ಡಾ. ಶಿವಾನಂದ ಕೆಂಭಾವಿ, ಡಾ. ಸಂಗಮೇಶ್ವರ ದೊಡ್ಡಗೌಡ್ರ ಅವರಿಗೆ ಪಿಎಚ್‌ಡಿ ಪದವಿ
Dr. Shivananda Kembavi, Dr. Sangameshwara Dodda Gowdra has a Ph.D
ಲೋಕದರ್ಶನ ವರದಿ
ಡಾ. ಶಿವಾನಂದ ಕೆಂಭಾವಿ, ಡಾ. ಸಂಗಮೇಶ್ವರ ದೊಡ್ಡಗೌಡ್ರ ಅವರಿಗೆ ಪಿಎಚ್‌ಡಿ ಪದವಿ
ಹಾವೇರಿ 09: ನಗರದ ಸಿಂದಗಿ ಶಾಂತ ವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯರುಗಳಾದ ಡಾ. ಶಿವಾನಂದ ಕೆಂಭಾವಿ ಅವರಿಗೆ ಮೂಲವ್ಯಾಧಿಯ ಶಸ್ತ್ರಚಿಕಿತ್ಸೆಯ ನಂತರ ವೇದನೆಗಾಗಿ ಬಸ್ತಿ ಪ್ರಯೋಗ ವಿಷಯಕ್ಕೆ ಡಾ.ಸಿದ್ದನಗೌಡ. ಬಿಷ್ಟನಗೌಡ್ರ. ಅವರಿಗೆ ಅನಿದ್ರಾದಲ್ಲಿ ಶಿರೋಧಾರಾದಿಂದ ಚಿಕಿತ್ಸೆಯ ವಿಷಯಕ್ಕೆ ಹಾಗೂ ಡಾ. ಸಂಗಮೇಶ್ವರ ದೊಡ್ಡಗೌಡ್ರ ಅವರಿಗೆ ಮುಖಾರ್ಧಿತ ವಾತಕಾಯಿಲೆಯಲ್ಲಿ ಪಂಚ ಕರ್ಮದ ನಸ್ಯಚಿಕಿತ್ಸೆಯ ಪ್ರಯೋಗ ಎಂಬ ಎಲ್ಲ ಆಯುರ್ವೇದದ ವಿಷಯಗಳ ಮೇಲೆ ಈ ಮೂರು ಆಯುರ್ವೇದ ವೈದ್ಯ ಶಿಕ್ಷಕರು ತಮ್ಮ ಪಿಎಚ್‌ಡಿ ಪ್ರಬಂಧ ಮಂಡಿಸಿದಕ್ಕಾಗಿ ಗುಜರಾತಿನ ಪ್ರಸಿದ್ಧ ವಿಶ್ವ ವಿದ್ಯಾಲಯವಾದ ಪಾರುಲ್ ವಿಶ್ವ ವಿದ್ಯಾಲಯದಿಂದ ಪಿಎಚ್‌ಡಿ ಪದವಿಯನ್ನು ನೀಡಿ ಗೌರವಿಸಲಾಗಿದೆ.
ಪಿಎಚ್‌ಡಿ ಪದವಿ ಯುದ್ದಕ್ಕೂ ಸಂಶೋಧನೆಗೆ ಸಹಕಾರ ನೀಡಿದ ಡಾ.ಹೇಮಂತ ತೋಷಿಖಾನೆಡೀನ್. ಮುಖ್ಯಸ್ಥರು, ಪ್ರಾಂಶುಪಾಲರು ಪಾರುಲ್ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ವಡೋದರಾ ಮತ್ತು ಎಲ್ಲ ಪಾರುಲ್ ವಿಶ್ವ ವಿದ್ಯಾಲಯದ ಪದಾಧಿಕಾರಿಗಳಿಗೂ ಸದಾಚಿರ ಋಣಿ. ಈ ಸಾಧನೆಗೆ ಸಹಕಾರ ನೀಡಿದ ನಮ್ಮ ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್.ಎಸ್. ಪಟ್ಟಣ ಶೆಟ್ಟಿ, ಆಡಳಿತ ಅಧಿಕಾರಿಗಳಾದ ವ್ಹಿ. ಎಚ್ ಹಿರೇಮಠ ಮತ್ತು ಪ್ರಾಂಶುಪಾಲರಾದ ಡಾ.ಸಿ.ಎನ್.ಗೌಡರ. ಉಪ ಪ್ರಾಂಶುಪಾಲರಾದ ಡಾ.ಎಸ್.ಎಸ್.ಅಂಗಡಿ, ಹಿರಿಯ ವೈದ್ಯಡಾ. ಪ್ರಸನ್ನ ಪಾಟೀಲ ಅವರಿಗೂ ಮತ್ತು ಸಂಸ್ಥೆಯ ಎಲ್ಲಾ ವೈದ್ಯ ಶಿಕ್ಷಕ ವರ್ಗಕ್ಕೂ ಗೌರವ ಡಾಕ್ಟರೇಟ್ ಪದವಿ ಪಡೆದ ವೈಧ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 