚಿಂತಕರಾಗಿ, ದೀನದಲಿತ ವರ್ಗಗಳಲ್ಲಿ ಸ್ವಪ್ರಜ್ಞೆ ಮತ್ತು ಸ್ವಾಭಿಮಾನ ಮೂಡಿಸಲು ಪ್ರಯತ್ನಿಸಿದರು. ಮುಗ್ಧ ವ್ಯಕ್ತಿಯಾಗಿ ಉಳಿಯುವ ಬದಲು ಪ್ರಭಾವಶಾಲಿ ವ್ಯಕ್ತಿತ್ವವನ್ನು ಹೊಂದಬೇಕೆಂಬ ಅವರ ನಿಲುವು ಇಂದಿಗೂ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.  

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರವಿ ಹೊಸಮನಿ  ಮಾತನಾಡಿ, ’ಡಾ. ಅಂಬೇಡ್ಕರ್ ಅವರ ತತ್ವಶಾಸ್ತ್ರ ಮತ್ತು ವಿಚಾರಗಳು ಇಂದಿನ ಪೀಳಿಗೆಗೆ ಸ್ಪೂರ್ತಿಯಾಗಿವೆ. ಆರ್ಥಿಕ, ಸಾಮಾಜಿಕ,  ರಾಜಕೀಯ ವಿಚಾರಗಳಲ್ಲಿ ಕ್ರಾಂತಿಕಾರಿ ಮನೋಭಾವ ಹೊಂದಿದ್ದು ಅವರು ಸಮಾಜದ ಏಳಿಗೆ ಮತ್ತು ರಾಷ್ಟ್ರದ ಪ್ರಗತಿಯ ಬಗ್ಗೆ ಅತ್ಯುತ್ತಮ ದೂರದೃಷ್ಟಿ ಹೊಂದಿದ್ದರು’ ಎಂದು ಹೇಳಿದರು. 

ಡಾ.ಅಂಬೇಡ್ಕರ್ ಅವರದ್ದು ಪ್ರಬುದ್ಧ ವ್ಯಕ್ತಿತ್ವ. ತಳ ಸಮುದಾಯಗಳ ಹಾಗೂ ದಮನಿತರ ಸ್ಫೂರ್ತಿಯ ಸೆಲೆಯಾಗಿದ್ದ ಅವರು ಅಸ್ಪೃಶ್ಯತೆ ನಿವಾರಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅವರ ಚಿಂತನೆಗಳು ಇಂದಿಗೂ ಸಾರ್ವಕಾಲಿಕ ಮೌಲ್ಯ ಪಡೆದಿವೆ ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಮನಗೌಡ ಪಾಟೀಲ, ಹಾಗೂ ಮಲ್ಲು ಇಂಡಿ, ಚಂದ್ರು ಮೇಲಿನಮನಿ, ಮಳಸಿದ್ದಪ್ಪ ನಡಗೇರಿ, ಯಲಗೊಂಡ ತಳಕೇರಿ,ನಾಗೇಶ್ ಪೋತೆ, ಶಿವಾನಂದ ಹಾದಿಮನ, ಮಹೇಶ ಮೇಲಿನಕೇರಿ ಸೇರಿದಂತೆ ಪಂಚಾಯಿತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.