ಲೋಕದರ್ಶನ ವರದಿ
ಬೈಲಹೊಂಗಲ 09: ಪ್ರಸ್ತುತ ಜಗತ್ತು ನಿಶೆಯಿಂದಲೇ ಹಾಳಾಗುತ್ತಿದ್ದು, ಸರಕಾರಗಳು ಮಾಡದ ಕಾರ್ಯವನ್ನು ಧರ್ಮಸ್ಥಳದ ಧಮರ್ಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಮಾಡುತ್ತಿದ್ದಾರೆ ಎಂದು ಸುಕ್ಷೇತ್ರ ನಯಾನಗರ ಅಭಿನವ ಸಿದ್ದಲಿಂಗಮಹಾಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಗರಜೂರ ಗ್ರಾಮದೇವಿ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕನರ್ಾಟಕ ಜನಜಾಗೃತಿ ವೇದಿಕೆ, ಕನರ್ಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳ, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಗ್ರಾಮ ಪಂಚಾಯತ್ ಸಂಗೋಳ್ಳಿ ಹಾಗೂ ಗರಜೂರ ಗ್ರಾಮದ ಆಶ್ರಯದಲ್ಲಿ ಹಮ್ಮಿಕೊಂಡ 1460ನೇ ಮದ್ಯವರ್ಜನಾ ಶಿಬಿರದ ಸಾನಿಧ್ಯ ವಹಿಸಿ ಮಂಗಳವಾರ ಮಾತನಾಡಿ, ನಮ್ಮಲ್ಲಿರುವ ನಿಶೆ ಎಂಬ ದುಶ್ಚಟವನ್ನು ತೆಗೆದುಹಾಕುವ ಮೂಲಕ ಸಮಾಜದಲ್ಲಿ ಮನುಷ್ಯ ಮನುಷ್ಯನಾಗಿ ಬದಕಲು ಮದ್ಯವರ್ಜನಾ ಶಿಬಿರ ಉತ್ತಮ ವೇದಿಕೆಯಾಗಿದೆ. ಇದನ್ನು ಸುತ್ತಮುತ್ತಲಿನ ಗ್ರಾಮಸ್ಥರು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಯಾರು ಕೆಟ್ಟವರಿಲ್ಲ. ನಮ್ಮನ್ನು ಕೆಟ್ಟವರನ್ನಾಗಿ ಮಾಡಿದ್ದು ಮದ್ಯ ಸೇವನೆ. ಮದ್ಯ ಸೇವಿಸುವುದರಿಂದ ನಮ್ಮ ಘನತೆ, ಆಸ್ತಿ-ಪಾಸ್ತಿ ಹಾಗೂ ಹೆಂಡತಿ-ಮಕ್ಕಳು ಸೇರಿದಂತೆ ಸಮಾಜದಲ್ಲಿ ಎಲ್ಲರಿಂದಲೂ ದೂರಾಗುತ್ತೇವೆ. ಕುಟುಂಬ ಜವಾಬ್ದಾರಿ ಹೊತ್ತಿರುವ ನಾವ ಕುಡಿತದ ಚಟಕ್ಕೆ ಬಲಿಯಾಗಿ ಹೆಜ್ಜೆ ತಪ್ಪಿದರೆ ನಾವು ಅಷ್ಟೇ ಹಾಳಗಾದೇ ಇಡೀ ಸಮಾಜದ ವ್ಯವಸ್ಥೆಯನ್ನೇ ಹಾಳು ಮಾಡುವುದಲ್ಲದೇ ತನ್ನ ಮಕ್ಕಳ ಮೇಲೆಯೂ ಪರಿಣಾಮ ಬೀರಲಿದ್ದು, ದೇಶದ ಭವಿಷ್ಯದ ಮೇಲೆಯೂ ಪರಿಣಾಮ ಬೀರಲಿದೆ. ನಮ್ಮದೇಯಾದ ಬದುಕಿದೆ. ಅದನ್ನು ಅನುಭವಿಸಿ ಬದುಕಿ ಬಾಳಬೇಕು. ಈ ನಿಟ್ಟಿನಲ್ಲಿ ಮದ್ಯ ಸೇವನೆ ದ್ವೇಷಿಸಬೇಕು. ಕುಡಿತವನ್ನು ಬಿಡಬೇಕು ಎಂದರು.
ಸಮಾಜದಲ್ಲಿ ಡಾ.ವಿರೇಂದ್ರ ಹೆಗ್ಗಡೆ ಮಾಡುವ ಕಾರ್ಯವೂ ಇಡೀ ಸಮಾಜಕ್ಕೆ ಆದರ್ಶ. ಇಂತಹ ಕಾರ್ಯಗಳನ್ನು ಯಾವ ಸರಕಾಗಳು ಮಾಡುತ್ತಿಲ್ಲ. ಈ ಮೊದಲು ಎಲ್ಲಿಗಾದರೂ ಒಂದು ಬಾರ್ ಅಂಗಡಿಗಳಿಗೆ ಮಾತ್ರ ಅನುಮತಿ ನೀಡುತ್ತಿದ್ದ ಸರಕಾರಗಳು ಇದೀಗ ಪ್ರತಿ ಹಳ್ಳಿಗೂ ಬಾರ್ಗಳಿಗೆ ಅನುಮತಿ ನೀಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಬರುವ ಯಾವ ಸರಕಾರಗಳು ಕೂಡ ನಿಶೆ ಮುಕ್ತ ಸಮಾಜ ರೂಪಿಸುವಲ್ಲಿ ಪ್ರಯತ್ನಿಸುತ್ತಿಲ್ಲ. ಆದರೆ, ಹೆಚ್ಚಿನ ಮದ್ಯದಂಗಡಿಗೆ ಅನುಮತಿ ನೀಡುವ ಮೂಲಕ ಜನರನ್ನು ಹಾಳು ಮಾಡುವ ಕಾರ್ಯವನ್ನು ಸರಕಾರಗಳೇ ಮಾಡುತ್ತಿವೆ. ಇನ್ನೊಬ್ಬರಾಗಲಿ, ಸರಕಾರಗಳಾಗಲಿ ನಮ್ಮನ್ನು ರಕ್ಷಣೆ ಮಾಡುವುದಿಲ್ಲ.ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಅನೀಲ ಮೇಕಲಮರಡಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಯಲ್ಲವ್ವ ಹಳೆಮನಿ,ಬಾಬಾಸಹೇಬ ಪಾಟೀಲ, ಚಂದ್ರಪ್ಪ ಗಡೆನ್ನವರ, ವಿಠ್ಠಲ ಭೀಸೆ, ಕೃಷ್ಣ ಕುಲಕಣರ್ಿ, ರುದ್ರಯ್ಯಾ ಹಿರೇಮಠ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.