ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಡಾ.ವಿ.ಲೋಕೇಶ್ ವಿದೇಶ ಪ್ರಯಾಣ
Dr. V. Lokesh of Vijayanagara Sri Krishnadevaraya University travels abroad
ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಡಾ.ವಿ.ಲೋಕೇಶ್ ವಿದೇಶ ಪ್ರಯಾಣ
ಬಳ್ಳಾರಿ 18:
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾದ ಡಾ.ವಿ.ಲೋಕೇಶ್ ಅವರು ಅ.21 ರಿಂದ 26 ರವರೆಗೆ ಇಂಡೋನೇಷ್ಯಾದಲ್ಲಿ ಜರುಗಲಿರುವ “ಐಐಸಿಎಂಎ-2025 ಅಂತರಾಷ್ಟ್ರೀಯ ಸಮ್ಮೇಳನ”ದ ಮುಖ್ಯ ಭಾಷಣಕಾರರಾಗಿ ಭಾಗವಹಿಸಲು ವಿದೇಶ ಪ್ರಯಾಣ ಮಾಡಲಿದ್ದಾರೆ.ಪ್ರತಿಷ್ಠಿತ 37ನೇ ಆವೃತ್ತಿಯ ‘ಇಂಡೊ ಎಂಎಸ್’ ಅಂತರಾಷ್ಟ್ರೀಯ ಸಮ್ಮೇಳನವು ಇಂಡೋನೇಷ್ಯಾದ ಈಸ್ಟ್ ಜಾವಾದಲ್ಲಿರುವ ಜಂಬೆರ್ ವಿಶ್ವವಿದ್ಯಾಲಯದಲ್ಲಿ ಈ ಬಾರಿ ಆಯೋಜಿಸಲಾಗಿದೆ.ಜಂಬೆರ್ ವಿಶ್ವವಿದ್ಯಾಲಯದ ಜಾಂಗ್‌ಜಿಯಾನ್ ಮೆಥಮೆಟಿಕಲ್ ಸೊಸೈಟಿ ಮತ್ತು ಸಿಜಿಎಎನ್‌ಟಿ ರಿಸರ್ಚ್ ಗ್ರೂಪ್ ಸಹಭಾಗಿತ್ವದಲ್ಲಿ ಪ್ರತಿವರ್ಷ ಸಮ್ಮೇಳನವನ್ನು ಆಯೋಜಿಸಲಾತ್ತದೆ. ಟರ್ಕಿ, ಚೀನಾ, ದಕ್ಷಿಣ ಕೊರಿಯಾ, ಫ್ರಾನ್ಸ್ ದೇಶಗಳ ಖ್ಯಾತ ಗಣಿತಶಾಸ್ತ್ರ ಪ್ರಾಧ್ಯಾಪಕರುಗಳು ಮುಖ್ಯ ಭಾಷಣಕಾರರಾಗಿ ಮತ್ತು ಸುಮಾರು 50ಕ್ಕೂ ಅಧಿಕ ದೇಶಗಳ ಶೈಕ್ಷಣಿಕ ವಲಯದ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರತಿಷ್ಠಿತ ಸಮ್ಮೇಳನದಲ್ಲಿ ಭಾಗವಹಿಸಲು ಪ್ರಯಾಣ ಬೆಳೆಸಲಿರುವ ಡಾ.ವಿ.ಲೋಕೇಶ್ ಅವರಿಗೆ ವಿವಿಯ ಕುಲಪತಿಗಳಾದ ಪ್ರೊ.ಎಂ.ಮುನಿರಾಜು, ಕುಲಸಚಿವರಾದ ಸಿ.ನಾಗರಾಜು, ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್.ಎಂ ಸಾಲಿ, ವಿತ್ತಾಧಿಕಾರಿಗಳಾದ ನಾಗರಾಜ, ವಿವಿಯ ಸಿಬ್ಬಂದಿ ವರ್ಗ ಹಾಗೂ ಅವರ ಹಿತೈಷಿಗಳು, ಬಂಧು-ಮಿತ್ರರು ಶುಭ ಕೋರಿದ್ದಾರೆ ಎಂದು ವಿವಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಅ.24 ರಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರೀಶೀಲನಾ ಸಭೆಬಳ್ಳಾರಿ 18:
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ‘ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ(ಕೋಟ್ಪಾ)-2003’ ರ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ಕುರಿತಂತೆ ಚರ್ಚಿಸಲು ಅ.24 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ “ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರೀಶೀಲನಾ ಸಭೆ” ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧ್ಯಕ್ಷರೂ ಆಗಿರುವ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ತಿಳಿಸಿದ್ದಾರೆ.
ಜವಾಹರ ನವೋದಯ ವಿದ್ಯಾಲಯ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಬಳ್ಳಾರಿ 18:
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯದ 9ನೇ ಮತ್ತು 11ನೇ ತರಗತಿಯ (2026-27ನೇ ಸಾಲಿಗಾಗಿ) ಪ್ರವೇಶ ಪರೀಕ್ಷೆಗೆ ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ಅಕ್ಟೋಬರ್ 23 ರ ವರೆಗೆ ವಿಸ್ತರಿಸಲಾಗಿದೆ.
ಆಸಕ್ತರು ಆನ್ ಲೈನ್ ವೆಬ್‌ಸೈಟ್: 9ನೇ ತರಗತಿಗಾಗಿ- ಣಣಠಿ://ಛಿಜಣ.ಟಿಛಿ.ಟಿ/2025/ಟಿಥ9/ಡಿಜರಣಡಿಚಿಣಠಛಿಟಛಿಋ/ಡಿಜರಣಡಿಚಿಣಠಛಿಟಛಿಋ ಮತ್ತು 11ನೇ ತರಗತಿಗಾಗಿ- ಣಣಠಿ://ಛಿಜಣ.ಟಿಛಿ.ಟಿ/2025/ಟಿಥ್ಷ11/ಡಿಜರಣಡಿಚಿಣಠಛಿಟಛಿಘಿಟ/ಡಿಜರಣಡಿಚಿಣಠಛಿಟಛಿಘಿಋ ಗೆ ಭೇಟಿ ನೀಡಬಹುದು ಎಂದು ವಿದ್ಯಾಲಯದ ಪ್ರಾಚಾರ್ಯ ಸುದೇಶ ಗೋಪಾಲ ಮಲಾಜುರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 